ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 20 ಸ್ಥಾನಗಳನ್ನು ಗೆಲ್ಲಬೇಕೆಂದು ಸಂಕಲ್ಪ ಮಾಡಿರುವ ಆಡಳಿತಾರೂಢ ಕಾಂಗ್ರೆಸ್, ಡಿಸೆಂಬರ್ ಅಂತ್ಯದ ವೇಳೆಗೆ ಸಂಭವನೀಯ ಅಭ್ಯರ್ಥಿಗಳ ಸಾಧಕ- ಬಾಧಕ ಗಳ ಕುರಿತು ಕ್ಷೇತ್ರವಾರು ತಳ ಮಟ್ಟದ ಸಮೀಕ್ಷೆ ನಡೆಸಲಿದೆ. ಅಭ್ಯರ್ಥಿ ಗಳ ಆಯ್ಕೆಗೆ ಸಮೀಕ್ಷಾ ವರದಿಯನ್ನೇ ಮಾನದಂಡವಾಗಿ ಪರಿಗಣಿಸಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರೂ ಆಗಿ ರುವ ಉಪಮುಖ್ಯಮಂತ್ರಿ ಡಿ.ಕೆ. ಶಿವ ಕುಮಾರ್ ಅವರಿಗೆ ಲೋಕಸಭಾ ಚುನಾ ವಣೆ ಅತ್ಯಂತ ಪ್ರತಿಷ್ಠೆ ಹಾಗೂ ಸವಾಲು ಆಗಿರುವುದರಿಂದ ಜತೆಗೆ ಸರ ಕಾರವನ್ನು ಅಸ್ಥಿರಗೊಳಿಸಲು ಪ್ರಯ ತ್ನಿಸುತ್ತಿರುವ ಶಕ್ತಿಗಳಿಗೆ ತಕ್ಕ ಉತ್ತರ ಕೊಡಲು ಗುರಿ-20 ಮೀರಿದ ಲೋಕ ಸಭಾ ಫಲಿತಾಂಶ ನಿರೀಕ್ಷೆ ಯಲ್ಲಿ ದ್ದಾರೆ. ಹೀಗಾಗಿ ಕಾಂಗ್ರೆಸ್ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಅಭ್ಯರ್ಥಿ ಗಳ ಆಯ್ಕೆಗೆ ಅನುಸರಿಸಿದ ಪ್ರಕ್ರಿಯೆ ಯನ್ನು ಮತ್ತಷ್ಟು ವಿಭಿನ್ನ ಹಾಗೂ ಕಠಿನಗೊಳಿಸಲು ನಿರ್ಧರಿಸಿದೆ.
ಜಿಲ್ಲಾ ಉಸ್ತುವಾರಿ ಸಚಿವರು ತಮಗೆ ವಹಿಸಿದ ಲೋಕಸಭಾ ಕ್ಷೇತ್ರ ಗಳಲ್ಲಿ ಪ್ರವಾಸ ಮಾಡಿ ಸ್ಥಳೀಯರ ಅಭಿಪ್ರಾಯಕ್ಕೆ ಅನುಗುಣವಾಗಿ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಯನ್ನು ಕೆಪಿಸಿಸಿಗೆ ಸಲ್ಲಿಸಲು ನ. 15ರ ಗಡುವು ನೀಡಲಾಗಿದೆ.
ಆದರೆ ಪಂಚರಾಜ್ಯ ಚುನಾವಣೆ, ದೀಪಾವಳಿ ಹಬ್ಬ ಮತ್ತಿತರ ಕಾರಣ ಗಳಿಂದ ಇದು ಸಕಾಲಕ್ಕೆ ಪೂರ್ಣವಾಗುವುದು ಅನುಮಾನ. ಬಹುತೇಕ ಮುಂದಿನ 10 ದಿನಗಳ ಒಳಗೆ ಉಸ್ತುವಾರಿಗಳಿಂದ ಸಂಭವ ನೀಯ ಅಭ್ಯರ್ಥಿಗಳ ಪಟ್ಟಿ ಕೆಪಿಸಿಸಿ ಅಧ್ಯಕ್ಷರ ಕೈಸೇರಲಿದೆ.
ಸಮೀಕ್ಷೆ ವಿಭಿನ್ನ
ಉಸ್ತುವಾರಿಗಳು ಸಲ್ಲಿಸುವ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಕುರಿತು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುಜೇìವಾಲ ಅವರು ಪರಾಮರ್ಶಿಸಿದ ಬಳಿಕ ಎಐಸಿಸಿ ಹಾಗೂ ಕೆಪಿಸಿಸಿ ಹಂತದಲ್ಲಿ ಪ್ರತ್ಯೇಕವಾಗಿ ಎರಡು ಸಮೀಕ್ಷೆಗಳು ನಡೆಯಲಿವೆ.
ಎಐಸಿಸಿ ಬುಲಾವ್ ಮೇರೆಗೆ ರಾಜ್ಯದ 33 ಮಂದಿ ಹಿರಿಯ ನಾಯಕರು ಕಾಂಗ್ರೆಸ್ ಹೈಕಮಾಂಡ್‌ನೊಂದಿಗೆ ನಡೆಸಿದ ಸಮಾಲೋಚನ ಸಭೆಯಲ್ಲಿ ಜನವರಿ ವೇಳೆಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದರೆ ಚುನಾವಣೆ ಗೆಲ್ಲುವುದು ಸುಲಭವಾಗುತ್ತದೆ, ಇಡೀ ಕ್ಷೇತ್ರದಲ್ಲಿ ಪ್ರಚಾರ ಪ್ರವಾಸ ಮಾಡಬೇಕಿರುವುದರಿಂದ ಸಾಕಷ್ಟು ಸಮಯದ ಅಗತ್ಯವಿದೆ, ವಿಧಾನಸಭಾ ಚುನಾವಣೆಯಲ್ಲಿ ಕೊನೆ ಘಳಿಗೆಯಲ್ಲಿ ಟಿಕೆಟ್ ಘೋಷಿಸಿದರೆ ಕಷ್ಟವಾಗುತ್ತದೆ ಎಂದು ಮನವರಿಕೆ ಮಾಡಿಕೊಡಲಾಗಿದೆ. ಇದಕ್ಕೆ ಪೂರಕವಾಗಿ ಈಗ ಅಭ್ಯರ್ಥಿಗಳ ಅಯ್ಕೆ ಪ್ರಕ್ರಿಯೆ ಬೆಳವಣಿಗೆಗಳು ಸಾಗಿವೆ. ಬಹುತೇಕ ಡಿಸೆಂಬರ್‌ನಲ್ಲಿ ಸಮೀಕ್ಷೆ ಬಿರುಸಿನಿಂದ ನಡೆಯಲಿದೆ ಎಂದು ಕೆಪಿಸಿಸಿ ಉನ್ನತ ಮೂಲಗಳು ತಿಳಿಸಿವೆ. ಬಿಜೆಪಿ ವಿರುದ್ಧ ವಿಧಾನಸಭಾ ಚುನಾವಣೆಯಲ್ಲಿ ನಡೆಸಿದ ಆಕ್ರಮಣಕಾರಿ ಪ್ರಚಾರ ಶೈಲಿಯನ್ನೇ ಲೋಕಸಭಾ ಚುನಾವಣೆಗೂ ಮುಂದುವರಿಸಲು ಕಾಂಗ್ರೆಸ್ ನಿರ್ಧರಿಸಿದೆ.
-ಎಂ.ಎನ್. ಗುರುಮೂರ್ತಿ