ಕುಣಿಗಲ್: ಟಿಪ್ಪು ಜಯಂತಿ ಮುಸ್ಲಿಮರು ಮಾಡುವ ಹಾಗಿಲ್ಲ, ಆದರೂ, ಕಾಂಗ್ರೆಸ್‌ನವರು ಟಿಪ್ಪು ಜಯಂತಿಯನ್ನು ಅವರ ಅಧಿಕಾರ ಅವಧಿಯಲ್ಲಿ ಮಾಡಿ ಹಿಂದು, ಮುಸ್ಲಿಮರ ನಡುವೆ ವೈಮನಸ್ಸು ಉಂಟು ಮಾಡಿ ಕಲಹಕ್ಕೆ ಕಾರಣರಾಗಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಆರೋಪಿಸಿದರು.
ಪಟ್ಟಣದ ಬಯಲು ರಂಗ ಮಂದಿರದಲ್ಲಿ ಸೋಮವಾರ ಜೆಡಿಎಸ್ ಹಮ್ಮಿಕೊಂಡಿದ್ದ ಅಲ್ಪಸಂಖ್ಯಾತ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಮೀರ್ ಅಹ್ಮದ್ ಸೇರಿ ಮೊದಲಾದ ಮುಸ್ಲಿಂ ನಾಯಕರನ್ನು ರಾಜಕೀಯಕ್ಕೆ ತಂದವನು ನಾನು. ಅವರು ಜೆಡಿಎಸ್‌ನಲ್ಲಿ ಎಲ್ಲಾ ಅಧಿಕಾರ ಅನುಭವಿಸಿ ಈಗ ಕಾಂಗ್ರೆಸ್‌ನಲ್ಲಿದ್ದಾರೆ. ಕಾಂಗ್ರೆಸ್‌ನವರು ಏನೇ ಆಮಿಷ ಒಡ್ಡಿದರೂ ಜೆಡಿಎಸ್ ಅಧಿಕಾರಕ್ಕೆ ಬಂದು ಕುಮಾರಸ್ವಾಮಿ ಅವರು ನೂರಕ್ಕೆ ನೂರರಷ್ಟು ಸಿಎಂ ಆಗುವುದು ಖಚಿತ ಎಂದು ವಿವರಿಸಿದರು.
ಸಿದ್ದರಾಮಯ್ಯನನ್ನು ಗೆಲ್ಲಿಸಿದ್ದು ನಾನು
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮುಸ್ಲಿಮರನ್ನು ಗೌರವದಿಂದ ಕಾಣುತ್ತಿಲ್ಲ, ಸಿದ್ದರಾಮಯ್ಯ ಅವರನ್ನು ನಾನು ಬಾದಾಮಿ ಕ್ಷೇತ್ರದಲ್ಲಿ ನಿಲ್ಲಿಸಿ 900 ಮತಗಳಿಂದ ಗೆಲ್ಲಿಸಿದೆ. ಅವರಿಗೆ ಮೇಕಪ್ ಮಾಡಿದವನು ನಾನೇ. ಆದರೆ, ನಿನ್ನನು ಎಂಎಲ್‌ಸಿ ಮಾಡಿರುವುದು ದೊಡ್ಡದು ಎಂದು ಸಿದ್ದರಾಮಯ್ಯ ಹೇಳಿದರು.ರಾಜೀನಾಮೆ ಪತ್ರ ಬರೆದು ಅವರ ಮುಖದ ಮೇಲೆ ಎಸೆದು ಬಂದೆ ಎಂದು ಇಬ್ರಾಹಿಂ ಹೇಳಿದರು.