ಹೊಸದಿಲ್ಲಿ: ಕಾಂಗ್ರೆಸ್‌ನಲ್ಲಿ ಅಧ್ಯಕ್ಷ ಹುದ್ದೆಯ ಬಗ್ಗೆ ಗೊಂದಲಗಳು ಮುಂದು ವರಿದಿದ್ದು, ಈ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳುವ ನಿಟ್ಟಿನಲ್ಲಿ ಆಗಸ್ಟ್ 10ರಂದು ಕಾರ್ಯಕಾರಿಣಿ ನಡೆಯಲಿದೆ. ಚುನಾವಣೆಯ ಸೋಲಿನ ಬಳಿಕ ಮೇ 25 ರಂದು ರಾಹುಲ್ ಗಾಂಧಿ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ ಅನಂತರ ಯಾರು ಅಧ್ಯಕ್ಷ ಹುದ್ದೆಗೆ ಏರುತ್ತಾರೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ಈಗಾಗಲೇ ಪಕ್ಷದ ಪ್ರಮುಖ ನಾಯಕರಾದ ಶಶಿ ತರೂರ್ ಮತ್ತು ಕರಣ್ ಸಿಂಗ್ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ಯಲ್ಲಿ ಕಾರ್ಯಕಾರಿಣಿ ಮಹತ್ವ ಪಡೆದಿದೆ.
ಆ.7ರಂದು ಸಂಸತ್ ಅಧಿವೇಶನ ಮುಗಿಯಲಿದ್ದು, ಅನಂತರ ಕಾರ್ಯಕಾರಿಣಿ ನಡೆಸ ಲಾಗುತ್ತದೆ. ರಾಹುಲ್ ರಾಜೀನಾಮೆ ಅನಂತರ ನಡೆಯುತ್ತಿರುವ ಮೊದಲ ಕಾರ್ಯ ಕಾರಿಣಿಯೂ ಇದಾಗಿದೆ. ಮೂಲಗಳ ಪ್ರಕಾರ ಹಿರಿಯ ಪ್ರಧಾನ ಕಾರ್ಯದರ್ಶಿಗೆ ಪಕ್ಷದ ದೈನಂದಿನ ಉಸ್ತುವಾರಿ ವಹಿಸಲಾಗುತ್ತದೆ ಹಾಗೂ ಹಂಗಾಮಿ ಅಧ್ಯಕ್ಷರನ್ನು ಸಭೆಯಲ್ಲಿ ನೇಮಕ ಮಾಡಲಾಗುತ್ತದೆ.
ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಮೊದಲು ಮಧ್ಯಾಂತರ ಅಧ್ಯಕ್ಷರನ್ನು ನೇಮಕ ಮಾಡಲಿ. ಅನಂತರ ಅಧ್ಯಕ್ಷರನ್ನು ಕಾರ್ಯ ಕರ್ತರೇ ಚುನಾಯಿಸಲಿ. ಕಾರ್ಯ ಕರ್ತರಿಂದ ಆಯ್ಕೆಯಾದ ನಾಯಕನು ಹೆಚ್ಚು ವಿಶ್ವಾಸಾರ್ಹ ನಾಗಿರುತ್ತಾನೆ.
– ಶಶಿ ತರೂರ್, ಕಾಂಗ್ರೆಸ್ ಸಂಸದ