Advertisement

ಈ ಬಾರಿಯೂ ಕಾಂಗ್ರೆಸ್‌ ಗೆಲುವು ನಿಶ್ಚಿತ

01:33 PM Nov 30, 2021 | Team Udayavani |

ಜಗಳೂರು: ವಿಧಾನ ಪರಿಷತ್‌ನ ಚಿತ್ರದುರ್ಗ ಸ್ಥಳೀಯ ಸಂಸ್ಥೆಗಳ ಕ್ಷೇತ್ರ ಕಾಂಗ್ರೆಸ್‌ ಭದ್ರಕೋಟೆಯಾಗಿದ್ದು, ಪಕ್ಷದ ಅಭ್ಯರ್ಥಿ ಸೋಮಶೇಖರ್‌ ಮೂರು ಸಾವಿರಕ್ಕೂಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಮಾಜಿ ಸಚಿವ ಎಚ್‌. ಆಂಜನೇಯ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಪಟ್ಟಣದ ಅಂಬೇಡ್ಕರ್‌ ಭವನದಲ್ಲಿ ಜಗಳೂರು ವಿಧಾನಸಭಾ ಕ್ಷೇತ್ರದ ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ

ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ಸಭೆಉದ್ಘಾಟಿಸಿ ಅವರು ಮಾತನಾಡಿದರು. ಈ ಹಿಂದೆ ರಘು ಆಚಾರ್‌ ಎರಡು ಬಾರಿ ಗೆಲುವು ಸಾಧಿಸಿದ್ದಾರೆ.ಜೊತೆಗೆ ಮಾಜಿ ಶಾಸಕ ಎಚ್‌.ಪಿ. ರಾಜೇಶ್‌ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಹಾಗಾಗಿ ನಮ್ಮ ಪಕ್ಷದ ಅಭ್ಯರ್ಥಿ ಗೆಲುವು ನಿಶ್ವಿ‌ತ ಎಂದರು.

ಪ್ರಧಾನಿ ಮೋದಿಯವರು ಎರಡು ಕೋಟಿ ಉದ್ಯೋಗ ಕೊಡುತ್ತೇವೆ ಎಂದು ನೀಡಿದ್ದ ಭರವಸೆ ಹುಸಿಯಾಗಿದೆ. ಎಂಜಿಯರಿಂಗ್‌ ಸೇರಿದಂತೆ ಉನ್ನತ ಪದವಿ ಪಡೆದವರು ಪಕೋಡಾ ಮಾರಿ ಜೀವನ ನಡೆಸುವಂತಾಗಿದೆ. ರೈತರು ಪ್ರತಿಭಟನೆ ಮಾಡಿದರೆ ಗಮನ ಹರಿಸಲಿಲ್ಲ.ಬದಲಾಗಿ ಪ್ರತಿಭಟನೆ ಮಾಡುವ ರೈತರ ಮೇಲೆ ಕಾರು ಹತ್ತಿಸಿದರು. ಇಂತಹ ಕೆಟ್ಟ ಸರ್ಕಾರವನ್ನು ನೋಡಿಲ್ಲ ಎಂದು ವಾಗ್ಧಾಳಿ ನಡೆಸಿದರು.

ಸಚಿವ ಈಶ್ವರಪ್ಪ ಅವರು ಸೋಮಶೇಖರ್‌ ಯಾರೆಂದು ಗೊತ್ತಿಲ್ಲ ಎಂದು ಹೇಳುತ್ತಾರೆ. ಗ್ರಾಮ ಪಂಚಾಯಿತಿ ಸದಸ್ಯರಾಗಿ, ಅಧ್ಯಕ್ಷರಾಗಿ ನಿಗಮ ಮಂಡಳಿಯ ಅಧ್ಯಕ್ಷರಾಗಿ, ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಸೋಮಶೇಖರ್‌ ಕೆಲಸ ಮಾಡಿದ್ದಾರೆ. ಒಬ್ಬ ವ್ಯಕ್ತಿಯ ಬಗ್ಗೆ ವೈಯಕ್ತಿಕವಾಗಿ ಟಿಕೆ ಮಾಡಬಾರದು. ಇದು ಈಶ್ವರಪ್ಪ ಅವರಿಗೆ ಶೋಭೆ ತರುವಂತದಲ್ಲ ಎಂದು ತಿರುಗೇಟು ನೀಡಿದರು. ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಮಾತನಾಡಿ, 11 ಕ್ಷೇತ್ರಗಳ ಹಾಲಿ, ಮಾಜಿ ಶಾಸಕರು ಅಭ್ಯರ್ಥಿ ಸೋಮಶೇಖರ್‌ಗೆಬೆಂಬಲ ನೀಡಲಿದ್ದೇವೆ. ರಘು ಆಚಾರ್‌ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿ ಅಭಿವೃದ್ಧಿಗೆ ಸಹಕಾರ ನೀಡಿದ್ದರು ಎಂದು ಸ್ಮರಿಸಿದರು.

