Advertisement
ಅಲ್ಪಸಂಖ್ಯಾತರ ಮತಗಳು ನಿರ್ಣಾಯಕ. ಆದರೆ, ಕಾಂಗ್ರೆಸ್ನ ಒಳಜಗಳದಿಂದಾಗಿ ಈ ಕ್ಷೇತ್ರ ಕಳೆದ ಬಾರಿ “ಕೈ’ ತಪ್ಪಿತ್ತು. ಹೀಗಾಗಿ ಶತಾಯ ಗತಾಯ ಮರಳಿ ಗೆಲುವು ಸಾಧಿಸಲು ಕಾಂಗ್ರೆಸ್ ತಂತ್ರಗಾರಿಕೆ ಶುರು ಮಾಡಿದ್ದರೆ, ಮತ್ತೂಮ್ಮೆ ಗೆಲ್ಲಲೇಬೇಕು ಎಂಬ ಧಾವಂತದಲ್ಲಿ ಬಿಜೆಪಿಗೆ ಹಾರಿದ್ದಾರೆ ಜೆಡಿಎಸ್ ಶಾಸಕರಾಗಿದ್ದ ಡಾ.ಶಿವರಾಜ ಪಾಟೀಲ.
Related Articles
ಧೂಳಿನ ಸಮಸ್ಯೆಯಿಂದ ಪ್ರಯಾಣಿಕರು ಸಾಕಷ್ಟು ಪ್ರಯಾಸ ಪಡುವಂತಾಗುತ್ತಿತ್ತು. ಬಿಸಿಲಿನ ಪ್ರಮಾಣ ಹೆಚ್ಚಾಗಿರುವುದರಿಂದ ಭೂಮಿ ತೇವ ಕಳೆದುಕೊಂಡು ವಾಹನಗಳ ಹಿಂದೆಯೆಲ್ಲ ಧೂಳು ಏಳುವುದು ಸಹಜವಾಗಿತ್ತು. ಆದರೆ, ಮಾಜಿ ಶಾಸಕರ ಅವಧಿಯಲ್ಲಿ ಕೆಲವೆಡೆ ಸಿಸಿ ರಸ್ತೆಗಳನ್ನಾಗಿ ನಿರ್ಮಿಸಿದ್ದು, ಆ ಸಮಸ್ಯೆಯಿಂದ ಕೊಂಚ ಮಟ್ಟಿಗಾದರೂ ತೊಂದರೆ ತಪ್ಪಿದಂತಾಗಿದೆ. ಆದರೆ, ಇನ್ನು ಸಾಕಷ್ಟು ಕಡೆ ರಸ್ತೆ ನಿರ್ಮಾಣವಾಗಿಲ್ಲ.
Advertisement
ಕ್ಷೇತ್ರದ ದೊಡ್ಡ ಸಮಸ್ಯೆ?ನಗರದಲ್ಲಿ ಬೃಹತ್ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಆದರೆ, ಅವು ಜನರಿಗೆ ಅನುಕೂಲ ಕಲ್ಪಿಸುವ ಬದಲು ತೊಂದರೆ ಕೊಟ್ಟಿದ್ದೇ ಹೆಚ್ಚು ಎಂಬುದು ಸತ್ಯ. ಕಾಮಗಾರಿ ನೆಪದಲ್ಲಿ ಕಂಡಕಂಡಲ್ಲಿ ರಸ್ತೆ ಅಗೆಯುವುದು, ಅವೈಜ್ಞಾನಿಕವಾಗಿ ಕಾಮಗಾರಿ ನಡೆಸುವ ಮೂಲಕ ಜನರಿಗೆ ತೊಂದರೆಯಾಗಿದ್ದೇ ಹೆಚ್ಚು. 102 ಕೋಟಿ ರೂ. ವೆಚ್ಚದಲ್ಲಿ ನಾಲ್ಕು ವರ್ಷಗಳ ಹಿಂದೆ ಶುರುವಾದ ಒಳಚರಂಡಿ ಕಾಮಗಾರಿಗೆ ಇಂದಿಗೂ ಮೋಕ್ಷ ಸಿಕ್ಕಿಲ್ಲ. ಶಾಸಕರು ಏನಂತಾರೆ?
