Advertisement

ಹೊಸಬರ ಪ್ರಮೋಶನ್ ಕನ್ ಫ್ಯೂಶನ್!

03:37 PM Jan 29, 2021 | Team Udayavani |

ಇದೇ ಫೆಬ್ರವರಿ ಮೊದಲ ವಾರದಿಂದ ಮೇ ಎರಡನೇ ವಾರದವರೆಗೆ ಕನ್ನಡದಲ್ಲಿ ಬಿಡುಗಡೆಯಾಗಲಿರುವ ಬಹುತೇಕ ಸ್ಟಾರ್‌ ನಟರ, ಬಿಗ್‌ ಬಜೆಟ್‌ ಸಿನಿಮಾಗಳ ರಿಲೀಸ್‌ ಡೇಟ್‌ ಅಧಿಕೃತವಾಗಿ ಅನೌನ್ಸ್‌ ಆಗಿದೆ. ಎರಡು-ಮೂರು ವಾರಗಳ ಅಂತರದಲ್ಲಿ ಒಂದರ ಹಿಂದೊಂದು ಸ್ಟಾರ್‌ ನಟರ ಸಿನಿಮಾಗಳು ಬಿಡುಗಡೆಯಾಗುತ್ತಿದ್ದು, ಕನಿಷ್ಟ ಅಂದ್ರೂ ಏಳು-ಎಂಟು ಬಿಗ್‌ ಬಜೆಟ್‌ ಸಿನಿಮಾಗಳು ತೆರೆಗೆ ಬರೋದು ಪಕ್ಕಾ ಆಗಿದೆ. ಆದರೆ ಈಗ ಗೊಂದಲ ಇರುವುದು ಹೊಸಬರ ಸಿನಿಮಾಗಳ ಬಿಡುಗಡೆಯ ಬಗ್ಗೆ.

Advertisement

ಇಲ್ಲಿಯವರೆಗೆ ಸ್ಟಾರ್ ಸಿನಿಮಾಗಳು ಬರಲಿ, ಬಿಗ್‌ ಬಜೆಟ್‌ ಸಿನಿಮಾಗಳು ರಿಲೀಸ್‌ ಆಗಲಿ ಆಮೇಲೆ ನೋಡೋಣ, ಅಂಥ ಕಾಯುತ್ತಿದ್ದ ಹೊಸಬರ ಸಿನಿಮಾಗಳು, ಈಗ ಇಷ್ಟೊಂದು ಸ್ಟಾರ್ ಸಿನಿಮಾಗಳ ನಡುವೆ ನಾವು ಯಾವಾಗ ಬರೋದು ಎಂಬ ಚಿಂತೆಯಲ್ಲಿದ್ದಾರೆ.  ಹೌದು, ಒಂದಷ್ಟು ಸ್ಟಾರ್ ಸಿನಿಮಾಗಳು ರಿಲೀಸ್‌ ಆದ್ರೆ ಆಡಿಯನ್ಸ್‌ ಮೊದಲಿನಂತೆ ಥಿಯೇಟರ್‌ಗೆ ಬರುತ್ತಾರೆ ಎಂಬ ಲೆಕ್ಕಾಚಾರದಲ್ಲಿದ್ದ ಹೊಸ ಸಿನಿಮಾಗಳ ನಿರ್ಮಾಪಕರು, ಈಗ ಸ್ಟಾರ್ ಸಿನಿಮಾಗಳ ಮಧ್ಯೆ ಬರಬೇಕಾ? ಬೇಡವಾ? ನಮಗೆ ಥಿಯೇಟರ್‌ಗಳು ಸಿಗುತ್ತವಾ? ಇಲ್ಲವಾ? ಅನ್ನೋ ಮತ್ತೂಂದು ಯೋಚನೆಯಲ್ಲಿದ್ದಾರೆ.

ಇದನ್ನೂ ಓದಿ:ಇಂದು ರಾಮಾರ್ಜುನ ತೆರೆಗೆ: ಇಂಟರ್‌ನೆಟ್‌ ಕೆಟ್ಟೋಯ್ತು, ಸಿನ್ಮಾ ಸ್ಟಾರ್‌ ಬದಲಾಯ್ತು!

