Advertisement

ಮೂರು ಕ್ಷೇತ್ರಕ್ಕೆ ವರವಾಗಲಿದೆಯೇ ಜೋಡೋ ಯಾತ್ರೆ

03:45 PM Oct 01, 2022 | Team Udayavani |

ಮಂಡ್ಯ: ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ ಐಕ್ಯತಾ ಪಾದಯಾತ್ರೆಯು ಅ.3ರಿಂದ ನಾಲ್ಕು ದಿನ ಜಿಲ್ಲೆಯಲ್ಲೂ ನಡೆಯಲಿದೆ.

Advertisement

ಅದರಲ್ಲೂ ಕಾಂಗ್ರೆಸ್‌ ಪಕ್ಷ ಹಿಂದುಳಿದಿರುವ ಶ್ರೀರಂಗಪಟ್ಟಣ, ಪಾಂಡವಪುರ, ನಾಗಮಂಗಲ ಕ್ಷೇತ್ರಗಳಲ್ಲಿ ಸಾಗುತ್ತಿರುವುದು ಮುಂದಿನ ವಿಧಾನಸಭಾ ಚುನಾ ವಣೆಯ ದಿಕ್ಸೂಚಿ ಆಗಲಿದೆ ಎಂಬ ಚರ್ಚೆಗಳು ಹುಟ್ಟಿಕೊಂಡಿವೆ. ಈ ಮೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಸ್ವಲ್ಪ ಹಿನ್ನ ಡೆಯೇ ಆಗಿದೆ.

ಅದರಲ್ಲೂ ಪಾಂಡವಪುರ, ನಾಗಮಂಗಲದಲ್ಲಿ ಹೆಚ್ಚು ಬಾರಿ ಕಾಂಗ್ರೆಸ್‌ ಗೆದ್ದಿಲ್ಲ. ಜಿಲ್ಲೆಯ ಬೇರೆ ಕ್ಷೇತ್ರಗಳಿಗೆ ಹೋಲಿಸಿ ದರೆ ಮೂರು ಕ್ಷೇತ್ರ ಉಳಿಸಿಕೊಳ್ಳುವುದು ಕಾಂಗ್ರೆಸ್‌ಗೆ ಅನಿವಾರ್ಯವಾಗಿದೆ. ಶ್ರೀರಂಗನ ನಾಡಲ್ಲಿ “ಕೈ’ನ ಇತಿಹಾಸ: ಅ.3ರಂದು ಭಾರತ ಜೋಡೋ ಪಾದಯಾತ್ರೆ ಪ್ರವೇಶ ಮಾಡಲಿದೆ. ಇಲ್ಲಿ ರಾಜಕೀಯ ಹಿನ್ನೆಲೆ ನೋಡಿದಾಗ ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ 16 ವಿಧಾನಸಭಾ ಚುನಾವಣೆಗಳು ನಡೆದಿವೆ. ಇದರಲ್ಲಿ 1952ರ ಮೊದಲ ಚುನಾ ವಣೆಯಲ್ಲೇ ಕಾಂಗ್ರೆಸ್‌ ಗೆಲುವು ಸಾಧಿ ಸಿತ್ತು. ನಂತರ 1957, 1962, 1972, 1989, 1999 ಸೇರಿ 6 ಬಾರಿ ಕಾಂಗ್ರೆಸ್‌ ಗೆಲುವು ಸಾಧಿ ಸಿದೆ. ಉಳಿದಂತೆ ಜನತಾಪಕ್ಷ, ಜೆಡಿಎಸ್‌, ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ಮರು ಜೀವ ಸಿಗಲಿದೆಯೇ: ಕಳೆದ 2018ರ ಚುನಾವಣೆಯಲ್ಲೂ ಕಾಂಗ್ರೆಸ್‌ ಹೀನಾಯ ಸೋಲು ಕಂಡಿತ್ತು. ಎಐಸಿಸಿ ಉಪಾಧ್ಯಕ್ಷ ರಾಹುಲ್‌ಗಾಂ ಧಿ ನೇತೃ ತ್ವದ ಕಾಂಗ್ರೆಸ್‌ನ ಭಾರತ್‌ ಜೋಡೋ ಯಾತ್ರೆಯಿಂದ ಮತ್ತೆ ಮರು ಜೀವ ಸಿಗಲಿದೆಯೇ ಎಂಬುದನ್ನು ಕಾದು ನೋಡಬೇಕು. ಪಾಂಡವರ