Advertisement

ಮಾಜಿ ಶಾಸಕ ಎಚ್‌.ಪಿ. ರಾಜೇಶ್‌ ಮಾತನಾಡಿ, ಸೋಮಶೇಖರ್‌ ಅವರು ಪಕ್ಷದ ಎಲೆಮರೆಯ ಕಾಯಿಯಂತೆ ಕೆಲಸ ಮಾಡಿದ್ದಾರೆ. ಇಲ್ಲಿನ ಶಾಸಕರು ತಮ್ಮ ಹಿಂಬಾಲಕರ ಮೂಲಕ ಅಧಿಕಾರ ನಡೆಸುತ್ತಿದ್ದಾರೆ ಎಂದು ದೂರಿದರು.

ಮೊಳಕಾಲ್ಮೂರು ಕ್ಷೇತಗ್ರದ ಮಾಜಿ ಶಾಸಕ ಎಸ್‌.ತಿಪ್ಪೇಸ್ವಾಮಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗುತ್ತಿಗೆದಾರರಿಂದ ಶೇ. 40 ಪರ್ಸಂಟೇಜ್‌ತೆಗೆದುಕೊಂಡರೆ ಅಭಿವೃದ್ಧಿ ಹೇಗೆ ಸಾಧ್ಯ, ಕಪ್ಪು ಹಣ ತರುತ್ತೇವೆ ಎಂದು ನಂಬಿಸಿ ಅಧಿ ಕಾರಕ್ಕೆ ಬಂದಮೋದಿ ನಂತರ ಭರವಸೆ ಈಡೇರಿಸಲಿಲ್ಲ ಎಂದು ಆರೋಪಿಸಿದರು.

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಎಚ್‌.ಬಿ. ಮಂಜಪ್ಪ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಷಂಷೀರ್‌, ಕೆಪಿಸಿಸಿ ಎಸ್‌ಟಿ ವಿಭಾಗದಅಧ್ಯಕ್ಷ ಕೆ.ಪಿ. ಪಾಲಯ್ಯ, ಬ್ಲಾಕ್‌ ಕಾಂಗ್ರೆಸ್‌ ಮಾಜಿ ಅಧ್ಯಕ್ಷತಿಪ್ಪೇಸ್ವಾಮಿ ಗೌಡ, ಸುರೇಶ್‌ ಗೌಡ, ಪಂಚಾಯತ್‌ರಾಜ್‌ ಚುನಾವಣಾ ವೀಕ್ಷಕಿ ನಾಗರತ್ನಮ್ಮ, ವಿಧಾನಸಭಾಕ್ಷೇತ್ರದ ಉಸ್ತುವಾರಿ ಕಲ್ಲೇಶ್‌ರಾಜ್‌ ಪಟೇಲ್‌,ಜಗದೀಶ್‌, ಪಲ್ಲಾಗಟ್ಟೆ ಶೇಖರಪ್ಪ, ಕಾಂಗ್ರೆಸ್‌ ಮಹಿಳಾ ಘಟಕದ ಅಧ್ಯಕ್ಷೆ ಕೆಂಚಮ್ಮ ಧನ್ಯಕುಮಾರ್‌ ಮತ್ತಿತರರು ಇದ್ದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವಿಕರಿಸಿದ ನಂತರ ಪ್ರತಿಯೊಬ್ಬರ ಹಸಿವು ನೀಗಿಸಲುಅನ್ನಭಾಗ್ಯ ಯೋಜನೆ ಜಾರಿಗೆ ತಂದುಅನ್ನರಾಮಯ್ಯರಾಗಿದ್ದಾರೆ. ಇವರ ಅಧಿ ಕಾರದಅವಧಿ ರಾಜ್ಯದಲ್ಲಿ ಸುವರ್ಣಯುಗವಾಗಿತ್ತು.– ಎಚ್‌. ಆಂಜನೇಯ, ಮಾಜಿ ಸಚಿವರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next