Advertisement
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿಮೇಕೆದಾಟು ಪಾದಯಾತ್ರೆಯ ಪೂರ್ವಭಾವಿಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿಆಡಳಿತ ವಿರೋಧಿ ಅಲೆ ಹೆಚ್ಚಿದೆ. ಇದಕ್ಕೆನಿದರ್ಶನವೆಂಬಂತೆ ಅನೇಕ ಕಡೆ ಸ್ಥಳೀಯಸಂಸ್ಥೆಗಳ ಚುನಾವಣೆಗಳಲ್ಲಿ ಪಕ್ಷ ಭರ್ಜರಿ ಜಯಸಾಧಿಸಿದೆ. ಮುಖ್ಯಮಂತ್ರಿ ತವರಿನ ಬಂಕಾಪುರದಲ್ಲೆ ನಮ್ಮ ಪಕ್ಷ ಸ್ಪಷ್ಟಬಹುಮತಪಡೆದಿದೆ. ಆದರೆ, ಪಕ್ಷದ ಕಾರ್ಯಕರ್ತರು ನಮ್ಮ ಪರವಾಗಿ ಜನರಿದ್ದಾರೆ ಎಂದು ಮೈಮರೆಯಬಾರದು. ನಮ್ಮಲ್ಲಿ ಜಡತ್ವಇದ್ದು ಇದು ತೊಲಗಬೇಕು. ಪಕ್ಷಕ್ಕೆಯುವ ಹಾಗೂ ವಿದ್ಯಾರ್ಥಿ ಸಮೂಹವನ್ನು ಸೆಳೆಯುವ ಪ್ರಯತ್ನ ಮಾಡಬೇಕು.ಮೇಕೆದಾಟು ಯೋಜನೆಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿರೂಪಿತವಾಗಿದ್ದರೂ ಇದಕ್ಕೆ ಕಳೆದ2 ವರ್ಷಗಳಿಂದಲೂ ಅನುಮೊದನೆನೀಡಿಲ್ಲ. ಇದರ ನಿಮಿತ್ತ ಮೇಕೆದಾಟು ಪಾದಯಾತ್ರೆ ಹಮ್ಮಿಕೊಳ್ಳಲಾಗಿದ್ದು ಜ.2 ರಂದುಚಾಮರಾಜನಗರದಲ್ಲಿ ಬೃಹತ್ ಮಟ್ಟದಕಾರ್ಯಕ್ರಮವನ್ನು ನಡೆಯಲಿದೆ. ಮಾಜಿಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷಡಿ.ಕೆ. ಶಿವಕುಮಾರ್ ಸೇರಿದಂತೆ ಹಲವುಮುಖಂಡರು ಭಾಗವಹಿಸಲಿದ್ದಾರೆ. ಇದಕ್ಕೆಪಟ್ಟಣ ಸೇರಿದಂತೆ ತಾಲೂಕಿನ ವಿವಿಧಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಪಕ್ಷದಕಾರ್ಯಕರ್ತರನ್ನು ಸೇರಿಸುವ ಕೆಲಸವಾಗಬೇಕು.ಇದರೊಂದಿಗೆ ಸದಸ್ಯತ್ವವನ್ನು ನೋಂದಣಿಮಾಡುವ ಕೆಲಸವನ್ನು ಮಾಡಬೇಕು ಎಂದರು.
Advertisement
ಕಾಂಗ್ರೆಸ್‌ನತ್ತ ಯುವಜನರನ್ನು ಸೆಳೆಯಿರಿ
12:52 PM Jan 02, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.