Advertisement

ಕಾಂಗ್ರೆಸ್‌ ಯಾವ ಅಭಿವೃದ್ಧಿಯನ್ನೂ ಮಾಡಿಲ್ಲ: ಜೆಪಿ ನಡ್ಡಾ

06:29 PM Nov 17, 2021 | Team Udayavani |

ನವದೆಹಲಿ: 70 ವರ್ಷಗಳ ಕಾಲ ಆಡಳಿತದಲ್ಲಿದ್ದ ಕಾಂಗ್ರೆಸ್‌ ಪಕ್ಷ ಜನ ಸಾಮಾನ್ಯರ ಅಭಿವೃದ್ಧಿಗಾಗಿ ಏನನ್ನೂ ಮಾಡಿಲ್ಲವೆಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹೇಳಿದ್ದಾರೆ.

Advertisement

ನವದೆಹಲಿಯ ಮಾಡೆಲ್‌ ಟೌನ್‌ನಲ್ಲಿ ಸಾರ್ಥಕ ಚೌಪಲ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, “70 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಕಾಂಗ್ರೆಸ್‌ ಮತಕ್ಕಾಗಿ ಜನರಿಗೆ ಬರೀ ಬಿಟ್ಟಿ ಕೊಡುಗೆಗಳನ್ನು ಕೊಟ್ಟಿತು. ಅವರ ಅಭಿವೃದ್ಧಿಗಾಗಿ ಏನನ್ನೂ ಮಾಡಲಿಲ್ಲ.

ಜನರಿಗೆ ಹಣ ಬೇಡ ಬದಲಾಗಿ ಅಭಿವೃದ್ಧಿ ಬೇಕು. ಆ ಕೆಲಸವನ್ನು ಬಿಜೆಪಿ, ಉಜ್ವಲ ಯೋಜನೆ, ಆಯುಷ್ಮಾನ್‌ ಭಾರತ ಆರೋಗ್ಯ ವಿಮೆ ಸೇರಿ ಹಲವು ಯೋಜನೆಗಳ ಮೂಲಕ ಮಾಡುತ್ತಿದೆ’ ಎಂದಿದ್ದಾರೆ.

ಇದನ್ನೂ ಓದಿ:ಪ್ರಧಾನಿ ಮೋದಿ ಕೆಲಸಕ್ಕೆ ವಿಶ್ವದ ಮೆಚ್ಚುಗೆ

Advertisement

Udayavani is now on Telegram. Click here to join our channel and stay updated with the latest news.

Next