ಪುತ್ತೂರು: ನಾರಾಯಣ ಗುರು, ಭಗತ್ ಸಿಂಗ್ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್ ರಾಜಕೀಯ ದುರ್ಲಾಭ ಗಳಿಸಲು ಪ್ರಯತ್ನಿಸುತ್ತಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಆರೋಪಿಸಿದ್ದಾರೆ.
ಯಾವ ಪಠ್ಯವನ್ನೂ ಶಾಲಾ ಪುಸ್ತಕದಿಂದ ತೆಗೆದು ಹಾಕಿಲ್ಲ. ನಾರಾಯಣ ಗುರು, ಭಗತ್ ಸಿಂಗ್, ಬಸವಣ್ಣ ವಿಚಾರಗಳ ಪಾಠವೂ ಪುಸ್ತಕದಲ್ಲಿದೆ. ಮಕ್ಕಳಿಗೆ ಹೊರೆಯಾಗದಿರಲಿ ಎನ್ನುವ ಕಾರಣಕ್ಕೆ ಪಠ್ಯದಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ ಎಂದು ಪತ್ರಕರ್ತರ ಜತೆ ಮಾತನಾಡಿದ ಅವರು ಹೇಳಿದರು.
ಕೊರೊನಾ ಬಳಿಕ ರಾಜ್ಯದಲ್ಲಿ ಶೈಕ್ಷಣಿಕ ಪ್ರಕ್ರಿಯೆಯೇ ಮುಗಿದಿದೆ ಎಂದು ಕಾಂಗ್ರೆಸ್ ತಿಳಿದುಕೊಂಡಿದೆ. ಆದರೆ ಈಗ ಎಲ್ಲ ವ್ಯವಸ್ಥೆಗಳು ಸುಗಮವಾಗಿ ನಡೆಯುತ್ತಿರುವಾಗ ಪಠ್ಯದ ವಿಚಾರ ಎತ್ತಿದ್ದಾರೆ. ಕಾಂಗ್ರೆಸ್ ರಾಜಕೀಯ ಲಾಭಕ್ಕಾಗಿ ಶಿಕ್ಷಣವನ್ನೂ ಬಳಸುತ್ತಿದೆ, ಈ ವಿಚಾರದಲ್ಲೂ ಸುಳ್ಳು ಹರಡುತ್ತಿದೆ ಎಂದು ಆರೋಪಿಸಿದರು.
ಈ ಬಾರಿಯೂ ಎಲ್ಲ ಶಾಲೆಗಳಲ್ಲಿ ಸಮವಸ್ತ್ರ ಕಡ್ಡಾಯ ಮಾಡ ಬೇಕೆಂದು ಸೂಚನೆ ನೀಡಲಾಗಿದೆ. ಪ್ರೌಢಶಾಲೆ ತನಕ ಸರಕಾರವೇ ಸಮವಸ್ತ್ರವನ್ನು ಪೂರೈಸಲಿದೆ. ಈ ಬಾರಿ ಸಮವಸ್ತ್ರವನ್ನು ಒಂದು ತಿಂಗಳ ಒಳಗೆ ಪೂರೈಸಲಾಗುವುದು ಎಂದರು.
Related Articles
ಅಧ್ಯಾಪಕರಿಗೆ ಸಮವಸ್ತ್ರ ಕಡ್ಡಾಯ ಚಿಂತನೆ ಇಲ್ಲ
ಇತಿಹಾಸದಲ್ಲಿ ಮೊದಲ ಬಾರಿಗೆ ಶಾಲೆ ಆರಂಭದ ದಿನವೇ ಅತಿಥಿ ಶಿಕ್ಷಕರನ್ನು ನೇಮಿಸಲಾಗಿದೆ. ಅಧ್ಯಾಪಕರಿಗೆ ಸಮವಸ್ತ್ರ ಕಡ್ಡಾಯಗೊಳಿ ಸುವ ಚಿಂತನೆ ಸರಕಾರದ ಮುಂದಿಲ್ಲ ಎಂದು ಸಚಿವರು ಹೇಳಿದರು.