Advertisement
ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ಮುಂದುವರಿಸಿದರಾದರೂ ಅದರನಡುವೆಯೇ ಪ್ರತಿಪಕ್ಷದ ನಾಯಕ ಜಗದೀಶ ಶೆಟ್ಟರ್ ಮಾತನಾಡಿ, ಕಾಂಗ್ರೆಸ್ ಹೈಕಮಾಂಡ್‌ಗೆ ಕಪ್ಪ ನೀಡಿರುವ ಮಾಹಿತಿಯಿರುವ ಡೈರಿ ಬಗ್ಗೆ ಸದನದಲ್ಲಿ ಮಾತನಾಡಲು ಅವಕಾಶ ಕೋರಿದ್ದೆವು.
Related Articles
ವಿಷಯಗಳಿವೆ. ಅದರ ಬದಲು ಉಪಯೋಗಕ್ಕೆ ಬಾರದ ಡೈರಿ ವಿಷಯ ಇಟ್ಟುಕೊಂಡು ಧರಣಿ ಮಾಡುತ್ತಿರುವುದಕ್ಕೆ
ರಾಜ್ಯದ ಜನತೆ ಉಗಿಯುತ್ತಿದ್ದಾರೆ. ಅದಕ್ಕೆ ಧರಣಿ ವಾಪಸ್ ಪಡೆಯುತ್ತಿದ್ದೀರಿ ಎಂದು ಕೆಣಕಿದರು.
Advertisement
ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಬಿಜೆಪಿ ವಿರುದ್ದ ವಾಗ್ಧಾಳಿ ನಡೆಸಿ, ಕೋಟಿ ಕೋಟಿ ಲೂಟಿ ಮಾಡಿದವರು ನೀವು,ನಿಮ್ಮಿಂದ ಪಾಠ ಕಲಿಯಬೇಕಿಲ್ಲ. ಶೆಟ್ಟರ್ ನೇತೃತ್ವದಲ್ಲಿ ಬಿಜೆಪಿ ಪ್ರತಿಪಕ್ಷದ ಸ್ಥಾನವನ್ನೂ ಪಡೆಯುವ ಅರ್ಹತೆ ಕಳೆದುಕೊಂಡಿತು. ಯಡಿಯೂರಪ್ಪ ಜೈಲಿಗೆ ಹೋಗಿ ಬಂದವರು. ಭೂತದ ಬಾಯಲ್ಲಿ ಭಗವದ್ಗೀತೆ ಕೇಳಬೇಕಾ? ನಿಮ್ಮ ಯೋಗ್ಯತೆಯನ್ನು ಜನರ ಮುಂದಿಡುತ್ತೇವೆಂದು ವಾಗ್ಧಾಳಿ ನಡೆಸಿದರು. ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ ಜಗದೀಶ ಶೆಟ್ಟರ್, ಸದನದಲ್ಲಿ ಡೈರಿ ವಿಷಯ ಚರ್ಚೆಗೆ ಅವಕಾಶ ನೀಡದಿದ್ದರೇನಂತೆ, ನಿಮ್ಮ ಬಣ್ಣವನ್ನು ಜನರ ಎದುರು
ಬಯಲು ಮಾಡುತ್ತೇವೆ. ಸದನದ ಹೊರಗೆ ಹೋರಾಟ ಮುಂದುವರಿಸುತ್ತೇವೆ. ಬೇರೆ ವಿಷಯಗಳ ಚರ್ಚೆ ಮಾಡಿ,
ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸುತ್ತೇವೆಂದು ಧರಣಿಯನ್ನು ವಾಪಸ್ ಪಡೆದುಕೊಂಡರು. ಈ ನಡುವೆ ಕಾಂಗ್ರೆಸ್ ಸದಸ್ಯರು ಬಿಜೆಪಿಯ ಸಹರಾ ಮತ್ತು ಲೆಹರ್‌ಸಿಂಗ್ ಡೈರಿ ಕುರಿತ ಭಿತ್ತಿ ಪತ್ರಗಳನ್ನು ಸದನದಲ್ಲಿ ತಂದು ಪ್ರದರ್ಶಿಸಿದರು. ಪ್ರತಿಭಟನೆ ದಿಢೀರ್ ವಾಪಸ್: ಬಿಜೆಪಿ ಕೆಲ ಶಾಸಕರಲ್ಲಿ ಅಸಮಾಧಾನ
