Advertisement
ಸ್ಥಳೀಯ ಗಚ್ಚಿನಮಠದ ಸಾಂಸ್ಕೃತಿಕ ಉತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್‌ಗೆ ಈ ದೇಶ ಮತ್ತು ಯೋಧರ ಚಿಂತೆಯಾದರೆ ಬಿಜೆಪಿಗೆ ಅಧಿಕಾರದ ಚಿಂತೆಯಾಗಿದೆ. ಯಡಿಯೂರಪ್ಪನಂಥವರಿಗೆ ಚುನಾವಣೆಯಲ್ಲಿ ಸ್ಥಾನ ಗೆಲ್ಲುವ ಚಿಂತೆಯಾಗಿದೆ. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖಂಡನೀಯ ವಿಷಯವಾಗಿದೆ ಎಂದರು.
ಬಿಜೆಪಿ ಮೇಲಿಂದ ಮೇಲೆ ಸಮಿಶ್ರ ಸರ್ಕಾರದ ಸಾಧನೆಯನ್ನು ಸಹಿಸದೇ ಸಮಿಶ್ರ ಸರ್ಕಾರವನ್ನು ಅಸ್ಥಿರ ಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.
Related Articles
Advertisement
ಸಂವಿಧಾನಕ್ಕೆ ವಿರುದ್ಧವಾಗಿ ಬೇರೆ ಬೇರೆ ಆಮಿಷ ಒಡ್ಡುವ ಮೂಲಕ ಶಾಸಕರನ್ನು ಖರೀದಿ ಮಾಡುವ ವಿಚಾರವನ್ನು ಬಿಜೆಪಿ ಮಾಡುತ್ತಾ ಬರುತ್ತಿದೆ. ಬಿಜೆಪಿಗೆ ಸಮಿಶ್ರ ಸರ್ಕಾರದ ವಿರುದ್ಧ ಮಾತನಾಡುವ ನೈತಿಕತೆ ಇಲ್ಲ. ಐದು ವರ್ಷ ಅಧಿಕಾರಾವಧಿಯನ್ನು ಸಮ್ಮಿಶ್ರ ಸರ್ಕಾರ ಪೂರ್ಣಗೊಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷ ಒಂದು ಸಾಗರವಿದ್ದಂತೆ ಇಲ್ಲಿ ಎಂತೆಂಥವರು ಬರುತ್ತಾರೆ ಹೋಗುತ್ತಾರೆ. ಆದರೆ ಪಕ್ಷ ಮಾತ್ರ ಸ್ಥಿರವಾಗಿದೆ. ನಮ್ಮ ಪಕ್ಷವನ್ನು ಬಿಟ್ಟುಹೋಗುವರು ಅಧಿಕಾರ ಕಳೆದುಕೊಳ್ಳುತ್ತಾರೆ ಹೊರತು ಬೇರೆ ಪಕ್ಷಕ್ಕೆ ಹೋಗಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಇದು ಅವರಿಗೆ ನಷ್ಟ ಹೊರತು ನಮಗಲ್ಲ ಎಂದರು. ಕೇಂದ್ರದಲ್ಲಿ ಬಿಜೆಪಿ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದು ಐದು ವರ್ಷಗಳು ಮುಗಿಯುತ್ತ ಬಂದರೂ ಜನರಿಗಾಗಿ ಒಂದಾದರೂ ಒಳ್ಳೆಯ ಕೆಲಸ ಮಾಡಿದ ಉದಾಹರಣೆಗಳಿಲ್ಲ. ಮೋದಿಯವರು ಮನಕೀ ಬಾತ್ ಎಂದು ಹೇಳಿ ರೇಡಿಯೋದ ಮುಂದೆ ಕುಳಿತು ಚರ್ಚೆಮಾಡುವುದಲ್ಲ ಬಹಿರಂಗವಾಗಿ ಮಾಧ್ಯಮಗಳ ಮುಂದೆ ಕುಳಿತು ಚರ್ಚೆ ಮಾಡಲಿ. ದೇಶಕ್ಕಾಗಿ ಹುತಾತ್ಮರಾದ ಸೈನಿಕರ ಹೆಸರಲ್ಲಿ ಬಿಜೆಪಿಯವರು ರಾಜಕೀಯ ಮಾಡಲು ಹೊರಟ್ಟಿದ್ದಾರೆ ಎಂದು ಆರೋಪಿಸಿದರು. ದೇಶ ನಡೆಸಲು ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ದೇಶ ನಡೆಸಲು ಇವರಿಂದ ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ದೇಶದ ಕುರಿತು