1400 ಕೋಟಿ ರೂ.ಗೂ ಅಧಿಕ ಅನುದಾನ ತಂದಿದ್ದು, ಸಾಕಷ್ಟು ಯೋಜನೆಗಳು ಪೂರ್ಣಗೊಂಡಿವೆ. ಕೆಲವೊಂದು ಮುಗಿಯುವ ಹಂತದಲ್ಲಿವೆ. 1050 ಬಡ ಜನರಿಗೆ ನಿವೇಶನ, 1500 ಜನರಿಗೆ ವಸತಿ ಸೌಲಭ್ಯ ಕಲ್ಪಿಸಲಾಗಿದೆ. 102 ಕೋಟಿ ರೂ. ಮೊತ್ತದ ಯುಜಿಡಿ ಕಾಮಗಾರಿ ಮತ್ತು 120 ಕೋಟಿ ವೆಚ್ಚದ ನೀರಿನ ಯೋಜನೆ ಕೂಡ ಮುಗಿಯುವ ಹಂತದಲ್ಲಿದೆ.
ಡಾ| ಶಿವರಾಜ ಪಾಟೀಲ ಕ್ಷೇತ್ರ ಮಹಿಮೆ
ಪ್ರತಿ ವರ್ಷ ಕಾರಹುಣ್ಣಿಮೆ ಸಂದರ್ಭದಲ್ಲಿ ಮುನ್ನೂರು ಕಾಪು ಸಮಾಜದಿಂದ ನಗರದ ಎಪಿಎಂಸಿಯಲ್ಲಿ ನಡೆಯುವ ಎತ್ತುಗಳಿಂದ ಭಾರದ ಕಲ್ಲು ಎಳೆಯುವ ಸ್ಪರ್ಧೆ ಆಕರ್ಷಣೀಯ. ರಾಜ್ಯ ಮಾತ್ರವಲ್ಲದೇ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಮತ್ತು ತಮಿಳುನಾಡಿನಿಂದಲೂ ಭಾರಿ ಗಾತ್ರದ ಎತ್ತುಗಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತವೆ. ರೈತಾಪಿ ವರ್ಗಕ್ಕೆ ಅದೊಂದು ಸಂಭ್ರಮದ ಆಚರಣೆಯಾಗಿರುತ್ತದೆ. ಪ್ರತಿಪಕ್ಷದಲ್ಲಿದ್ದರೂ ನಗರ ಶಾಸಕರಾಗಿದ್ದ ಡಾ| ಶಿವರಾಜ ಪಾಟೀಲ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಸಿಸಿ ರಸ್ತೆ ನಿರ್ಮಿಸುವ ಮೂಲಕ ನಗರದ ಧೂಳಿನ ಸಮಸ್ಯೆ ಕೊಂಚಮಟ್ಟಿಗೆ ನಿವಾರಿಸಿದ್ದಾರೆ.
ರವಿಕುಮಾರ್ ನಗರದಲ್ಲಿ ಧೂಳಿನ ಸಮಸ್ಯೆಯಿಂದ ಜನ ಬೇಸತ್ತಿದ್ದಾರೆ. ಸ್ವತ್ಛತೆ ಮತ್ತು ಧೂಳು ಮುಕ್ತಗೊಳಿಸಿದರೆ ಅರ್ಧದಷ್ಟು ಪ್ರಗತಿ
ಸಾಧಿಸಿದಂತೆ. ಪಾಟೀಲರು ಆ ನಿಟ್ಟಿನಲ್ಲಿ ಹೆಚ್ಚು ಒತ್ತು ನೀಡಬೇಕಿತ್ತು.
ಶಶಿಧರ ಸ್ವಾಮಿ ಹೊಸಬರಿಗೆ ಅವಕಾಶ ನೀಡುವ ಮೂಲಕ ಕ್ಷೇತ್ರದ ಮತದಾರರು ಅಭಿವೃದ್ಧಿ ನಿರೀಕ್ಷಿಸಿದ್ದರು. ನಗರದ ಸಾಕಷ್ಟು
ಬಡಾವಣೆಗಳಲ್ಲಿ ಮೂಲ ಸೌಕರ್ಯಗಳೇ ಕಲ್ಪಿಸಿಲ್ಲ. ಸ್ಲಂಗಳ ಅಭಿವೃದ್ಧಿ ಕಡೆಗಣಿಸಲಾಗಿದೆ.
ಸಂತೋಷಕುಮಾರ ಕಳೆದ ಐದು ವರ್ಷಗಳ ಹಿಂದೆ ರಾಯಚೂರು ಹೇಗಿತ್ತೋ ಇಂದಿಗೂ ಹಾಗೇ ಇದೆ. ಯಾವ ಬದಲಾವಣೆಯೂ ಆಗಿಲ್ಲ. ನಗರದಲ್ಲಿ ಸಮಸ್ಯೆಗಳು ನಿವಾರಣೆಯಾಗಿಲ್ಲ. ಪಾಟೀಲರ ಅವಧಿಯಲ್ಲಿ ಆರಂಭವಾದ ಕೆಲಸಗಳು ಪೂರ್ಣಗೊಂಡಿಲ್ಲ.
ಲೋಕೇಶ