Advertisement

ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅಭಿನಂದನೆ

06:30 PM Sep 22, 2022 | Team Udayavani |

ಚಾಮರಾಜನಗರ: ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಸಮಗ್ರ ಕ್ರೀಡಾ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದ ವೆಂಕಟಯ್ಯನಛತ್ರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದಲ್ಲೂ ತಮ್ಮ ಗೆಲುವಿನ ನಾಗಾಲೋಟವನ್ನು ಮುಂದುವರೆಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವುದನ್ನು ಕಾಲೇಜಿನ ಪ್ರಾಂಶುಪಾಲ ಎಸ್‌. ನಾಗೇಶ್‌ ಅಭಿನಂದಿಸಿದ್ದಾರೆ.

Advertisement

ಕಾಲೇಜಿನಲ್ಲಿ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಪ್ರಾಂಶುಪಾಲರು, ವಿದ್ಯಾರ್ಥಿಗಳ ಗೆಲುವಿಗೆ ಅಭಿನಂದನೆ ಸಲ್ಲಿಸಿದರು. ನಿರಂತರ ಶ್ರಮ ಮತ್ತು ಪ್ರಯತ್ನಕ್ಕೆ ಸಂದ ಗೆಲುವು ಇದು ಎಂದು ಹೇಳಿದರು.

ವಿದ್ಯಾರ್ಥಿಗಳಿಗೆ ಸದಾ ಬೆನ್ನೆಲುಬಾಗಿ ಶ್ರಮಿಸುತ್ತಾ ಅತ್ಯುತ್ತಮ ತರಬೇತಿ ನೀಡುತ್ತಿರುವ ಭೂಗೋಳಶಾಸ್ತ್ರ ಉಪನ್ಯಾಸಕ ಮಹಾಂತೇಶ ಕುರುಬರ ಅವರ ಶ್ರದ್ಧೆ ಮತ್ತು ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ರಾಜ್ಯ ಮಟ್ಟದ ಕ್ರೀಡಾಕೂಟದಲ್ಲೂ ಉತ್ತಮ ಸಾಧನೆ ಮೂಡಿಬರಲಿ ಎಂದು ಶುಭ ಕೋರಿದರು.

ಸೆ.20 ಮತ್ತು 21 ರಂದು ನಗರದ ಡಾ. ಬಿ. ಆರ್‌. ಅಂಬೇಡ್ಕರ್‌ ಜಿಲ್ಲಾ ಕ್ರೀಡಾಂಗಣದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ಸೇವಾಭಾರತಿ ಪದವಿ ಪೂರ್ವ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಆಯೋಜನೆಗೊಂಡಿದ್ದ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜು ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳು ಈ ವಿಶೇಷ ಸಾಧನೆ ಮಾಡಿದ್ದಾರೆ.

ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳವಿವರ ಹೀಗಿದೆ:- ಶೈಲಜಾ, 100ಮೀ ಹಾಗೂ 200ಮೀ ಓಟ ಪ್ರಥಮ ಸ್ಥಾನ, ಕಾವ್ಯಾ ಜಿ ಗುಡ್ಡಗಾಡು ಓಟ ಪ್ರಥಮ ಸ್ಥಾನ. 5000ಮೀ ಓಟ ದ್ವಿತೀಯ ಸ್ಥಾನ, ಹರಿಕೃಷ್ಣ ಉದ್ದ ಜಿಗಿತ ಪ್ರಥಮ ಸ್ಥಾನ. ಎತ್ತರ ಜಿಗಿತ ದ್ವಿತೀಯ ಸ್ಥಾನ, ನವೀನ್‌ ಕುಮಾರ್‌ ಗುಡ್ಡಗಾಡು ಓಟ ದ್ವಿತೀಯ ಸ್ಥಾನ , 5000ಮೀ ಓಟ ತೃತೀಯ ಸ್ಥಾನ, ತೇಜಸ್‌ 800ಮೀ ಓಟ ದ್ವಿತೀಯ ಸ್ಥಾನ. ಯೋಗೇಶ 5000 ಮೀ ದ್ವಿತೀಯ ಸ್ಥಾನ, ರಾಜೇಶ್‌ – 4/400 ರಿಲೇ ಪ್ರಥಮ ಸ್ಥಾನ, 4/400 ರಿಲೇ – ಪ್ರಥಮ ಸ್ಥಾನ – ಶೈಲಜಾ ವಿ, ಕಾವ್ಯ ಜಿ,. ಖೋ-ಖೋ – ದ್ವಿತೀಯ ಸ್ಥಾನ- ಶೈಲಜಾ ವಿ, ಕಾವ್ಯ ಜಿ, ನರ್ಮದಾ, ಖೋ-ಖೋ – ಪ್ರಥಮ ಸ್ಥಾನ ಮಹದೇವಸ್ವಾಮಿ, ಯೋಗೇಶ್‌, ಮಧುಕುಮಾರ್‌ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ಒಟ್ಟು 09 ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

Advertisement

ಈ ಸಂದರ್ಭದಲ್ಲಿ ಉಪನ್ಯಾಸಕ ಮಲ್ಲೇಶ, ಎಸ್‌. ಪ್ರಶಾಂತ, ಆರ್‌. ಮಹೇಶ್‌, ಎ. ಪೂರ್ಣಿಮಾ ಜೆ, ಅನಿತಾ ವಿ. ಗೋವಿಂದ, ಎಸ್‌. ಶೀಲಾವತಿ, ಮಹಾಂತೇಶ ಕುರುಬರ ಹಾಗೂ ಅತಿಥಿ ಉಪನ್ಯಾಸಕರು ಇತರರು ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next