Advertisement
ಇದರಲ್ಲಿ ಹಾಲಿ-ಮಾಜಿ ಶಾಸಕರು, ಮಾಜಿ ಸಚಿವರಿಗೆ ಮಣೆ ಹಾಕಲಾಗಿದೆ. ಇದರ ಜತೆಗೆ ಹೊಸಬರಿಗೂ ವೇದಿಕೆ ಕಲ್ಪಿಸಲಾಗಿದೆ. ಎಲ್ಲ ವರ್ಗಗಳ ನಾಯಕರಿಗೆ ಅವಕಾಶವನ್ನೂ ನೀಡಲಾಗಿದೆ. ಈ ನಿಟ್ಟಿನಲ್ಲಿ ಗೆಲುವಿನ ಮಾನದಂಡದೊಂದಿಗೆ ಸಾಮಾಜಿಕ ನ್ಯಾಯ, ಸಾಧ್ಯವಾದಷ್ಟು ಬಂಡಾಯ ಭುಗಿಲೇಳದಂತೆ ನೋಡಿಕೊಳ್ಳುವ ಜಾಣ ನಡೆ, ಬಣಗಳ ನಡುವೆ ಕೊಡು-ಕೊಳ್ಳುವಿಕೆ, ಇದಕ್ಕಾಗಿ ಹಾಲಿ ಶಾಸಕರಿಗೂ ಕೊಕ್ ಕೊಡುವ ವರಿಷ್ಠರ ದಿಟ್ಟ ನಿಲುವು ಕಾಣಬಹುದು. ಆದರೂ ಅಸಮಾಧಾನ ಬೀದಿಗೆ ಬಂದಿದೆ.
Related Articles
ಇನ್ನು ವರಿಷ್ಠರ ಮ್ಯಾರಥಾನ್ ಸಭೆಗಳು, ಸಾಕಷ್ಟು ಲೆಕ್ಕಾಚಾರಗಳ ನಡುವೆಯೂ ಕಾಂಗ್ರೆಸ್‌ಗೆ ಬಂಡಾಯದ ಬಿಸಿ ತಪ್ಪಿಲ್ಲ. ಚಿತ್ರದುರ್ಗದಲ್ಲಿ ರಘು ಆಚಾರ್ ಟಿಕೆಟ್ ನೀಡದಿದ್ದಕ್ಕೆ ಡಿ.ಕೆ. ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದೇ ರೀತಿ, ಬಾದಾಮಿ, ಕಿತ್ತೂರು, ಕಲಘಟಗಿ ಮತ್ತಿತರ ಕಡೆಗಳಲ್ಲಿ ಅಸಮಾಧಾನದ ಹೊಗೆ ಕಂಡುಬರುತ್ತಿದೆ.
Advertisement
ಯಾವ ಸಮುದಾಯಕ್ಕೆ ಎಷ್ಟು ?ಇದುವರೆಗೆ ಒಟ್ಟಾರೆ 166 ಕ್ಷೇತ್ರಗಳಿಗೆ ಕಾಂಗ್ರೆಸ್ ಟಿಕೆಟ್ ಅಂತಿಮಗೊಳಿಸಿದೆ. ಈ ಪೈಕಿ ಯಾವ ಸಮುದಾಯಕ್ಕೆ ಎಷ್ಟು ಎಂಬುದರ ವಿವರ ಹೀಗಿದೆ. ಲಿಂಗಾಯತ- 41, ಒಕ್ಕಲಿಗ- 35, ವಾಲ್ಮೀಕಿ- 12, ಎಸ್ಸಿ ಬಲ- 12, ಅಲ್ಪಸಂಖ್ಯಾಕ- 11, ಕುರುಬ- 8, ಎಸ್ಸಿ ಎಡ- 7, ಈಡಿಗ- 7, ಬ್ರಾಹ್ಮಣ- 5, ಎಸ್ಸಿ ಲಂಬಾಣಿ- 4, ಮರಾಠ- 4, ಬೆಸ್ತ/ ಕೋಲಿ/ ಮೊಗವೀರ- 4, ಬಂಟ್ಸ್- 3, ರೆಡ್ಡಿ- 2, ಜೈನ, ಕೊಡವ, ಕ್ರಿಶ್ಚಿಯನ್, ನಾಯ್ಡು ತಲಾ 1. ಮಾಜಿ ಸಚಿವರಿಗೂ ಅವಕಾಶ
ಅಂತಿಮಗೊಂಡ 2ನೇ ಪಟ್ಟಿಯಲ್ಲಿ ಮಾಜಿ ಸಚಿವರು- ಆರ್.ಬಿ.ತಿಮ್ಮಾಪುರ, ಎಚ್.ವೈ. ಮೇಟಿ, ಬಾಬುರಾವ್ ಚಿಂಚನಸೂರು, ಇಕ್ಬಾಲ್ ಅನ್ಸಾರಿ, ವಿನಯ್ ಕುಲಕರ್ಣಿ, ಸಂತೋಷ್ ಲಾಡ್, ಎಚ್. ಆಂಜನೇಯ, ಕಿಮ್ಮನೆ ರತ್ನಾಕರ, ಎಸ್.ಆರ್. ಶ್ರೀನಿವಾಸ ಹಾಗೂ ಬಿ.ಶಿವರಾಂ. ಟಿಕೆಟ್ ಘೋಷಣೆ ಆಗದ ಪ್ರಮುಖ ಕ್ಷೇತ್ರಗಳು
ಕೋಲಾರ, ಪುಲಕೇಶಿನಗರ, ಸರ್.ಸಿ.ವಿ.ರಾಮನ್‌ನಗರ, ದಾಸರಹಳ್ಳಿ, ಚಿಕ್ಕಪೇಟೆ, ಬೊಮ್ಮನಹಳ್ಳಿ, ಬೆಂಗಳೂರು ದಕ್ಷಿಣ, ಕೆ.ಆರ್.ಪುರ, ಅರಸೀಕೆರೆ, ಅರಕಲಗೂಡು, ತರೀಕೆರೆ, ಚಿಕ್ಕಮಗಳೂರು, ಅಥಣಿ, ತೇರದಾಳ, ಜಗಳೂರು, ದೇವರ ಹಿಪ್ಪರಗಿ, ಶಿಕಾರಿಪುರ, ಶಿಗ್ಗಾವಿ, ಕುಮಟಾ, ಮಂಗಳೂರು ಉತ್ತರ, ಮಂಗಳೂರು ನಗರ, ಹರಿಹರ, ಬಳ್ಳಾರಿ, ಲಿಂಗಸುಗೂರು, ಕುಂದಗೋಳ.