Advertisement

Congress: ಕೈ ಅಭ್ಯರ್ಥಿ ಆಯ್ಕೆಗೆ 5ನೇ ಸರ್ವೇ

11:40 PM Feb 14, 2024 | Team Udayavani |

ಬೆಂಗಳೂರು: ಲೋಕಸಭಾ ಚುನಾವಣೆ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ಸತತ ನಾಲ್ಕು ಸಮೀಕ್ಷೆಗಳನ್ನು ನಡೆಸಿದ ಅನಂತರವೂ ತೃಪ್ತಿ ಇಲ್ಲ; ಸಹಮತವೂ ಇಲ್ಲ. ಪರಿಣಾಮ ಇದೇ ವಿಚಾರಕ್ಕೆ ಮತ್ತೂಂದು ಸಮೀಕ್ಷೆ ನಡೆಸಲು ಪಕ್ಷದ ನಾಯಕರು ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಐದನೇ ಬಾರಿಗೆ ಸೂಕ್ತ ಅಭ್ಯರ್ಥಿಯ ಹುಡುಕಾಟಕ್ಕೆ ಕೈ’ ತಂಡ ಸಜ್ಜಾಗುತ್ತಿದೆ.

Advertisement

ಈಗಾಗಲೇ ಸುನೀಲ ಕನಗೋಳು ನೇತೃತ್ವದ ತಂಡವು ಸುಮಾರು ಎರಡು ತಿಂಗಳ ಹಿಂದೆಯೇ ಕ್ಷೇತ್ರಗಳಿಗೆ ಖುದ್ದು ತೆರಳಿ ಹಲವು ಮಾದರಿ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಸಮೀಕ್ಷೆ ನಡೆಸಿ, ಗ್ರೌಂಡ್‌ ರಿಪೋರ್ಟ್‌ ನೀಡಿತ್ತು. ಇದರ ಬೆನ್ನಲ್ಲೇ ಸ್ವತಃ ಎಐಸಿಸಿ ಪ್ರತ್ಯೇಕ ಸಮೀಕ್ಷೆ ನಡೆಸಿ ವರದಿ ತರಿಸಿಕೊಂಡು ತುಲನೆ ಮಾಡಿದೆ. ಈ ನಡುವೆ ಜಿಲ್ಲಾ ಉಸ್ತುವಾರಿಗಳು ಪಕ್ಷದ ಸೂಚನೆ ಮೇರೆಗೆ ವರದಿ ನೀಡಿದ್ದರು. ಅದರಲ್ಲಿ ಮೂರು-ನಾಲ್ಕು ಸಂಭವನೀಯ ಅಭ್ಯರ್ಥಿಗಳನ್ನು ಉಲ್ಲೇಖೀಸಲಾಗಿತ್ತು. ಮತ್ತೂಂದೆಡೆ ಸರಕಾರವೇ ಗುಪ್ತದಳದಿಂದಲೂ ಗೌಪ್ಯ ವರದಿ ತರಿಸಿಕೊಂಡಿದೆ ಎನ್ನಲಾಗಿದೆ.

ಹಾಗಂತ, ಈ ಎಲ್ಲ ಸಮೀಕ್ಷೆಗಳು ಕೇವಲ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದ್ದಾಗಿರಲಿಲ್ಲ; ಬದಲಿಗೆ ರಾಜ್ಯದಲ್ಲಿ ಕಾಂಗ್ರೆಸ್‌ ಅಲೆ ಹೇಗಿದೆ? ಮುಂದಿನ ಕಾರ್ಯತಂತ್ರಗಳಲ್ಲಿ ಅಗತ್ಯ ಮಾರ್ಪಾಡು ಮತ್ತಿತರ ಅಂಶಗಳನ್ನೂ ಆಧರಿಸಿದ್ದವು. ಇದೆಲ್ಲದರ ಹೊರತಾಗಿ ಮತ್ತೂಂದು ಸಮೀಕ್ಷೆ ನಡೆಸುವ ಇಂಗಿತವನ್ನು ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುಜೇìವಾಲ ನೇತೃತ್ವದಲ್ಲಿ ನಡೆದ ಸ್ಕ್ರೀನಿಂಗ್‌ ಕಮಿಟಿ ಅಭಿಪ್ರಾಯಪಟ್ಟಿದೆ.

ಸ್ವತಃ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಈ ಮಾಹಿತಿ ನೀಡಿದರು. ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ನಡೆದ ಚುನಾವಣ ಸಮಿತಿ ಸಭೆಯಲ್ಲಿ ಭಾಗವಹಿಸಿ ಅನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಮತ್ತೂಂದು ಸುತ್ತಿನ ಸಮೀಕ್ಷೆ ನಡೆಸಿ, ದೆಹಲಿಯಲ್ಲಿ ಸಭೆ ಮಾಡಲಿದ್ದೇವೆ’ ಎಂದು ತಿಳಿಸಿದರು.

