Advertisement

ಬಿಜೆಪಿ ವಿರುದ್ಧ ಧ್ರುವನಾರಾಯಣ ವಾಗ್ಧಾಳಿ

11:52 PM May 11, 2022 | Team Udayavani |

ಉಡುಪಿ: ಬಿಜೆಪಿಯ ಅಂಗಳದಲ್ಲಿ ದೊಡ್ಡ ಹೆಗ್ಗಣ ಬಿದ್ದಿದ್ದರೂ ಬಿಜೆಪಿ ರಾಜ್ಯಾಧ್ಯಕ್ಷರು ಮಾತ್ರ ಕಾಂಗ್ರೆಸ್‌ ಕಡೆಗೆ ಕೈ ತೋರಿಸುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಪತ್ರಿಕಾ ಗೋಷ್ಠಿಯಲ್ಲಿ ಆರೋಪಿಸಿದರು..

Advertisement

ಕಳಂಕ ರಹಿತ ರಾಜಕಾರಣಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷರು ಅರ್ಕಾವತಿ ಬಡಾವಣೆ ನೋಟಿಫಿಕೇಶನ್‌ನಲ್ಲಿ ಅಕ್ರಮ ಮಾಡಿದ್ದಾರೆ ಎಂದು ಪದೇಪದೆ ಆರೋಪಿಸುತ್ತಿದ್ದಾರೆ. ಬಿಜೆಪಿ ಸರಕಾರ ಬಂದು 3 ವರ್ಷ ಕಳೆದರೂ ಯಾಕೆ ತನಿಖೆ ಮಾಡಿಲ್ಲ ಎಂದು ಪ್ರಶ್ನಿಸಿದರು.

ಬಿಜೆಪಿಗರ ಹಗಲು ಕನಸು
ಕಾಂಗ್ರೆಸ್‌ ಮುಕ್ತ ಕರ್ನಾಟಕ ಬಿಜೆಪಿಗರ ಹಗಲು ಕನಸು. ಬಿಜೆಪಿಯ ರಾಜ್ಯಾಧ್ಯಕ್ಷರು ಅಸಮರ್ಥರಾಗಿದ್ದು, ಬೇಜಾವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. ಬಿಜೆಪಿ ನಾಯಕರಾದ ಅಮಿತ್‌ ಶಾ, ಬಿ.ಎಸ್‌. ಯಡಿಯೂರಪ್ಪ, ಜನಾರ್ದನ ರೆಡ್ಡಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮೊದಲಾದವರು ಜೈಲಿಗೆ ಹೋಗಿಲ್ಲವೆ? ಸಚಿವರಾಗಿದ್ದ ಎಚ್‌. ನಾಗೇಶ್‌ ಭ್ರಷ್ಟಾಚಾರದ ಆರೋಪದಡಿ ರಾಜೀನಾಮೆ ನೀಡಿದ್ದಾರೆ. ಶೇ. 40ರಷ್ಟು ಕಮಿಷನ್‌ ಆರೋಪದಲ್ಲಿ ಸಚಿವ ಈಶ್ವರಪ್ಪ ರಾಜೀನಾಮೆ ನೀಡಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಸಚಿವ ರಮೇಶ್‌ ಜಾರಕಿಹೊಳಿ ರಾಜೀನಾಮೆ ನೀಡಿದ್ದಾರೆ. ಹೀಗಿರುವಾಗ ಕಾಂಗ್ರೆಸ್‌ ನಾಯಕರ ಬಗ್ಗೆ ಮಾತನಾಡುವ ನೈತಿಕತೆ ಅವರಿಗೆ ಇಲ್ಲ ಎಂದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅಶೋಕ ಕುಮಾರ್‌ ಕೊಡವೂರು, ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ, ಮಾಜಿ ಶಾಸಕ ಯು.ಆರ್‌. ಸಭಾಪತಿ, ವಕ್ತಾರರಾದ ಭಾಸ್ಕರ ರಾವ್‌ ಕಿದಿಯೂರು, ಬಿಪಿನ್‌ ಚಂದ್ರಪಾಲ್‌ ನಕ್ರೆ, ಪ್ರಸಾದ್‌ ಕಾಂಚನ್‌, ಬ್ಲಾಕ್‌ ಅಧ್ಯಕ್ಷರಾದ ರಮೇಶ್‌ ಕಾಂಚನ್‌, ದಿನಕರ ಹೇರೂರು, ಪ್ರಮುಖರಾದ ವೆರೋನಿಕಾ ಕರ್ನೆಲಿಯೋ, ಹರೀಶ್‌ ಕಿಣಿ, ಅಬೀಬ್‌ ಅಲೀ, ಕಿಶನ್‌ ಹೆಗ್ಡೆ ಕೊಳ್ಕೆಬೈಲ್‌, ಬಿ. ನರಸಿಂಹ ಮೂರ್ತಿ, ಪ್ರಖ್ಯಾತ ಶೆಟ್ಟಿ, ದೀಪಕ್‌ ಕೋಟ್ಯಾನ್‌, ಅಣ್ಣಯ್ಯ ಸೆರಿಗಾರ್‌ ಉಪಸ್ಥಿತರಿದ್ದರು.

