Advertisement

ಗುಜರಾತ್‌ನ ಬಿಜೆಪಿ ಮಂತ್ರ ಈಗ ಕೈ ತಂತ್ರ: ಬೂತ್‌ ಮಟ್ಟದತ್ತ ಕಾಂಗ್ರೆಸ್‌ ಯೋಚನೆ

12:34 AM Dec 22, 2022 | Team Udayavani |

ಬೆಳಗಾವಿ: ಗುಜರಾತ್‌ನಲ್ಲಿ ಬಿಜೆಪಿ ಅನುಸರಿಸಿದ ಕಾರ್ಯತಂತ್ರಕ್ಕೆ ಕರ್ನಾಟಕದಲ್ಲಿ ಕಾಂಗ್ರೆಸ್‌ ಮೊರೆ ಹೋಗಿದ್ದು ಬೂತ್‌ ಮಟ್ಟದಲ್ಲಿ 3 ತಿಂಗಳ ಕಾಲ ಪ್ರತೀ ಮನೆ ತಲುಪುವ ಅಭಿಯಾನಕ್ಕೆ ಮುಂದಾಗಿದೆ.

Advertisement

ಎಲ್ಲ 57 ಸಾವಿರ ಬೂತ್‌ ಮಟ್ಟದ ಪದಾಧಿಕಾರಿಗಳಿಗೆ ತಮ್ಮ ವ್ಯಾಪ್ತಿಯ ಪ್ರತೀ ಮನೆಗೆ ಭೇಟಿ ನೀಡಿ ಕಾಂಗ್ರೆಸ್‌ ಪಕ್ಷ ಅಧಿಕಾರದಲ್ಲಿದ್ದಾಗ ಅನು ಷ್ಠಾನಗೊಳಿಸಿದ ಯೋಜನೆ ಗಳು ಹಾಗೂ ಕಾರ್ಯಕ್ರಮಗಳ ಬಗ್ಗೆ ವಿವರಿಸಲು ಸೂಚಿಸಲಾಗಿದೆ. ಕಾರ್ಯಕರ್ತರ ಪಡೆ ರಚಿಸಿ ನಡೆಸುವ ಅಭಿಯಾನ ಹಾಗೂ ಮನೆ ಭೇಟಿ ಬಗ್ಗೆ ಎಐಸಿಸಿಗೆ ವರದಿ ಸಲ್ಲಿಸುವಂತೆಯೂ ಸೂಚಿಸಲಾಗಿದೆ. ಭಾರತ್‌ ಜೋಡೋ ಬಳಿಕ ಜನವರಿಯಿಂದ ಹಾಥ್‌ ಸೆ ಹಾಥ್‌ ಜೋಡೋ ಅಭಿಯಾನಕ್ಕೆ ಕಾಂಗ್ರೆಸ್‌ ಮುಂದಾಗಿದೆ.

ಬಿಜೆಪಿಯ ಶಾಸಕರು ಹಾಗೂ ಸ್ಪರ್ಧಾಕಾಂಕ್ಷಿಗಳು ಈಗಾಗಲೇ ಮನೆ ಮನೆ ಭೇಟಿ ನೀಡುತ್ತಾ ಬೂತ್‌ ಮಟ್ಟದಲ್ಲಿ ಪಕ್ಷದ ಪರ ಜನಾಭಿಪ್ರಾಯ ಮೂಡಿಸ ತೊಡಗಿದ್ದಾರೆ. ಆದರೆ ಕಾಂಗ್ರೆಸ್‌ ಶಕ್ತಿ ಈ ಹ್ರಾಬಲ್ಯ ಸಾಧಿಸುತ್ತಿದ್ದರೆ, ಮತ್ತೊಂದೆಡೆ ಜೆಡಿಎಸ್‌ ಪಂಚರತ್ನ ಯಾತ್ರೆ ಮೂಲಕ ಹಳೇ ಮೈಸೂರು ಭಾಗದಲ್ಲಿ ಸಂಘಟನೆಗೆ ಒತ್ತು ನೀಡುತ್ತಿದೆ. ಇಂತಹ ಸಂದರ್ಭದಲ್ಲಿ ನಾವು ಬೂತ್‌ ಮಟ್ಟದಲ್ಲಿ ಕಾರ್ಯಶೀಲರಾಗದಿದ್ದರೆ ಕಷ್ಟ ಎಂಬ ಆತಂಕ ಕಾಂಗ್ರೆಸ್‌ ಸಭೆಯಲ್ಲಿ ವ್ಯಕ್ತವಾಗಿದೆ.

ಹೀಗಾಗಿ ಕಾರ್ಯಕರ್ತರು ಹಾಗೂ ಪದಾಧಿ ಕಾರಿಗಳು ಮೂರು ತಿಂಗಳ ಕಾಲ ಆಭಿಯಾನ ನಡೆಸಿ ಜನರ ನಾಡಿ ಮಿಡಿತ ಅರಿಯಬೇಕು. ಒಂದುವೇಳೆ ಪಕ್ಷದ ವಿರುದ್ಧ ಅಸಮಾಧಾನವಿದ್ದರೆ ಮನವೊಲಿಸಿ ಸರಿಪಡಿಸಬೇಕು ಎಂದು ಇತ್ತೀಚೆಗೆ ಮುಖಂಡರ ಸಭೆಯಲ್ಲಿ ರಾಜ್ಯ ಉಸ್ತು ವಾರಿ ರಣದೀಪ್‌ ಸಿಂಗ್‌ ಸುಜೇìವಾಲ ಪ್ರಸ್ತಾವಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಸಮಾವೇಶ ಪರ್ವ
ಡಿ.30- ವಿಜಯಪುರ, ಜ.2- ಹುಬ್ಬಳ್ಳಿ- ಧಾರವಾಡ, ಜ.10-ಚಿತ್ರದುರ್ಗದಲ್ಲಿ ಸಮಾವೇಶ ನಡೆ ಯ ಲಿದೆ. ಬಳಿಕ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ನೇತೃತ್ವ ದಲ್ಲಿ ಜಂಟಿ ಬಸ್‌ ಯಾತ್ರೆ ಜ.11ರಿಂದ ಆರಂಭ ವಾಗಲಿದೆ. ಜನವರಿ 28ರವರೆಗೆ ಸತತ 22 ಜಿಲ್ಲೆಗಳಲ್ಲಿ ಬೃಹತ್‌ ಸಮಾವೇಶ ನಡೆಯಲಿದ್ದು 44 ಜಿಲ್ಲಾ ಮಟ್ಟದ ನಾಯಕರ ಸಭೆ ಆಯೋಜಿಸಲಾಗಿದೆ.

Advertisement

ಇದಾದ ನಂತರ ಜ.30 ರಿಂದ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಪ್ರತ್ಯೇಕವಾಗಿ ಯಾತ್ರೆ ಹೊರಡಲಿದ್ದು ಎರಡು ತಿಂಗಳ ಕಾಲ 224 ವಿಧಾನಸಭೆ ಕ್ಷೇತ್ರಗಳಲ್ಲಿ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next