ಕೋಟೇಶ್ವರ: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಸಾಧನೆ ಮನೆಮನೆಗೆ ಮುಟ್ಟಿಸುವ ಜವಾಬ್ದಾರಿ ಹೊಂದಿರುವ ಪ್ರತಿಯೊಬ್ಬ ಕಾರ್ಯಕರ್ತ ಮತದಾರರ ಮನ ಒಲಿಸಬೇಕು. ಆ ಮೂಲಕ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಏಕೈಕ ಬಲಿಷ್ಠ ಪಕ್ಷವಾಗಿ ರಾಜ್ಯಾಡಳಿತ ಮಾಡುವಂತಾಗಬೇಕು. ಎಂದು ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಚಂದ್ರ ಶೆಟ್ಟಿ ಹೇಳಿದರು.
ಕೋಟೇಶ್ವರದ ಬಸವನಗುಡಿ ರಸ್ತೆ ಬಳಿ ನಿವಾಸದಲ್ಲಿ ಎ. 25 ರ ಸಂಜೆ ಕೋಟೇಶ್ವರ , ಹಂಗಳೂರು ತಾ.ಪಂ. ವ್ಯಾಪ್ತಿಯ ಕಾಂಗ್ರೆಸ್ ಪಧಾದಿಕಾರಿಗಳ ಪ್ರಚಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾಂಗ್ರೆಸ್ ಪಕ್ಷವು ರಾಕೇಶ್ ಮಲ್ಲಿ ಅವರ ಸಾಮರ್ಥ್ಯ, ಸಂಘಟನಾತ್ಮಕ ಶಕ್ತಿ ಪರಿಗಣಿಸಿ ಅವರನ್ನು ಆಯ್ಕೆ ಮಾಡಿದೆ. ಈ ಬಾರಿಯ ಚುನಾವಣೆಯಲ್ಲಿ ಅವರನ್ನು ಗೆಲ್ಲಿಸುವ ಜವಾಬ್ದಾರಿ ಪ್ರತಿಯೋರ್ವ ಕಾಂಗ್ರೆಸ್ ಕಾರ್ಯಕರ್ತರಿಗಿದೆ ಎಂದರು.
ಮಾಜಿ ತಾ.ಪಂ. ಸದಸ್ಯ ಕೆದೂರು ಸದಾನಂದ ಶೆಟ್ಟಿ ಮಾತನಾಡಿ ರಾಜ್ಯ ಸರಕಾರವು 5 ವರ್ಷ ಯಶಸ್ವಿಯಾಗಿ ಜನಪರ ಕಾರ್ಯಕ್ರಮದೊಡನೆ ಜನಾನು ರಾಗಿಯಾಗಿದೆ. ನರೇಂದ್ರ ಮೋದಿಯವರ ನೇತƒತ್ವದ ಕೇಂದ್ರ ಸರಕಾರವು ಪೊಳ್ಳು ಆಶ್ವಾಸನೆಯಲ್ಲಿ ಕಾಲ ಕಳೆದಿದೆಯೇ ಹೊರತು ಜನರ ಸಮಸ್ಯೆಗಳಿಗೆ ಸ್ಪಂದಿ ಸುವಲ್ಲಿ ಯಾವುದೇ ಯೋಜನೆ ರೂಪಿಸಿಲ್ಲ ಎಂದರು.
ಕುಂದಾಪುರ ಟಿ.ಎ.ಪಿ.ಸಿ.ಎಂ. ಅಧ್ಯಕ್ಷ ಹರಿಪ್ರಸಾದ ಶೆಟ್ಟಿ, ಕಾಂಗ್ರೆಸ್ ಕೋಟೇಶ್ವರ ಉಸ್ತುವಾರಿ ಬೆಳ್ವೆ ಸತೀಶ್ ಕಿಣಿ, ಕಾಂಗ್ರೆಸ್ ಮುಖಂಡರಾದ ರಂಗನಾಥ ಭಟ್ ಹಾಗೂ ಕೋಟೇಶ್ವರ ಗ್ರಾ.ಪಂ. ಮಾಜಿ ಅಧ್ಯಕ್ಷ ರಾಜಶೇಖರ ಶೆಟ್ಟಿ ಮಾರ್ಕೋಡು ಉಪಸ್ಥಿತರಿದ್ದರು. ರಾಜಶೇಖರ ಶೆಟ್ಟಿ ಸ್ವಾಗತಿಸಿ ಗಂಗಾಧರ ಶೆಟ್ಟಿ ಅವರು ವಂದಿಸಿದರು.