ನೆಲದಲ್ಲಿ ಒಗ್ಗೂಡಲಿದೆಯೇ ಕೈ: ಮೇಲುಕೋಟೆ ಕ್ಷೇತ್ರ ದಲ್ಲಿ ಕಾಂಗ್ರೆಸ್‌ ಸಂಪೂರ್ಣ ನೆಲಕಚ್ಚಿದೆ. ಮೊದಲಿನಿಂದಲೂ ಕಾಂಗ್ರೆಸ್‌ ಒಡಕಿನಿಂದಲೇ ಕೂಡಿದೆ. ಇದರಿಂದ ರೈತಸಂಘ, ಜೆಡಿ ಎಸ್‌ ಪಕ್ಷಗಳದ್ದೇ ಅಬ್ಬರವಾಗಿದೆ. ಕ್ಷೇತ್ರದ ರಾಜಕೀಯ ಹಿನ್ನೆಲೆ ನೋಡಿದಾಗ ಮೊದಲು ಪಾಂಡವಪುರ ಕ್ಷೇತ್ರ ವಾಗಿದ್ದ ಸಂದರ್ಭದಲ್ಲಿ 1952ರ ಮೊದಲ ಚುನಾ ವಣೆಯಲ್ಲಿ ಕಾಂಗ್ರೆಸ್‌ ಗೆಲುವು ಸಾಧಿ ಸುತ್ತದೆ. ನಂತರ 1962ರಲ್ಲಿ ಎರಡನೇ ಬಾರಿಗೆ ಜಯ ಸಿಗಲಿದೆ. 1972, 1989, 1999ರ ಚುನಾವಣೆಗಳಲ್ಲಿ ಗೆಲುವು ಸಾಧಿಸಿದೆ. ಆದರೆ, 1972ರಲ್ಲಿ ಕಾಂಗ್ರೆಸ್‌ ಇಬ್ಭಾಗವಾಯಿತು. ಆದರೂ, ಕಾಂಗ್ರೆಸ್‌ ಜಯಗಳಿಸುತ್ತದೆ. ಆದರೆ, ಇದರಿಂದ ಉಂಟಾದ ಬಣ ರಾಜಕೀಯ ಈಗಲೂ ಮುಂದುವರಿದಿದೆ.

Advertisement

ಒಂದು ಬಣ ರೈತಸಂಘದ ಪರವಾಗಿದ್ದರೆ, ಮತ್ತೂಂದು ಬಣ ಜೆಡಿಎಸ್‌ನೊಂದಿಗೆ ಕೈಜೋಡಿಸಿದೆ. ಇದರಿಂದ ಕಾಂಗ್ರೆಸ್‌ ಪಕ್ಷ ಇಲ್ಲಿ ಪುಟಿದೇಳಲು ಸಾಧ್ಯವಾಗುತ್ತಲೇ ಇಲ್ಲ. ಭಾರತ್‌ ಜೋಡೋ ಯಾತ್ರೆಯಿಂದ ಕಾಂಗ್ರೆಸ್‌ ಒಗ್ಗಟ್ಟು ಮೂಡಲಿದೆಯೇ ಎಂಬ ಪ್ರಶ್ನೆ ಹುಟ್ಟು ಹಾಕಿದೆ.

ಭೈರವನ ನೆಲದಲ್ಲಿ ಕಾಂಗ್ರೆಸ್‌ ಗೆದ್ದಿದ್ದು ಕಡಿಮೆ: ನಾಗಮಂಗಲ ವಿಧಾನಸಭಾ ಕ್ಷೇತ್ರದ ರಾಜಕೀಯವೇ ವಿಭಿನ್ನ. 1952ರ ಮೊದಲ ವಿಧಾನಸಭಾ ಚುನಾವಣೆಯಲ್ಲಿಯೇ ಕಾಂಗ್ರೆಸ್‌ ಸೋಲಿಸಿ ಪಕ್ಷೇತರ ಅಭ್ಯರ್ಥಿಯನ್ನು ಗೆಲ್ಲಿಸಿದ್ದ ಕೀರ್ತಿ ಇಲ್ಲಿನ ಮತದಾರರದ್ದು. ಅತಿ ಹೆಚ್ಚು ಪಕ್ಷೇತರರೇ ಇಲ್ಲಿ ಗೆಲುವು ಸಾಧಿ ಸಿದ್ದಾರೆ. ಇಂಥ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲುವಿನ ನಗೆ ಬೀರಿದ್ದು ಕಡಿಮೆ. 1953ರ ಉಪಚುನಾ ವಣೆ, 1967, 1972, 1973, 1978, 2008ರ ವಿಧಾನಸಭೆ ಚುನಾ ವಣೆಗಳಲ್ಲಿ ಗೆಲುವು ಕಂಡಿದೆ. ಅಲ್ಲಿಂದ ಜೆಡಿಎಸ್‌ ಪಕ್ಷದ್ದೇ ಪಾರು ಪತ್ಯವಾಗಿದೆ. ಇಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಪ್ರಾಬಲ್ಯ ಹೆಚ್ಚಿದೆ. ಕಳೆದ 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಎನ್‌.ಚಲುವರಾಯಸ್ವಾಮಿ ಪರಾಭವಗೊಂಡಿದ್ದರು. ಈ ಬಾರಿಯೂ ಎನ್‌.ಚಲುವರಾಯಸ್ವಾಮಿಗೆ ಕ್ಷೇತ್ರ ಕಬ್ಬಿಣದ ಕಡಲೆ ಯಾಗಿಯೇ ಪರಿಣಮಿಸಿದೆ.

ಎಚ್‌.ಶಿವರಾಜು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next