Advertisement
ಅವರು ಇಲ್ಲಿನ ಶ್ರೀ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ವಿಧಾನಸಭಾ ಚುನಾವಣೆ ತಯಾರಿ ಬಗ್ಗೆ ಶನಿವಾರ ನಡೆದ ಕಾರ್ಯಕರ್ತರ ವಿಶೇಷ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ದೇಶದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಬಿಜೆಪಿ ಸದಾ ಸಿದ್ಧವಿದೆ. ಆದರೆ ಕಾಂಗ್ರೆಸ್ ಹಿಂದೇಟು ಹಾಕುತ್ತಿದ್ದು ಲೋಕಸಭೆ, ರಾಜ್ಯಸಭೆಗಳಲ್ಲಿ ಕೋಲಾಹಲ ವೆಬ್ಬಿಸುತ್ತಿದೆ. ಹಗರಣಗಳ ಆರಂಭ ಎಲ್ಲಿ ಆಗಿದೆ, ಇದರ ಹಿಂದೆ ಯಾರೆಲ್ಲ ಇದ್ದಾರೆ, ಸಾಲ ಕೊಟ್ಟವರು ಯಾರು, ಅದರ ಫಲಾನುಭವಿಗಳು ಯಾರು, ದೇಶದಿಂದ ಯಾವಾಗ ಪಲಾಯನ ಮಾಡಿದ್ದಾರೆ ಎಂದು ಜನತೆಗೆ ತಿಳಿಸಲು ಸಿದ್ಧ ಎಂದರು. ಕೇಂದ್ರದ ಯೋಜನೆಗಳ ಮಾಹಿತಿಯನ್ನು ಪ್ರತಿಯೊಬ್ಬರ ಮನೆಗೆ ತಲುಪುವಂತೆ ಮಾಡಬೇಕು. ದಿಲ್ಲಿಯಲ್ಲೂ, ಬೆಂಗಳೂರಿನಲ್ಲೂ ಬಿಜೆಪಿ ಸರಕಾರ ಇರಬೇಕು ಎಂದವರು ಹೇಳಿದರು.
ಕಾರ್ಯಕರ್ತರ ಸಭೆ ಉದ್ಘಾಟನೆ ಬಳಿಕ ಕೇಂದ್ರ ಸಚಿವರು ಮಾತನಾಡಿದರು. ಬಳಿಕ ಪತ್ರಕರ್ತರನ್ನು ಸಭಾಭವನದಿಂದ ಹೊರಗೆ ತೆರಳುವಂತೆ ತಿಳಿಸಲಾಯಿತು. ಬಳಿಕ ಬೂತ್ ಸಮಿತಿ ಸದಸ್ಯರು, ಶಕ್ತಿ ಕೇಂದ್ರದ 55, ಮಹಾ ಶಕ್ತಿಕೇಂದ್ರದ 8,241 ಬೂತ್ ಸಮಿತಿ ಅಧ್ಯಕ್ಷರು, ಪಂಚಾಯತ್ ಸಮಿತಿ ಸದಸ್ಯರಿಗೆ ಸುಮಾರು 2 ತಾಸುಗಳ ಕಾಲ ಕೇಂದ್ರ ಸಚಿವರ ನೇತೃತ್ವದಲ್ಲಿ ಬೈಠಕ್ ನಡೆಯಿತು.
Related Articles
ರಾಹುಲ್ ಗಾಂಧಿ, ಪ್ರಧಾನಿ ಮೋದಿಯವ ರನ್ನು ಅನುಕರಿಸಲು ಹೋಗುತ್ತಾರೆ. ರಾಜ್ಯಕ್ಕೂ ಬಂದಿದ್ದಾರೆ, ಅವರು ಕಾಲಿಟ್ಟ ಕಡೆಯೆಲ್ಲ ಕಾಂಗ್ರೆಸ್‌ಗೆ ಸೋಲಾಗಲಿದೆ. ಮೋದಿ ಕನ್ನಡ ದಲ್ಲಿ ಮಾತನಾಡುತ್ತಿದ್ದಾರೆಂದು ರಾಹುಲ್ ಬಸವಣ್ಣನ ವಚನವನ್ನು ಅಸಂಬದ್ಧವಾಗಿ ಉಲ್ಲೇಖೀಸಿದ್ದು ಮೊಬೈಲ್‌ಗಳಲ್ಲಿ ಹರಿದಾಡು ತ್ತಿದೆ. ರಾಹುಲ್ ತಪ್ಪಿದ ವೇಳೆ ಮುಖ್ಯಮಂತ್ರಿ ಗಳೂ ಸರಿಪಡಿಸುವ ಕಾರ್ಯ ನಡೆಸಲಿಲ್ಲ ಎಂದು ಆಯನೂರು ಮಂಜುನಾಥ್ ತಿಳಿದರು.
Advertisement