ಕುರುಗೋಡು: ಮುಂದಿನ ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುವುದು ಖಚಿತ ಮತ್ತೊಮ್ಮೆ ಕಂಪ್ಲಿ ಯಲ್ಲಿ ಗಣೇಶ್ ಶಾಸಕರು ಆಗುವುದೂ ನಿಚ್ಚಿತ ಎಂದು ಮಾಜಿ ಸಚಿವ ಸಂತೋಷ್ ಎಸ್. ಲಾಡ್ ಹೇಳಿದರು.
ಪಟ್ಟಣದ ನಾಡಗೌಡರ ಮರಿಬಸವನ ಗೌಡರ ಕ್ರೀಡಾಂಗಣದಲ್ಲಿ ಆಮೇಚೂರ್ ಅಶೋಸಿಯೇಷನ್ ಸಹಯೋಗದಲ್ಲಿ ಸಂತೋಷ್ ಲಾಡ್ ಪೌಂಡೇಷನ್ ವತಿಯಿಂದ ಹಮ್ಮಿಕೊಂಡಿದ್ದ ಮಹಿಳಾ ಮತ್ತು ಪುರಸರ ಜಿಲ್ಲಾ ಮಟ್ಟದ ಕಬ್ಬಡಿ ಪಂದ್ಯಾವಳಿ ಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇವತ್ತು ಕಾಂಗ್ರೆಸ್ ಸರಕಾರ ಇಲ್ಲದಿದ್ರೂ ಗಣೇಶ್ ಅವರು ಅತಿ ಹೆಚ್ಚಿನ ರೀತಿಯಲ್ಲಿ ಕ್ಷೇತ್ರಕ್ಕೆ ಅನುದಾನ ತಂದು ಅಭಿವೃದ್ಧಿ ಮಾಡಿದ್ದಾರೆ ಆದ್ದರಿಂದ ಕ್ಷೇತ್ರದ ಪ್ರತಿಯೊಬ್ಬರು ಮತ್ತೊಮ್ಮೆ ಗಣೇಶ್ ಅವರನ್ನು ಆಯ್ಕೆ ಮಾಡಿ ತರಬೇಕು ಎಂದು ಮನವಿ ಮಾಡಿದರು.
ರಾಜ್ಯದ 224 ವಿಧಾನಸಭಾ ಕ್ಷೇತ್ರದ ಶಾಸಕ ರಲ್ಲಿ 24 ಗಂಟೆಗಳ ಕಾಲ ಜನರಿಗಾಗಿ ಸೇವೆ ಮಾಡುವ ಶಾಸಕರೆಂದರೆ ಅದು ಗಣೇಶ್ ಅವರು ಮಾತ್ರ ಅಂತ ಹೇಳಿದರು.
ಇನ್ನೂ ಇವತ್ತು ಕಬ್ಬಡಿ ನಮ್ಮ ದೇಶದ ಕ್ರೀಡೆ ಯಾಗಿದ್ದು, ಪ್ರತಿಯೊಬ್ಬ ಯುವಕರು ಕ್ರೀಡೆಯ ಮನೋಭಾವ ರೂಪಿಸಿಕೊಳ್ಳಬೇಕು ಜೊತೆಗೆ ಅವರ ಭವಿಷ್ಯ ಉಜ್ವಲವಾಗಲಿ ಎನ್ನುವ ಉದ್ದೇಶದಿಂದ ಶಾಸಕರು ಇಂತಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ಉತ್ತಮ ವಾಗಿದೆ ಇಂತಹ ಕಾರ್ಯಗಳಿಗೆ ನನ್ನ ಬೆಂಬಲ ಯಾವಾಗಲು ಇರುತ್ತದೆ ಎಂದರು.
Related Articles
ನಾನು ಕೂಡ ಉತ್ತಮ ಕ್ರೀಡೆಪಾಟು ನಾಗಿ ಬೆಳೆದು ಬಂದಿದ್ದೇನೆ ಅದರ ಬಗ್ಗೆ ಈಗಲೂ ಕೂಡ ನನಗೆ ಆಸಕ್ತಿ ಇದೆ. ನಾನು ಕೂಡ ಶಾಸಕನಾಗಿ, ಸಚಿವನಾಗಿ ಅಧಿಕಾರ ನಡೆಸಿ ಬಂದಿರೋನು ಮುಂದೆ ಕೂಡ ಆಗೋನು ಇದಿನಿ ಎಂದರು.
ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಕಳೆದರೂ ಮೊದಲು ಏಗಿತ್ತು, ಈಗ ಹೇಗಿದೆ ಅಂತ ನಿಮಗೆ ಗೊತ್ತಿದೆ. ಮುಂದಿನ ದಿನಗಳಲ್ಲಿ ದೇಶದ ಜನರು ಕಾಂಗ್ರೆಸ್ ಗೆ ಬೆಂಬಲ ನೀಡಲಿದ್ದಾರೆ ಎಂದರು.
ನಾನು 17 ವರ್ಷ ಇದ್ದಾಗಲೇ ರಾಜಕೀಯ ಮಾಡಿ ಬಂದವನು, ನಾನು ಗುಟ್ಕಾ, ತಂಬಾಕು, ವಿಸ್ಕಿ ಏನು ಸೇವಿಸಲ್ಲ ಯುವಕರು ಕೂಡ ಅದರಿಂದ ದೂರ ಇದ್ದು ಉತ್ತಮ ಆರೋಗ್ಯ ಕಾಪಾಡಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಮುಂದಿನ ದಿನಗಳಲ್ಲಿ ಇವತ್ತು ಏನು ಆಯೋಜನೆ ಮಾಡಿದೆ ಕಬ್ಬಡಿ ಪಂದ್ಯಾವಳಿ ಇದಕ್ಕಿಂತ ಹೆಚ್ಚಿನ ರೀತಿಯಲ್ಲಿ ಯುವಕರಿಗೆ ಅನುಕೂಲ ವಾಗುವ ರೀತಿಯಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದರು.