Advertisement

ಗಾಂಧಿ ತತ್ತ್ವಗಳನ್ನು ತಿರುಚುವುದೇ ಕಾಂಗ್ರೆಸ್‌ ಸಂಸ್ಕೃತಿ: ಮೋದಿ

12:30 AM Mar 13, 2019 | Team Udayavani |

ಹೊಸದಿಲ್ಲಿ: ಗಾಂಧಿ ತಣ್ತೀಗಳ ಮೂಲ ಉದ್ದೇಶಗಳನ್ನೇ ತಿರುಚಿ ಹೇಳುವುದು ಕಾಂಗ್ರೆಸ್‌ ಪಕ್ಷದ ಸಂಸ್ಕೃತಿ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ. ದಂಡಿ ಸತ್ಯಾಗ್ರಹದ 89ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಮಾ. 12ರಂದು ತಮ್ಮ ಬ್ಲಾಗ್‌ನಲ್ಲಿ ವಿಶೇಷ ಲೇಖನ ಪ್ರಕಟಿಸಿರುವ ಅವರು, “ಮಹಾತ್ಮಾ ಗಾಂಧಿಯವರು, ಬಡ ವ್ಯಕ್ತಿಯ ಏಳ್ಗೆಯ ಬಗ್ಗೆ ಯೋಚಿಸುವುದನ್ನು ನಮಗೆ ಹೇಳಿಕೊಟ್ಟರು. ಇದನ್ನು ಮನಗಂಡ ನಮ್ಮ ಸರಕಾರದಿಂದ ಜಾರಿಗೊಂಡ ಯೋಜನೆಗಳು ಬಡತನ ತೊಲಗಿಸಿ, ಸಮೃದ್ಧಿಯನ್ನು ತರುವಲ್ಲಿ ಯಶಸ್ವಿಯಾಗಿವೆ ಎಂಬುದನ್ನು ಹೇಳಲು ನನಗೆ ಹೆಮ್ಮೆಯೆನಿಸುತ್ತಿದೆ. ಈ ಹೆಮ್ಮೆಗೆ ಕಾರಣವಾಗಿರುವ ಗಾಂಧೀಜಿಯವರ ಚಿಂತನೆಗಳ ಮೂಲ ಉದ್ದೇಶಗಳನ್ನೇ ತಿರುಚಿ ತಮಗೆ ಬೇಕಾದಂತೆ ಬಳಸುವುದೇ ಕಾಂಗ್ರೆಸ್‌ನ ಸಂಸ್ಕೃತಿ’ ಎಂದಿದ್ದಾರೆ. ಜತೆಗೆ, ಕಾಂಗ್ರೆಸ್‌ ಮತ್ತು ಭ್ರಷ್ಟಾಚಾರ ಎಂಬ ಪದಗಳು ಹೇಗೆ ಸಮಾನಾರ್ಥಕ ಶಬ್ದಗಳಾಗಿ ಬದಲಾದವು ಎಂಬುದನ್ನು ಇಡೀ ದೇಶದ ಜನತೆಯೇ ಗಮನಿಸಿದೆ. ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಭ್ರಷ್ಟಾಚಾರ ನಡೆಯದ ಕ್ಷೇತ್ರವೇ ಇಲ್ಲ ಎಂಬಂತೆ ರಕ್ಷಣೆ, ದೂರಸಂಪರ್ಕ, ಜಲಸಂಪನ್ಮೂಲ, ಕೃಷಿ, ಕ್ರೀಡೆ, ಗ್ರಾಮೀಣಾಭಿವೃದ್ಧಿ ಹಾಗೂ ಮತ್ತಿತರ ಕ್ಷೇತ್ರಗಳಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಅವರು ಆರೋಪಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next