ಡೈರಿ ವಿಚಾರದಲ್ಲಿ ಆರಂಭಿಸಿದ್ದ ಪ್ರತಿಭಟನೆ ದಿಢೀರ್ ವಾಪಸ್ ಪಡೆದ ಬಗ್ಗೆಯೂ ಬಿಜೆಪಿಯ ಕೆಲವು ಶಾಸಕರಲ್ಲಿ
ಅಸಮಾಧಾನ ಉಂಟಾಗಿದೆ ಎನ್ನಲಾಗಿದೆ. ಪ್ರತಿಪಕ್ಷ ನಾಯಕರು ಶಾಸಕರ ಜತೆ ಚರ್ಚಿಸದೆ ಏಕಾಏಕಿ ನಿಲುವು
ಪ್ರಕಟಿಸಿದರು. ಸೋಮವಾರವೂ ಪ್ರತಿಭಟನೆ ಮುಂದುವರಿಸಿ ಸ್ಪೀಕರ್ ಕೊಠಡಿಯಲ್ಲಿ ಸಂಧಾನ ಸಭೆ ಕರೆದಾಗ ಸಮ್ಮತಿ
ಸೂಚಿಸಿ, ನಂತರ ಪ್ರತಿಭಟನೆ ಕೈ ಬಿಟ್ಟಿದ್ದರೆ ನಮಗೂ ಬೆಲೆ ಇರುತ್ತಿತ್ತು ಎಂದು ಅಸಮಾಧಾನಿತ ಶಾಸಕರು ಅಭಿಪ್ರಾಯ
ವ್ಯಕ್ತಪಡಿಸಿದರು ಎನ್ನಲಾಗಿದೆ. ಒಂದೊಮ್ಮೆ ಪ್ರತಿಪಕ್ಷ ಬಿಜೆಪಿ ಡೈರಿ ವಿಚಾರ ಮುಂದಿಟ್ಟುಕೊಂಡು ಸೋಮವಾರವೂ
ಪ್ರತಿಭಟನೆ, ಧರಣಿ ಮುಂದುವರಿಸಿದರೆ ಗದ್ದಲದ ನಡುವೆಯೇ ಮೂರು ತಿಂಗಳ ಲೇಖಾನುದಾನಕ್ಕೆ ಒಪ್ಪಿಗೆ ಪಡೆದು
ಬುಧವಾರ ಸದನವನ್ನು ಅನಿರ್ದಿಷ್ಟ ಕಾಲ ಮುಂದೂಡುವ ಮೂಲಕ, ಬರದ ಬಗ್ಗೆ ಚರ್ಚೆಗೆ ಅವಕಾಶ ನೀಡದ ಬಿಜೆಪಿ
ವಿರುದ್ಧ ಜನಾಕ್ರೋಶ ವ್ಯಕ್ತವಾಗುವಂತೆ ನೋಡಿಕೊಳ್ಳಲು ಆಡಳಿತಾರೂಢ ಕಾಂಗ್ರೆಸ್ ಚಿಂತನೆ ನಡೆಸಿತ್ತು. ಇದರ ಸುಳಿವರಿದ ಬಿಜೆಪಿ, ಡೈರಿ ವಿಚಾರ ಕೈ ಬಿಡುವ ತೀರ್ಮಾನಕ್ಕೆ ಬಂದಿತು ಎಂದು ಹೇಳಲಾಗಿದೆ. ಪರಿಷತ್‌ನಲ್ಲೂ ಮಾತಿನ ಸಮರ
ವಿಧಾನಪರಿಷತ್ತು: ವಿಧಾನಸಭೆ ಕಲಾಪ ಬಲಿ ಪಡೆದುಕೊಂಡಿದ್ದ “ಡೈರಿ’ ಪ್ರಕರಣ ಸೋಮವಾರ ಮೇಲ್ಮನೆಯಲ್ಲೂ ಪ್ರಸ್ತಾಪವಾಗಿ ಕೆಲ ಕಾಲ ಕೋಲಾಹಲಕ್ಕೆ ಕಾರಣವಾಗಿದ್ದಲ್ಲದೇ ಲೆಹರ್‌ಸಿಂಗ್‌ಗೆ ಮಾತನಾಡಲು ಸಭಾಪತಿ ಅವಕಾಶ ನಿರಾಕರಿಸಿದ್ದಕ್ಕೆ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದ ಪ್ರಸಂಗವೂ ನಡೆಯಿತು. ಬಜೆಟ್ ಮೇಲಿನ ಚರ್ಚೆ ವೇಳೆ ಮಾತನಾಡುತ್ತ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ, ಆಡಳಿತ ಪಕ್ಷದ ಭ್ರಷ್ಟಾಚಾರದ ಬಗ್ಗೆ ಹೇಳುತ್ತ ಡೈರಿ ವಿಷಯ ಪ್ರಸ್ತಾಪಿಸಿದರು. ಇದಕ್ಕೆ “ಯಾವ ಡೈರಿ’ ಎಂದು ಕಾಂಗ್ರೆಸ್ ಸದಸ್ಯರು ಛೇಡಿಸಿದರು. ಸಿಟ್ಟಿಗೆದ್ದ ಈಶ್ವರಪ್ಪ ಹೆಸರು ಹೇಳಬೇಕಾ “ಗೋವಿಂದರಾಜ್ ಡೈರಿ’ ಎಂದು ಟಾಂಗ್ ಕೊಟ್ಟರು. ಸಿಟ್ಟಿಗೆದ್ದ ಕಾಂಗ್ರೆಸ್ ಸದಸ್ಯರು ಸಹಾರಾ ಡೈರಿ, ಲೇಹರ್‌ಸಿಂಗ್ ಡೈರಿ ಬಗ್ಗೆಯೂ ಹೇಳಿ ಎಂದು ಕೆಣಕಿದರು. ಈ ವೇಳೆ ಬಿಜೆಪಿ-ಕಾಂಗ್ರೆಸ್
ಸದಸ್ಯರ ನಡುವೆ ಜಟಾಪಟಿ ನಡೆಯಿತು. ಈ ವೇಳೆ ಬಿಜೆಪಿ ಸದಸ್ಯ ಲೇಹರ್ ಸಿಂಗ್ ಮಧ್ಯ ಪ್ರವೇಶಿಸಿ, ನನ್ನ ಹೆಸರು ಪ್ರಸ್ತಾಪವಾಗಿದೆ. ಹಾಗಾಗಿ ನನಗೆ ಮಾತನಾಡಲು ಅವಕಾಶ ಕೊಡಬೇಕೆಂದು ಮನವಿ ಮಾಡಿದರು. ಆದರೆ,
ಉಪಸಭಾಪತಿ ಮರಿತಿಬ್ಬೇಗೌಡ ಮಾತನಾಡಲು ಅವಕಾಶ ನೀಡುವುದಿಲ್ಲ ಎಂದು ಹೇಳಿದರು. ಇದಕ್ಕೆ ಅಸಮಧಾನಗೊಂಡ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದರು. ಈ ವೇಳೆ ಸದನದಲ್ಲಿ ಮತ್ತೆ ಗಲಾಟೆ ಆರಂಭವಾಯಿತು. ಡೈರಿಗಳ ಬಗ್ಗೆ ಹೈಕೋರ್ಟ್ ಸ್ಪಷ್ಟವಾದ ಅಭಿಪ್ರಾಯ ಹೇಳಿದೆ. ಹಾಗಾಗಿ ಆ ವಿಚಾರ ಇಲ್ಲಿ ಪ್ರಸ್ತಾಪ ಮಾಡುವುದು ಸರಿಯಲ್ಲ ಎಂದು ಪರಮೇಶ್ವರ್ ಹೇಳಿದರು. ಡೈರಿ ವಿಚಾರ ಮೊದಲು ಆರಂಭಿಸಿದ್ದು ಕಾಂಗ್ರೆಸ್ ಸದಸ್ಯರು ಎಂದು ಈಶ್ವರಪ್ಪ ತಿರುಗೇಟು ನೀಡಿದರು. ಮರಿತಿಬ್ಬೇಗೌಡ ಬೇಸರ: ಬಜೆಟ್ ಮೇಲಿನ ಚರ್ಚೆ ವೇಳೆ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರಿಂದ ಅನಗತ್ಯ ವಿಷಯಗಳು ಪ್ರಸ್ತಾಪ ಆಗಿರುವುದಕ್ಕೆ ಮನಸ್ಸಿಗೆ ತುಂಬಾ ನೋವಾಗಿದೆ. ಡೈರಿ ವಿಷಯ ಇಲ್ಲಿಗೇ ಬಿಡಿ. ಲೇಹರ್‌ಸಿಂಗ್ ಹೆಸರು ಕಡತದಿಂದ ತೆಗೆದು ಹಾಕಿಸುತ್ತೇನೆ. ಧರಣಿ ಕೈಬಿಟ್ಟು ಚರ್ಚೆಯಲ್ಲಿ ಪಾಲ್ಗೊಳ್ಳಿ ಎಂದು ಬಿಜೆಪಿ ಸದಸ್ಯರಿಗೆ ಮರಿತಿಬ್ಬೇಗೌಡ ಮನವಿ ಮಾಡಿದರು.