Advertisement

ಜಿಎಸ್‌ಟಿ ವಿಶೇಷ ಅಧಿವೇಶನದಲ್ಲಿ ಪಾಲ್ಗೊಳ್ಳುವುದಿಲ್ಲ: ಕಾಂಗ್ರೆಸ್‌

03:58 PM Jun 29, 2017 | Team Udayavani |

ಹೊಸದಿಲ್ಲಿ : ಜಿಎಸ್‌ಟಿಗೆ ಚಾಲನೆ ನೀಡುವ ಸಂಸತ್ತಿನ ಜೂನ್‌ 30ರ ಮಧ್ಯರಾತ್ರಿಯ ವಿಶೇಷ ಅಧಿವೇಶನದಲ್ಲಿ ತಾನು ಪಾಲ್ಗೊಳ್ಳುವುದಿಲ್ಲ  ಎಂದು ವಿರೋಧ ಪಕ್ಷ ಕಾಂಗ್ರೆಸ್‌ ಇಂದು ಗುರುವಾರ ಹೇಳಿದೆ. 

Advertisement

ಕಾಂಗ್ರೆಸ್‌ನ ಹಿರಿಯ ವಕ್ತಾರ ಸತ್ಯವ್ರತ ಚತುರ್ವೇದಿ ಅವರು ಈ ವಿಷಯವನ್ನು ಮಾಧ್ಯಮಕ್ಕೆ ತಿಳಿಸಿದರು. ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರನ್ನು ಈ ಕುರಿತಾಗಿ ಭೇಟಿಯಾಗಿ ಕಾಂಗ್ರೆಸ್‌ ನಿಲುವನ್ನು ನಿರ್ಧರಿಸಿದರೆಂದು ಸತ್ಯವ್ರತ ಹೇಳಿದರು. 

ತೃಣಮೂಲ ಕಾಂಗ್ರೆಸ್‌ ನಿನ್ನೆ ಬುಧವಾರವೇ ತಾನು ಜಿಎಸ್‌ಟಿ ಕುರಿತಾದ  ಜೂ.30ರ ಮಧ್ಯ ರಾತ್ರಿ ವಿಶೇಷ ಸಂಸತ್‌ ಅಧಿವೇಶನವನ್ನು ಬಹಿಷ್ಕರಿಸುವುದಾಗಿ ಹೇಳಿತ್ತು. ಇದೀಗ ಕಾಂಗ್ರೆಸ್‌ ಕೂಡ ತೃಣಮೂಲ ಪಕ್ಷದ ಹಾದಿಯಲ್ಲಿ ಸಾಗಿದೆ. 

ಮೋದಿ ಸರಕಾರ ಜಿಎಸ್‌ಟಿ ಯನ್ನು ಯಾವುದೇ ಸರಿಯಾದ ಸಿದ್ಧತೆಗಳಿಲ್ಲದೆ ತರಾತುರಿಯಲ್ಲಿ  ಅನುಷ್ಠಾನಗೊಳಿಸುತ್ತಿದೆ ಎಂದು ಆರೋಪಿಸಿದ್ದ  ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಜಿಎಸ್‌ಟಿ ಅನುಷ್ಠಾನಕ್ಕೆ ನಮಗೆ ಇನ್ನೂ ಆರು ತಿಂಗಳ ಕಾಲಾವಕಾಶ ಅಗತ್ಯವಿದೆ ಎಂದು ಹೇಳಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next