ಯುವಕರು ವಿದ್ಯಾರ್ಥಿಗಳು ಮತ್ತು ತಾಯಂದಿರು ಬಹಳ ಆಲೋಚನೆ ಮಾಡಿಕೊಂಡು ತೀರ್ಮಾನ ತೆಗೆದುಕೊಳ್ಳಬೇಕಾಗುತ್ತೆ. ಈ ವೇಳೆ ಗಜಾನನ ಮಂಗಸೂಳಿ, ಅಸ್ಲಂ ನಾಲಬಂದ, ಸಲಾಂ ಕಲಿ, ಅನೀಲ ಸುಣದೋಳಿ, ಸುನೀಲ ಸಂಕ ಸೇರಿದಂತೆ ಅನೇಕರು ಇದ್ದರು. ಧಾರ್ಮಿಕ ಶಿಕ್ಷಣದಿಂದ ದುಷ್ಟಶಕ್ತಿಗೆ ಕಡಿವಾಣ
ಅಥಣಿ: ಧಾರ್ಮಿಕ ಶಿಕ್ಷಣದಿಂದ ಮಾತ್ರ ದುಷ್ಟಶಕ್ತಿಗಳನ್ನು ನಿವಾರಿಸಲು ಸಾಧ್ಯ ಎಂದು ರಾಜ್ಯ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ ಹೇಳಿದರು. ಇಲ್ಲಿನ ಗಚ್ಚಿನಮಠದಲ್ಲಿ ನಡೆಯುತ್ತಿರುವ ಶರಣ ಸಂಸ್ಕೃತಿ ಉತ್ಸವದ 3ನೇ ದಿನದ ಕಾರ್ಯಕ್ರಮದಲ್ಲಿ ಭಯೋತ್ಪಾದನೆ ಹಾಗೂ ಆಂತರಿಕ ಭಯೋತ್ಪಾದನೆ ನಿರ್ಮೂಲನೆಯ ಮಾರ್ಗಗಳ ಚಿಂತನಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಭಯ ಹುಟ್ಟಿಸುವವರೆ ಭಯೋತ್ಪಾದಕರು. ಯುವ ಜನರ ಕಾನೂನು ಬಾಹಿರ ಚಟುವಟಿಕೆಗಳತ್ತ ಒಲವು ತೋರಿಸುತ್ತಿರುವುದು ಆತಂಕದ ಸಂಗತಿಯಾಗಿದೆ. ಆದ್ದರಿಂದ ಭಯೋತ್ಪಾದನೆ ಹೊಡೆದೊಡಿಸಲು ಯುವಕರಿಗೆ ಧಾರ್ಮಿಕ ಅರಿವು ಅಗತ್ಯವಾಗಿದೆ ಎಂದರು. ಸಾನ್ನಿಧ್ಯ ವಹಿಸಿದ ಡಾ| ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ಇಡಿ ಜಗತ್ತು ಭಯದ ಹೊಸ್ತಿಲಲ್ಲಿದೆ. ಇದೊಂದು ಆತಂಕಕಾರಿ ಅನ್ನೋ ಮನಸ್ಥಿತಿ ಎಲ್ಲರಲ್ಲೂ ಉದ್ಬವವಾಗುತ್ತಿದೆ. ಬಹಿರಂಗ ಭಯೋತ್ಪಾದನೆಗಿಂತ ಆಂತರಿಕ ಭಯೋತ್ಪಾದನೆ ಹೆಚ್ಚಾಗಿದೆ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲಾಧಿಕಾರಿ ಎಸ್.ಬಿ. ಬೊಮ್ಮನಹಳ್ಳಿ ಮಾತನಾಡಿ, ನಮ್ಮಲ್ಲಿ ಸ್ವಾರ್ಥ ಮನೋಭಾವದಿಂದ ದ್ವೇಷಭಾವನೆ ಬೆಳೆಯುತ್ತಿದೆ. ಅಂತರಂಗ ಮತ್ತು ಬಹಿರಂಗ ಶುದ್ಧಿಗೆ ಶರಣರ ವಚನಗಳು ಅಗತ್ಯವಾಗಿವೆ ಎಂದರು. ಮಾಜಿ ಶಾಸಕ ಲಕ್ಷ್ಮಣ ಸವದಿ ಮಾತನಾಡಿ, ಧುರಾಸೆಯೇ ಭಯೋತ್ಪಾದನೆಗೆ ಕಾರಣವಾಗಿದ್ದು, ಬಾಹ್ಯ ಹಾಗೂ ಆಂತರಿಕ ಭಯೋತ್ಪಾದನೆ ನಿರ್ಮೂಲನೆಗೆ ಪ್ರತಿಯೊಬ್ಬರು ಪಣ ತೊಡಬೇಕು ಎಂದರು. ರಾಯಚೂರಿನ ಕೃಷಿ ತಜ್ಞೆ ಕವಿತಾ ಮಿಶ್ರಾ ಹಾಗೂ ಬೆಂಗಳೂರಿನ ಡಾ| ಎಸ್.ಎಸ್. ಕುಲಕರ್ಣಿ ಮಾತನಾಡಿ, ರೈತರು ಕಷ್ಟಗಳಿಗೆ ಎದೆಗುಂದದೇ ಕೃಷಿಯಲ್ಲಿ ಸಾಧನೆ ಮಾಡಲು ಮುಂದಾಗಬೇಕು ಎಂದರು. ಈ ವೇಳೆ ಚಂದ್ರಕಾಂತ ಪಾಟೀಲ, ಡಾ| ಜ್ಯೋತಿ, ಕೆ.ಎ. ವನಜೋಳ, ಗಚ್ಚಿನಮಠದ ಶಿವಬಸವ ಸ್ವಾಮೀಜಿ ಇದ್ದರು.