ಇದನ್ನೂ ಓದಿ:ಕಟೀಲು ದೇವಸ್ಥಾನ: ಶಾಂತಿ ವಿಲಯದಾರ ಕರ್ತವ್ಯಕ್ಕೆ ಹಾಜರು: ಪೂಜೆ ವಿಳಂಬ

Advertisement

ಆಹ್ವಾನಿಸಿದರೂ ಬರುತ್ತಿರಲಿಲ್ಲ
ಕಾಂಗ್ರೆಸ್‌ ಪಕ್ಷ ಪ್ರಮೋದ್‌ ಮಧ್ವರಾಜ್‌ ಸಹಿತವಾಗಿ ಅವರ ಇಡೀ ಕುಟುಂಬಕ್ಕೆ ಎಲ್ಲವನ್ನು ನೀಡಿದೆ. ಅವರ ಕುಟುಂಬದಲ್ಲಿ ಎಲ್ಲರೂ ಅಧಿಕಾರ ಪಡೆದಿದ್ದಾರೆ. ಜಿಲ್ಲಾ ಕಾಂಗ್ರೆಸ್‌ನಲ್ಲಿ ಉಸಿರುಗಟ್ಟಿಸುವ ವಾತಾವರಣ ಇತ್ತು ಎಂಬ ಆರೋಪ ಸತ್ಯಕ್ಕೆ ದೂರವಾದುದು. ಮೂರು ವರ್ಷದಿಂದ ನಾವು ಎಷ್ಟು ಕಾರ್ಯಕ್ರಮಗಳಿಗೆ ಆಹ್ವಾನಿಸಿದರೂ ಬರುತ್ತಿರಲಿಲ್ಲ. ಪಕ್ಷಕ್ಕೆ ಕಾರ್ಯಕರ್ತರೇ ಬಲ. ಇನ್ನಷ್ಟು ಬಲಿಷ್ಠವಾಗಿ ಪಕ್ಷ ಸಂಘಟನೆ ಮಾಡಲಿದ್ದೇವೆ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅಶೋಕ್‌ ಕುಮಾರ್‌ ಕೊಡವೂರು ಹೇಳಿದರು.

ಪ್ರಮೋದರಿಂದ ಪಕ್ಷಕ್ಕೆ ದ್ರೋಹ
ಪ್ರಮೋದ್‌ ಮಧ್ವರಾಜರಿಗೆ ಕಾಂಗ್ರೆಸ್‌ ಪಕ್ಷ ಅತ್ಯಂತ ಅಲ್ಪಾವಧಿಯಲ್ಲಿ ಹೆಚ್ಚು ಹುದ್ದೆಗಳನ್ನು ನೀಡಿದೆ. ಮೊದಲ ಬಾರಿಗೆ ಶಾಸಕರಾಗಿದ್ದ ಅವರನ್ನು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ, ಸಚಿವ ಸ್ಥಾನ, ಕ್ಯಾಬಿನೆಟ್‌ ದರ್ಜೆ ಹೀಗೆ ಎಲ್ಲವನ್ನು ನೀಡಲಾಗಿತ್ತು. ಕೆಪಿಸಿಸಿ ಉಪಾಧ್ಯಕ್ಷರನ್ನಾಗಿಯೂ ನೇಮಿಸಲಾಗಿತ್ತು. ಅವರ ಪ್ರಮುಖ ಎರಡು ಬೇಡಿಕೆಯಂತೆ ಬ್ಲಾಕ್‌ ಕಾಂಗ್ರೆಸ್‌ ಮತ್ತು ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಅವರು ಸೂಚಿಸಿದ ವ್ಯಕ್ತಿಗಳನ್ನೇ ನೇಮಿಸಲಾಗಿತ್ತು. ಎಲ್ಲವನ್ನು ನೀಡಿದ ಪಕ್ಷಕ್ಕೆ ಏನೂ ಹೇಳದೆ ಹೋಗಿದ್ದಾರೆ. ಅವರದ್ದು ಅವಕಾಶವಾದ ರಾಜಕಾರಣ. ಉಡುಪಿಯಲ್ಲಿ ತಳಮಟ್ಟದಿಂದ ಪಕ್ಷ ಸಂಘಟನೆ ಮಾಡಲಿದ್ದೇವೆ ಎಂದು ಧ್ರುವನಾರಾಯಣ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next