Advertisement

ಸ್ವಾತಂತ್ರ್ಯ ಹೋರಾಟಕ್ಕೆ ಕಾಂಗ್ರೆಸ್‌ ಕೊಡುಗೆ ಅಪಾರ

03:10 PM Sep 10, 2022 | Team Udayavani |

ಬೀದರ: ಆಜಾದಿ ಕಾ ಅಮೃತ ಮಹೋತ್ಸವ ನಿಮಿತ್ತ ಬೀದರ ನಗರ ಹಾಗೂ ಗ್ರಾಮೀಣ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ವತಿಯಿಂದ ಶುಕ್ರವಾರ ನಗರದಲ್ಲಿ ಬೃಹತ್‌ ತಿರಂಗಾ ಪಾದಯಾತ್ರೆ ನಡೆಯಿತು.

Advertisement

ಯಾತ್ರೆಯಲ್ಲಿ ಸಾವಿರಾರು ಕಾರ್ಯಕರ್ತರು ಹೆಜ್ಜೆ ಹಾಕಿದರು. ಶಾಸಕ ರಹೀಮ್‌ ಖಾನ್‌ ನೇತೃತ್ವದಲ್ಲಿ ಇಲ್ಲಿನ ನೆಹರು ಕ್ರೀಡಾಂಗಣ ಸಮೀಪದ ಸಾಯಿ ಸ್ಕೂಲ್‌ ಆವರಣದಿಂದ ಆರಂಭವಾದ ಯಾತ್ರೆ ಅಂಬೇಡ್ಕರ್‌ ವೃತ, ಬಸವೇಶ್ವರ, ಬೊಮಗೊಂಡೇಶ್ವರ ಸರ್ಕಲ್‌, ಗಾಂಗಂಜ್‌, ಚಿದ್ರಿ ಮೂಲಕ ಶಾಸಕರ ಗೃಹ ಕಚೇರಿವರೆಗೆ ನಡೆಯಿತು. ನಗರ ಹಾಗೂ ವಿವಿಧ ಗ್ರಾಮಗಳಿಂದ ಆಗಮಿಸಿದ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. ಬ್ಯಾಂಡ್‌ ಬಾಜಾದೊಂದಿಗೆ ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು ಘೋಷಣೆ ಹಾಕುತ್ತ ಹೆಜ್ಜೆ ಹಾಕಿದರು.

ಪಾದಯಾತ್ರೆಗೂ ಮುನ್ನ ಮಾತನಾಡಿದ ಶಾಸಕ ರಹೀಮ್‌ ಖಾನ್‌, ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದವರನ್ನು ಗೌರವಿಸಬೇಕು. ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್‌ ಪಕ್ಷ ಕೊಟ್ಟ ಕೊಡುಗೆ ಅಪಾರವಿದೆ ಎಂದು ಹೇಳಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿ ಕೊಡುಗೆ ಶೂನ್ಯ. ಭಾರತವನ್ನು ರಕ್ಷಣೆ ಮಾಡುವ ಬದಲು ಮಾರಾಟ ಮಾಡುವ ಕೆಲಸದಲ್ಲಿ ತೊಡಗಿದ್ದಾರೆ. ಕಮಲ ಮುಖಂಡರು ನಕಲಿ ದೇಶ ಭಕ್ತರು. ಧರ್ಮ, ಜಾತಿಗಳ ನಡುವೆ ಜಗಳ ಹಚ್ಚಿ, ವಿಷ ಬೀಜ ಬಿತ್ತುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ದೂರಿದರು.

ಪಕ್ಷದ ಜಿಲ್ಲಾಧ್ಯಕ್ಷ ಬಸವರಾಜ ಜಾಬಶೆಟ್ಟಿ ಮಾತನಾಡಿ, ಬಿಜೆಪಿ ಸರ್ಕಾರ ವಿವಿಧ ತನಿಖಾ ಸಂಸ್ಥೆ ಮೂಲಕ ಕಾಂಗ್ರೆಸ್‌ ನಾಯಕರನ್ನು ಟಾರ್ಗೆಟ್‌ ಮಾಡಿ ಕಿರುಕುಳ ನೀಡುತ್ತಿದೆ. ಅಧಿಕಾರ ಶಾಶ್ವತವಲ್ಲ. ಬರುವ ಚುನಾವಣೆಯಲ್ಲಿ ಮತದಾರರು ಬಿಜೆಪಿಯನ್ನು ಕಿತ್ತೂಗೆದು ಕಾಂಗ್ರೆಸಗೆ ಅಧಿಕಾರ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸಂಗ್ರಾಮ್‌, ಮುಖಂಡರಾದ ಪಂಡಿತರಾವ್‌ ಚಿದ್ರಿ, ಸಂಜಯ ಜಾಗೀರದಾರ್‌ ಮಾತನಾಡಿದರು. ಪಾದಯಾತ್ರೆಯಲ್ಲಿ ಮಾಜಿ ಸಂಸದ ನರಸಿಂಗರಾವ್‌ ಸೂರ್ಯವಂಶಿ, ಮಾಜಿ ಎಂಎಲ್ಸಿ ಕೆ. ಪುಂಡಲೀಕರಾವ್‌, ಕಾಂಗ್ರೆಸ್‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದತ್ತಾತ್ರಿ ಮೂಲಗೆ, ಗ್ರಾಮೀಣ ಬ್ಲಾಕ್‌ ಸಮಿತಿ ಅಧ್ಯಕ್ಷ ಚಂದ್ರಕಾಂತ ಹಿಪ್ಪಳಗಾಂವ್‌, ನಗರ ಅಧ್ಯಕ್ಷ ಮಹ್ಮದ್‌ ಯುಸೂಫ್‌, ಪ್ರಮುಖರಾದ ಪರ್ವೆಜ್‌ ಕಮಲ್‌, ಗೋವರ್ಧನ್‌ ರಾಠೊಡ್‌, ಇರ್ಷಾದ್‌ ಪೈಲ್ವಾನ್‌, ಮಹ್ಮದ್‌ ರಿಯಾಜ್‌, ಧನರಾಜ ಹಂಗರಗಿ, ಹಣಮಂತ ಮಲ್ಕಾಪುರೆ, ಸಚಿನ್‌ ಮಲ್ಕಾಪುರೆ, ಎಂ.ಎ. ಸಮಿ, ಮಹ್ಮದ್‌ ಯೂಸೂಫ್‌ ಇತರರಿದ್ದರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next