Advertisement

ಬೆಳಗಾವಿ: ಹಳೇಯ ಮತದಾರರ ಪಟ್ಟಿ ನೀಡಿದ್ದಕ್ಕೆ ಕಾಂಗ್ರೆಸ್ ಅಭ್ಯರ್ಥಿ ಆಕ್ರೋಶ

04:05 PM Sep 03, 2021 | Team Udayavani |

ಬೆಳಗಾವಿ: ಮಹಾನಗರ ಪಾಲಿಕೆ ಚುನಾವಣೆ ಬಿರುಸಿನಿಂದ ನಡೆದಿದ್ದು, ವಾರ್ಡ್ ನಂಬರ್ 45ರಲ್ಲಿ ಹಳೆಯ ಮತದಾರರ ಪಟ್ಟಿಯನ್ನು ವಿತರಿಸಲಾಗಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ರಾಜಶ್ರೀ ನಾಯಕ್ ಆರೋಪಿಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Advertisement

ಶುಕ್ರವಾಋ ಬೆಳಗ್ಗೆ ಮತದಾನ ಶುರುವಾಗುತ್ತಿದ್ದಂತೆ ಹಳೆಯ ಮತದಾರರ ಪಟ್ಟಿಯನ್ನು ನೀಡಲಾಗಿದ್ದು, ಇದರಿಂದ ಅನೇಕರ ಹೆಸರುಗಳು ಇದರಲ್ಲಿ ಸೇರ್ಪಡೆ ಆಗಿಲ್ಲ. ಮತದಾರರು ಹೆಸರು ಹುಡುಕಾಡುವುದಲ್ಲಿ ಹರಸಾಹಸ ಪಡುವಂತಾಗಿದೆ. ಅಧಿಕಾರಿಗಳ ಬೇಜವಾಬ್ದಾರಿಯಿಂದ ಹೊಸ ಪಟ್ಟಿ ನಮ್ಮ ಕೈ ಸೇರಿಲ್ಲ ಎಂದು ಅಭ್ಯರ್ಥಿ ಆರೋಪಿಸಿದರು.

ಕಾಂಗ್ರೆಸ್ ಅಭ್ಯರ್ಥಿಗೆ ಹಳೆ ಪಟ್ಟಿ ಕೊಟ್ಟಿದ್ದು, ಬಿಜೆಪಿ ಅಭ್ಯರ್ಥಿಗೆ ಮಾತ್ರ ಹೊಸ ಮತದಾರರ ಪಟ್ಟಿ ನೀಡುವ ಮೂಲಕ ಅಧಿಕಾರಿಗಳು ತಾರತಮ್ಯ ಮಾಡಿದ್ದಾರೆ. ಮತದಾರರ ಹೆಸರು ಇಲ್ಲದೇ ಸಮಸ್ಯೆ ಆಗುತ್ತಿದೆ. ಈ ಬಗ್ಗೆ ಹೊಸ ಪಟ್ಟಿ ನೀಡಿ ಇಲ್ಲವೇ ಮತದಾನ ಪ್ರಕ್ರಿಯೆ ನಿಲ್ಲಿಸಬೇಕು ಎಂದು ಆಗ್ರಹಿಸಿದರು. ಈ ವೇಳೆ ಕೆಲಕಾಲ ಮತಗಟ್ಟೆ ಅಧಿಕಾರಿಗಳು ಮತ್ತು ಅಭ್ಯರ್ಥಿ ಮಧ್ಯೆ ಮಾತಿನ ಚಕಮಕಿ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next