ಯಾವ ಸ್ಟಾರ್‌ ಸಿನಿಮಾಗಳ ಮುಂದೆ – ಹಿಂದೆ ಬಿಡುಗಡೆ ಯಾದರೆ, ಏನೇನು ಲಾಭ, ಏನೇನು ನಷ್ಟ ಎಂಬ ಲೆಕ್ಕಾಚಾರದಲ್ಲಿ ಕೆಲ ಹೊಸ ಸಿನಿಮಾಗಳ ನಿರ್ಮಾಪಕರಿದ್ದರೆ, ಇನ್ನು ಕೆಲ ನಿರ್ಮಾಪಕರು “ಇಷ್ಟು ದಿನಗಳಿಂದ ಕಾದು ಕಾದು ಸಾಕಾಗಿದೆ, ಆಗಿದ್ದಾಗಲಿ ಸ್ಟಾರ್ ಸಿನಿಮಾಗಳ ಮಧ್ಯದಲ್ಲೇ ನಮ್ಮ ಸಿನಿಮಾಗಳನ್ನೂ ರಿಲೀಸ್‌ ಮಾಡಿ ಒಂದು ಕೈ ನೋಡೋಣ’ ಎಂಬ ಹುಂಬು ಧೈರ್ಯದಲ್ಲಿದ್ದಾರೆ. ಮತ್ತೆ ಕೆಲವರು “ಏನೋ ಸಿನಿಮಾ ಮಾಡಿದ್ದೇವೆ.  ಹೇಗೋ ರಿಲೀಸ್‌ ಮಾಡಿ ಕೈ ತೊಳೆದುಕೊಂಡರೆ ಸಾಕು’ ಎಂಬ ಮನಸ್ಥಿತಿಯಲ್ಲಿದ್ದಾರೆ. ಆದರೆ ಮುಂದಿನ ಮೂರು ತಿಂಗಳು ತೆರೆಕಾಣಲಿರುವ ಸ್ಟಾರ್ ಸಿನಿಮಾಗಳ ರಿಲೀಸ್‌ ಡೇಟ್‌ ಅನೌನ್ಸ್‌ ಆಗಿ ಎರಡು ವಾರ ಕಳೆದರೂ, ಹೊಸಬರು ಮಾತ್ರ ತಮ್ಮ ಸಿನಿಮಾಗಳ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡೋದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಸದ್ಯ ಬಿಡುಗಡೆಗೆ ಸಿದ್ಧವಾಗಿರುವ ಸುಮಾರು 80ಕ್ಕೂ ಹೆಚ್ಚು ಹೊಸಬರ ಸಿನಿಮಾಗಳಿಗೆ ತಮ್ಮ ಬಿಡುಗಡೆಯ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ.

ಕನ್ನಡ ಚಿತ್ರರಂಗದಲ್ಲಿ ಇವತ್ತಿನ ಸಿನಿಮಾಗಳ ಕ್ಯೂ ನೋಡಿದ್ರೆ, ಒಂದು ಸಿನಿಮಾವಕ್ಕೆ ಕನಿಷ್ಟ ಪ್ರಚಾರ ಕೊಡಬೇಕು, ಪ್ರೇಕ್ಷಕರಿಗೆ ಆ ಸಿನಿಮಾದ ಬಗ್ಗೆ ಸ್ವಲ್ಪವಾದ್ರೂ ಗೊತ್ತಾಗಬೇಕು ಅಂದ್ರೆ ಏನಿಲ್ಲವೆಂದರೂ, ಒಂದೂವರೆ – ಎರಡು ತಿಂಗಳು ಸಮಯ ಬೇಕೇ ಬೇಕು. ಆದರೆ ಈ ತಮ್ಮ ಸಿನಿಮಾ ಬಿಡುಗಡೆ¿ ಡೇಟ್‌ ಬಗ್ಗೆಯೇ ಅನೇಕ ಹೊಸ ನಿರ್ಮಾಪಕ, ನಿರ್ದೇಶಕರಿಗೆ ಖಾತ್ರಿಯಿಲ್ಲ. ಹೀಗಿರುವಾಗ, ಈಗಲೇ ಪ್ರಚಾರ ಕೆಲಸಗಳನ್ನು ಶುರು ಮಾಡಿ, ಅದಕ್ಕೊಂದಷ್ಟು ಹಣ ಖರ್ಚು ಮಾಡಿದರೆ, ಮುಂದೆ ಹೇಗೆ ಎಂಬ ಗೊಂದಲವು ಹೊಸ ನಿರ್ಮಾಪಕರನ್ನು ಕಾಡುತ್ತಿದೆ

