Advertisement

ಕಾಂಗ್ರೆಸ್ ನಿಂದ ಖಾಕಿ ಚಡ್ಡಿ ಸುಡುವ ಚಿತ್ರ ಪೋಸ್ಟ್; ಬಿಜೆಪಿಯಿಂದ ವ್ಯಾಪಕ ಆಕ್ರೋಶ

02:56 PM Sep 12, 2022 | Team Udayavani |

ನವದೆಹಲಿ : ಆರ್ ಎಸ್ ಎಸ್ ನ ಈ ಹಿಂದಿನ ಸಮವಸ್ತ್ರದ ಭಾಗವಾಗಿದ್ದ ಖಾಕಿ ಚಡ್ಡಿ ಗೆ ಬೆಂಕಿ ಹಚ್ಚಿರುವ ಚಿತ್ರವನ್ನು ಟ್ವೀಟ್ ಮಾಡಿರುವ ಕಾಂಗ್ರೆಸ್ ಪಕ್ಷದ ವಿರುದ್ಧ ಬಿಜೆಪಿ ನಾಯಕರು ವ್ಯಾಪಕ ಆಕ್ರೋಶ ಹೊರ ಹಾಕಿದ್ದಾರೆ.

Advertisement

ಚಿತ್ರದೊಂದಿಗೆ ”ದೇಶವನ್ನು ದ್ವೇಷದ ಸಂಕೋಲೆಯಿಂದ ಮುಕ್ತಗೊಳಿಸಲು ಮತ್ತು ಬಿಜೆಪಿ-ಆರ್‌ಎಸ್‌ಎಸ್ ಮಾಡಿದ ಹಾನಿಯನ್ನು ಇಲ್ಲವಾಗಿಸಲು. ಹಂತ ಹಂತವಾಗಿ, ನಾವು ನಮ್ಮ ಗುರಿಯನ್ನು ತಲುಪುತ್ತೇವೆ. ” ಇನ್ನೂ 145 ದಿನಗಳು ಬಾಕಿಯಿದೆ,  ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ” ಎಂದು ಕಾಂಗ್ರೆಸ್ ಟ್ವೀಟ್ ಮಾಡಿತ್ತು.

ಇದನ್ನೂ ಓದಿ : ಜ್ಞಾನವಾಪಿ-ಶೃಂಗಾರ ಗೌರಿ ಪ್ರಕರಣ: ಹಿಂದೂಗಳ ಅರ್ಜಿ ಪುರಸ್ಕರಿಸಿದ ವಾರಾಣಸಿ ಕೋರ್ಟ್

ಬಿಜೆಪಿ ಇದು ಕಾಂಗ್ರೆಸ್ “ಹಿಂಸಾಚಾರಕ್ಕೆ ಪ್ರಚೋದನೆ” ನೀಡುತ್ತಿರುವುದು ಎಂದು ತಿರುಗೇಟು ನೀಡಿದ್ದು, ಪ್ರಮುಖ ನಾಯಕರು ಸೇರಿ ಹಲವಾರು ಮಂದಿ ಸಂಸದರು ವ್ಯಾಪಕ ಆಕ್ರೋಶ ಹೊರ ಹಾಕಿ, ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ್ದಾರೆ. ಕಾಂಗ್ರೆಸ್ ಮಾಡುತ್ತಿರುವುದು ”ಭಾರತ್ ತೊಡೋ” ಯಾತ್ರೆ ಎಂದು ಹೇಳಿದ್ದಾರೆ.

ಪ್ರಸ್ತುತ ಕೇರಳದಲ್ಲಿ ಕಾಂಗ್ರೆಸ್ ಯಾತ್ರೆ ನಡೆಯುತ್ತಿದ್ದು,ವಿರೋಧ ಪಕ್ಷವು ತಮ್ಮ ಕಾರ್ಯಕರ್ತರನ್ನು ಗುರಿಯಾಗಿಸಲು ದಕ್ಷಿಣ ರಾಜ್ಯದಲ್ಲಿ “ಭಯೋತ್ಪಾದಕರಿಗೆ” ಸಂಕೇತ ನೀಡಿದೆ ಎಂದು ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ, ಆರೋಪಿಸಿದ್ದಾರೆ.

Advertisement

ಭಾರತದ ಸಾಂವಿಧಾನಿಕ ವಿಷಯಗಳ ಯೋಜನೆಯಲ್ಲಿ ಹಿಂಸಾಚಾರಕ್ಕೆ ಅವಕಾಶವಿಲ್ಲ ಎಂದು ಹೇಳಿದ ಪಾತ್ರಾ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿ, ಪಕ್ಷ “ಬೆಂಕಿ” ಯೊಂದಿಗೆ ಹಳೆಯ ಸಂಬಂಧವನ್ನು ಹೊಂದಿದೆ. ಪಕ್ಷ ಅಧಿಕಾರದಲ್ಲಿದ್ದಾಗ ಪಂಜಾಬ್‌ಗೆ ಬೆಂಕಿ ಹಚ್ಚಲಾಯಿತು ಮತ್ತು 1984 ರ ಗಲಭೆಯಲ್ಲಿ ಸಿಖ್ಖರನ್ನು ಜೀವಂತವಾಗಿ ಸುಡಲಾಯಿತು ಎಂದು ಹೇಳಿದ್ದಾರೆ.

ತೇಜಸ್ವಿ ಸೂರ್ಯ ತಿರುಗೇಟು

”ಟ್ವೀಟ್ ಮಾಡಿರುವ ಚಿತ್ರವು ಕಾಂಗ್ರೆಸ್ ರಾಜಕೀಯದ ಸಂಕೇತವಾಗಿದೆ. ದೇಶದಲ್ಲಿ ಬೆಂಕಿ ಹೊತ್ತಿಸುತ್ತಿದೆ.ಈ ಹಿಂದೆ ಅವರು ಹಚ್ಚಿದ ಬೆಂಕಿ ಭಾರತದ ಬಹುತೇಕ ಭಾಗಗಳಲ್ಲಿ ಅವರನ್ನು ಸುಟ್ಟುಹಾಕಿದೆ. ರಾಜಸ್ಥಾನ ಮತ್ತು  ಛತ್ತೀಸ್ ಗಢದಲ್ಲಿ ಉಳಿದಿರುವ ಕೆಂಡ ಕೂಡ  ಶೀಘ್ರದಲ್ಲೇ ಬೂದಿಯಾಗುತ್ತದೆ” ಎಂದು ಸಂಸದ ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next