Advertisement

ಎಸ್‌ಯುವಿ ಅಪಘಾತದಲ್ಲಿ 6 ಸಾವು: ಕಾಂಗ್ರೆಸ್ ಶಾಸಕನ ಅಳಿಯನ ವಿರುದ್ಧ ಪ್ರಕರಣ

01:43 PM Aug 12, 2022 | |

ಆನಂದ್: ಎಸ್‌ಯುವಿ ವಾಹನ ಆಟೋರಿಕ್ಷಾ ಮತ್ತು ಮೋಟಾರ್‌ಸೈಕಲ್‌ಗೆ ಢಿಕ್ಕಿ ಹೊಡೆದು ಆರು ಜನರ ಸಾವಿಗೆ ಕಾರಣವಾದ ನಂತರ ಗುಜರಾತ್‌ನ ಕಾಂಗ್ರೆಸ್ ಶಾಸಕರೊಬ್ಬರ ಅಳಿಯನ ವಿರುದ್ಧ ಪೊಲೀಸರು ನರಹತ್ಯೆಯ ಪ್ರಕರಣವನ್ನು ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

Advertisement

ಆನಂದ್ ಪಟ್ಟಣವನ್ನು ತಾರಾಪುರಕ್ಕೆ ಸಂಪರ್ಕಿಸುವ ರಾಜ್ಯ ಹೆದ್ದಾರಿಯ ಸೋಜಿತ್ರಾ ಗ್ರಾಮದ ಬಳಿ ಗುರುವಾರ ಸಂಜೆ ಅಪಘಾತ ಸಂಭವಿಸಿದ್ದು, ಆರು ಮಂದಿ ಮೃತರಲ್ಲಿ ಮೂವರು ಮಹಿಳೆಯರು ಸೇರಿದ್ದಾರೆ ಎಂದು ಅವರು ಹೇಳಿದರು.

“ಆರೋಪಿಯನ್ನು ಕೇತನ್ ಪಾಧಿಯಾರ್ ಎಂದು ಗುರುತಿಸಲಾಗಿದ್ದು, ಸೋಜಿತ್ರಾ ಅಸೆಂಬ್ಲಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಪುನಂಭೈ ಪರ್ಮಾರ್ ಅವರ ಅಳಿಯ. ಘಟನೆಯಲ್ಲಿ ಗಾಯಗೊಂಡಿರುವ ಪಾಧಿಯಾರ್ ಪ್ರಸ್ತುತ ಆನಂದ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸೋಜಿತ್ರಾ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಎ ಪಿ ಪರ್ಮಾರ್ ತಿಳಿಸಿದ್ದಾರೆ.

ಪಾಧಿಯಾರ್ ನಮ್ಮ ನಿಗಾದಲ್ಲಿದ್ದಾರೆ ಮತ್ತು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ ಅವರನ್ನು ಬಂಧಿಸಲಾಗುವುದು. ಅವರು ವಾಹನವನ್ನು ಚಾಲನೆ ಮಾಡುವಾಗ ಮದ್ಯದ ಅಮಲಿನಲ್ಲಿದ್ದರೇ ಎಂದು ಪರಿಶೀಲಿಸಲು ನಾವು ಅವರ ರಕ್ತದ ಮಾದರಿಗಳನ್ನು ವಿಶ್ಲೇಷಣೆಗೆ ಕಳುಹಿಸಿದ್ದೇವೆ, ಮೃತ ಆರು ಮಂದಿ ಜಿಲ್ಲೆಯ ಸೋಜಿತ್ರಾ ಮತ್ತು ಬೊರಿಯಾವಿ ಗ್ರಾಮದ ನಿವಾಸಿಗಳು ಎಂದು ಸ್ಥಳೀಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಎಸ್‌ಯುವಿ ಚಲಾಯಿಸುತ್ತಿದ್ದ ಎನ್ನಲಾದ ಪಾಧಿಯಾರ್ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ಆದರೆ ನಂತರ ಆತನನ್ನು ಪತ್ತೆ ಹಚ್ಚಿ ಹಿಡಿಯಲಾಯಿತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಜಿತ್ ರಾಜಿಯನ್ ತಿಳಿಸಿದ್ದಾರೆ. ಪಾಧಿಯಾರ್ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 304 ರ ಅಡಿಯಲ್ಲಿ ಕೊಲೆಗೆ ಸಮನಾಗದ ತಪ್ಪಿತಸ್ಥ ನರಹತ್ಯೆ ಮೊಕದ್ದಮೆ ದಾಖಲಿಸಲಾಗಿದೆ ಎಂದು ಅವರು ಹೇಳಿದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next