ರಾಮನಗರ: ಜಾತ್ಯತೀತ ಮನೋಭಾವದೊಂದಿಗೆ, ಸರ್ವರಿಗೂ ಸಮಪಾಲು-ಸಮಬಾಳು ಎಂಬ ಧ್ಯೇಯದಲ್ಲಿ ಕಾಂಗ್ರೆಸ್ ದೇಶವನ್ನಾಳಿದ್ದು ಪಕ್ಷದ ನಾಯಕರು ಸಮಾಜಕ್ಕೆ ನೀಡಿದ ಕೊಡುಗೆ ಅಪಾರ ಎಂದು ರಾಮನಗರ-ಚನ್ನಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಿ.ಎನ್.ಆರ್.ವೆಂಕಟೇಶ್ ಹೇಳಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾಂಗ್ರೆಸ್ 136ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವ ಉದ್ದೇಶದಿಂದಲೇ ಕಾಂಗ್ರೆಸ್ ಅಸ್ಥಿತ್ವಕ್ಕೆ ಬಂದಿದೆ. ನಂತರ ಅಧಿಕಾರ ಹಿಡಿದ ಪಕ್ಷ ಪಂಚವಾರ್ಷಿಕ ಯೋಜನೆಗಳ ಮೂಲಕ ದೇಶದ ಒಟ್ಟಾರೆ ಅಭಿವೃದ್ಧಿಗೆ ಶ್ರಮಿಸಿದೆ. ಬಲಿಷ್ಠ ಭಾರತದ ನಿರ್ಮಾಣಕ್ಕಾಗಿ ಕಾಂಗ್ರೆಸ್ ಭದ್ರ ಬುನಾದಿ ಹಾಕಿದೆ ಎಂದು ತಿಳಿಸಿದರು.
ಅನೇಕ ನಾಯಕರಿಂದ ಪ್ರಾಣ ತ್ಯಾಗ: ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನರಸಿಂಹಮೂರ್ತಿ ಮಾತನಾಡಿ, ಕಾಂಗ್ರೆಸ್ ಎಂದೂದೇಶದ ಬದ್ಧತೆ ಮತ್ತು ಸಮಗ್ರತೆಗೆ ಬದ್ಧವಾಗಿದೆ. ಪಕ್ಷದ ನಾಯಕರುಇದೇ ಧ್ಯೇಯ, ಉದ್ದೇಶದೊಂದಿಗೆ ಶ್ರಮಿಸಿದ್ದಾರೆ. ಬ್ರಿಟೀಷರಿಂದ ದೇಶವನ್ನು ಮುಕ್ತ ಮಾಡುವಾಗ ಅನೇಕ ನಾಯಕರು ತಮ್ಮ ಪ್ರಾಣ, ಜೀವನ ತ್ಯಾಗ ಮಾಡಿದ್ದಾರೆಂದರು.
ಜನರೇ ಮುನ್ನೆಡೆಸುವ ಪಕ್ಷ ಕಾಂಗ್ರೆಸ್: ಕೆಪಿಸಿಸಿ ಸದಸ್ಯ ಕೆ.ರಮೇಶ್ ಮಾತನಾಡಿ, ಸ್ವಾತಂತ್ರ್ಯ ಸಂಗ್ರಾಮದಿಂದ ಇಂದಿನವರೆಗೆ ದೇಶದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್‌ನ ಎಲ್ಲ ಮಹನೀಯರು ದೇಶದಸಮಗ್ರತೆ ಮತ್ತು ವಿಕಾಸಕ್ಕಾಗಿ ದುಡಿದಿದ್ದಾರೆ. ಆಯಾ ಕಾಲಕ್ಕೆ ತಕ್ಕ ಬೇಡಿಕೆಯಂತೆ ಹೋರಾಟ ಮಾಡಿ ರಾಜಕೀಯ, ಆರ್ಥಿಕ,ಸಾಮಾಜಿಕ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಇದು ಕೆಲವೇ ಜನರ ಪಕ್ಷವಲ್ಲ. ಇದೊಂದು ದೇಶದ ಎಲ್ಲಾ ವರ್ಗದಜನರೇ ಮುನ್ನಡೆಸುವ ರಾಷ್ಟ್ರೀಯ ಪಕ್ಷ ಎಂದರು. ಕಾಂಗ್ರೆಸ್ ಸೇವಾದಳದ ವೆಂಕಟೇಶ್ ಮಾತನಾಡಿದರು. ಹಾಜರಿದ್ದ ಕಾಂಗ್ರೆಸ್ ಕಾರ್ಯ ಕರ್ತರು ಸಂವಿಧಾನದ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಬಿ.ಸಿ.ಪಾರ್ವತಮ್ಮ, ನಗರ ಘಟಕದ ಅಧ್ಯಕ್ಷಎ.ಬಿ.ಚೇತನ್ ಕುಮಾರ್, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷಮಹಮದ್ ನಿಜಾಂ ಷರೀಪ್, ಜಿಲ್ಲಾ ಜಾಗೃತಿ ಸಮಿತಿ ಸದಸ್ಯೆಕಾವ್ಯಾ, ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಡಿ.ಕೆ.ಶಿವ ಕುಮಾರ್, ಮಾಜಿ ಉಪಾಧ್ಯಕ್ಷ ಮುತ್ತುರಾಜು, ಕಾಂಗ್ರೆಸ್ ಮುಖಂಡ ರಾದ ಶಿವಶಂಕರ್, ಚಲುವರಾಜು, ಪಾಪಣ್ಣ, ಸೇವಾದಳದ ಅಧ್ಯಕ್ಷ ರಾಜು, ಕಚೇರಿ ಸಹಾಯಕ ತಿಮ್ಮಯ್ಯ, ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು, ಸೇವಾದಳ ಕಾರ್ಯಕರ್ತರು ಭಾಗವಹಿಸಿದ್ದರು.