ಬುಧವಾರ ನಡೆದ ಸಭೆಯಲ್ಲಿ ಪಕ್ಷದ ವೀಕ್ಷಕರು, ಜಿಲ್ಲಾ ಸಚಿವರು, ಕೆಲವು ಕಾರ್ಯಕರ್ತರು ಸಲ್ಲಿಸಿದ್ದ ವರದಿ ಹಾಗೂ ನಮ್ಮ ಸಮೀಕ್ಷಾ ವರದಿಗಳನ್ನು ಪರಾಮರ್ಶೆ ಮಾಡಿದ್ದೇವೆ. ಮತ್ತೂಂದು ಸುತ್ತಿನ ಸಮೀಕ್ಷೆ ಮೂಲಕ ಅಭಿಪ್ರಾಯ ಸಂಗ್ರಹಕ್ಕೆ ಸೂಚಿಸಿದ್ದೇವೆ. ಪಕ್ಷದ ಅಭ್ಯರ್ಥಿಗಳ ಪಟ್ಟಿ ಇನ್ನೂ ಅಂತಿಮವಾಗಿಲ್ಲ, ಮುಂದಿನ ಸುತ್ತಿನ ಸಭೆಯನ್ನು ದೆಹಲಿಯಲ್ಲಿ ನಡೆಸಲಾಗುವುದು. ಅಲ್ಲಿ ಬಹುತೇಕ ತೀರ್ಮಾನ ಕೈಗೊಳ್ಳಲಾಗುವುದು. ಬಜೆಟ್‌ ಅಧಿವೇಶನದ ಹಿನ್ನೆಲೆಯಲ್ಲಿ ಈ ಬಾರಿ ಬೆಂಗಳೂರಿನÇÉೇ ಸಭೆ ಮಾಡಲಾಗಿದೆ ಎಂದು ವಿವರಿಸಿದರು.

Advertisement

ಆರೇಳು ಕಡೆ ಕಗ್ಗಂಟು
ಈ ಮಧ್ಯೆ 28 ಲೋಕಸಭಾ ಕ್ಷೇತ್ರಗಳ ಪೈಕಿ 10 ರಿಂದ 12 ಕ್ಷೇತ್ರಗಳಲ್ಲಿ ತಲಾ ಬಹುತೇಕ ಓರ್ವ ಅಭ್ಯರ್ಥಿ ಹೆಸರು ಶಿಫಾರಸು ಮಾಡಲು ಸಿಎಂ-ಡಿಸಿಎಂ ಹಾಗೂ ರಣದೀಪ್‌ಸಿಂಗ್‌ ಸುಜೇìವಾಲ ನಡುವೆ ಒಮ್ಮತ ಮೂಡಿದೆ. ಆದರೆ, ತುಮಕೂರು, ಚಾಮರಾಜನಗರ, ಮೈಸೂರು-ಕೊಡಗು ಸೇರಿ ಆರೇಳು ಕ್ಷೇತ್ರಗಳ ವಿಚಾರದಲ್ಲಿ ಇಬ್ಬರೂ ನಾಯಕರ ನಡುವೆ (ಸಿಎಂ-ಡಿಸಿಎಂ) ಒಮ್ಮತ ಮೂಡದ್ದರಿಂದ ಕಗ್ಗಂಟಾಗಿ ಕೂತಿದೆ ಎಂದು ಮೂಲಗಳು ತಿಳಿಸಿವೆ. ಉಳಿದಂತೆ 10 ರಿಂದ 14 ಕ್ಷೇತ್ರಗಳಲ್ಲಿ ಇಬ್ಬರು ಸಂಭವನೀಯ ಅಭ್ಯರ್ಥಿಗಳನ್ನು ಹೈಕಮಾಂಡ್‌ಗೆ ಶಿಫಾರಸು ಮಾಡಲು ಉದ್ದೇಶಿಸಲಾಗಿದೆ. ಈ ಪಟ್ಟಿಯಲ್ಲಿ ಸಚಿವರ ಹೆಸರುಗಳೂ ಸೇರಿವೆ. ಆದರೆ, ಇನ್ಮುಂದೆ ನಡೆಸಲಾಗುವ ಸಮೀಕ್ಷೆ ವರದಿಯನ್ನೂ ಆಧರಿಸಿ ಅಭ್ಯರ್ಥಿಗಳ ಅಂತಿಮ ಪಟ್ಟಿ ಸಿದ್ಧಗೊಳ್ಳಲಿದೆ. ಹೆಚ್ಚು-ಕಡಿಮೆ ಮಾಸಾಂತ್ಯಕ್ಕೆ ಮೊದಲ ಹಂತದಲ್ಲಿ ಕನಿಷ್ಠ ಅರ್ಧದಷ್ಟು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುವ ಲೆಕ್ಕಾಚಾರವೂ ಇದೆ ಎನ್ನಲಾಗಿದೆ.

ಆದಷ್ಟು ಶೀಘ್ರ ಪಟ್ಟಿ ಅಂತಿಮ: ಡಿಕೆಶಿ
28 ಕ್ಷೇತ್ರಗಳ ಪೈಕಿ ಕನಿಷ್ಠ ಶೇ. 50ರಷ್ಟು ಅಭ್ಯರ್ಥಿಗಳಾದರೂ ಚುನಾವಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಸೂಚನೆ ನೀಡಬೇಕಿದ್ದು, ಈ ಹಿನ್ನೆಲೆಯಲ್ಲಿ ಆದಷ್ಟು ಬೇಗ ಪಟ್ಟಿ ಅಂತಿಮಗೊಳಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು. ಈ ತಿಂಗಳಲ್ಲಿ ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಲಿದೆಯೇ ಎಂದು ಸುದ್ದಿಗಾರರು ಕೇಳಿದಾಗ, ಆದಷ್ಟು ಬೇಗ ಪಟ್ಟಿ ಅಂತಿಮಗೊಳಿಸಬೇಕು.ಶೇ. 50ರಷ್ಟು ಅಭ್ಯರ್ಥಿಗಳಿಗಾದರೂ ಕೆಲಸ ಆರಂಭಿಸಲು ನಾವು ಸೂಚನೆ ನೀಡಬೇಕಿದೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next