Advertisement

ಈ ಬಗ್ಗೆ ಮಾತನಾಡುವ ಹಿರಿಯ ನಿರ್ಮಾಪಕರೊಬ್ಬರು, “ಬೇರೆ ಭಾಷೆಗಳಲ್ಲಿ ಇರುವಂತೆ ನಮ್ಮ ಸಿನಿಮಾಗಳ ರಿಲೀಸ್‌ಗೆ ಪಕ್ಕಾ ಪ್ಲಾನಿಂಗ್‌ ಅಂತಿಲ್ಲ. ಹೀಗಾಗಿಯೇ ಪ್ರತಿವರ್ಷ ಇಂಥ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ನಮ್ಮಲ್ಲಿ ಸಿನಿಮಾಗಳನ್ನು ಶುರು ಮಾಡುವ ಮೊದಲೇ ಅದರ ಪ್ರೊಡಕ್ಷನ್‌, ಪೋಸ್ಟ್‌ ಪ್ರೊಡಕ್ಷನ್‌, ರಿಲೀಸ್‌ ಮಾಡುವ ಬಗ್ಗೆ ಪಕ್ಕಾ ಪ್ಲಾನಿಂಗ್‌ ಇಟ್ಟುಕೊಂಡಿರಬೇಕು. ಹಾಗಾದಾಗ ಮಾತ್ರ ಸ್ವಲ್ಪ – ಹೆಚ್ಚು ಕಡಿಮೆಯಾದ್ರೂ, ಅಂದುಕೊಂಡ ರೀತಿಯಲ್ಲಿ ಸಿನಿಮಾ ರಿಲೀಸ್‌ ಮಾಡೋದಕ್ಕೆ ಸಾಧ್ಯ’ ಎನ್ನುತ್ತಾರೆ.

“ಸಿನಿಮಾದ ಪ್ರತಿ ಹಂತದಲ್ಲೂ ಇಂತಿಷ್ಟು ಬಜೆಟ್‌ ಅಂತ ಇಟ್ಟುಕೊಂಡಿರಬೇಕು. ಆದ್ರೆ ನಮ್ಮಲ್ಲಿ ಸಿನಿಮಾದ ರಿಲೀಸ್‌ನಲ್ಲಿ ಹೀಗಾಗುತ್ತಿಲ್ಲ. ಯಾರೋ ಒಬ್ಬರು ಸಿನಿಮಾ ಶುರು ಮಾಡ್ತಾರೆ. ಇನ್ನೊಬ್ಬರು ಅದನ್ನು ಮುಂದುವರೆಸುತ್ತಾರೆ, ಮತ್ತೂಬ್ಬರು ಅದನ್ನು ಮುಗಿಸುತ್ತಾರೆ. ಆಮೇಲೆ ಅದನ್ನು ಇನ್ನಾéರೋ ಒಬ್ಬರು ರಿಲೀಸ್‌ ಮಾಡ್ತಾರೆ. ಹೀಗಾದಾಗ ಒಂದೊಳ್ಳೆ ಸಿನಿಮಾವಾದರೂ ಅದು ಪ್ರೇಕ್ಷಕರನ್ನು ತಲುಪುವುದೇ ಇಲ್ಲ. ಪ್ರಮೋಶನ್‌ ಕೂಡ ಅಷ್ಟೇ ಮುಖ್ಯ’ ಎಂದು ಹೊಸಬರಿಗೆ ಕಿವಿಮಾತು ಹೇಳುತ್ತಾರೆ ಹಿರಿಯ ವಿತರಕರೊಬ್ಬರು.

ಜಿ.ಎಸ್.ಕಾರ್ತಿಕ ಸುಧನ್

Advertisement

Udayavani is now on Telegram. Click here to join our channel and stay updated with the latest news.

Next