ಅ ಆ ಇ ಈ ತಿದ್ದಿ ಉರುಹೊಡೆಯಲಾರಂಭಿಸಿದ ದಿನಗಳಿಂದ ಹಿಡಿದು ಇಂದಿನ- ಅಂದರೆ ಮುಂದಿನ ಎಪ್ಪತ್ತೆರಡು ಸಂವತ್ಸರಗಳವರೆಗೂ-ಗಣಿತ, ವಿಜ್ಞಾನ, ಇಂಗ್ಲಿಷ್‌ಗಳೆಂದರೆ ನನ್ನ ಪಾಲಿಗೆ ಸಿಂಹಸ್ವಪ್ನ! ನಂಬುತ್ತೀರೋ ಇಲ್ಲವೋ ನೀವು ನನ್ನ ಇಂಗ್ಲಿಶ್ ಪಾಂಡಿತ್ಯ ಕಂಡು ಬಲ್ಲವರ ಮೈ ಬೆಚ್ಚಿ ಬೆವರುವುದುಂಟು. ವುಲ್ಡ್ (ವುಡ್), ಕುಲ್ಡ್ (ಕುಡ್), ಶುಲ್ಡ್ (ಶುಡ್) ಎಂದು ತಮ್ಮ ಇಂಗ್ಲಿಶ್ ಪಾಂಡಿತ್ಯವನ್ನು ಪ್ರಾಂಜಲ ಮನಸ್ಸಿನಿಂದ ಧಾರೆಯೆರೆದ ಬಯಲುಸೀಮೆಯ ಹುಚ್ಚಪ್ಪಮಾಸ್ತರನ್ನು ಕೊನೆಉಸಿರಿನವರಿಗೂ ಕೃತಜ್ಞತಾಭಾವದಿಂದ ಸ್ಮರಿಸುವ ಶಿಷ್ಯಕೋಟಿಯಲ್ಲಿ ನಾನೂ ಒಬ್ಬ ಎಂಬುದೇ ನನ್ನ ಹೆಮ್ಮೆ ! ಪ್ರಾಥಮಿಕ ಶಾಲೆಯÇÉೇ ನನ್ನ ಗಣಿತದ ಪಾಂಡಿತ್ಯದ ಮಹಿಮೆಗೆ ಬೆಕ್ಕಸ ಬೆರೆಗಾದ ಬಯಲುಸೀಮೆಯಿಂದಲೇ ಬಂದಿದ್ದ ಕೆಂಚಪ್ಪ ಮಾಸ್ತರು ದಡ್ಡ ಶಿಖಾಮಣಿ ಪಟ್ಟಕಟ್ಟಿ, “”ತಲೆಯೊಳಗೆ ಏನ್ ಎಮ್ಮೆ ಸೆಗಣಿ ತುಂಬಿಕುಂಡಿಯನೆಲೇ!?” ಎಂದು ಬೆತ್ತ ಹಿಡಿದು ಬಾರಿಸಿದರು. ಕಿವಿ ಹಿಂಡಿ ಎತ್ತಿ ಪ್ರಶ್ನಿಸಿದರು. ಮೇಜಿನ ಮೇಲೆ ಹಸ್ತ ಇಡಲು ಹೇಳಿ ಕೈ ಬೆರಳಗಂಟುಗಳಿಗೆ ರೂಲರ್‌ನಿಂದ ಬಾರಿಸಿ ನೋಡಿದರು. ಬೆಂಚ್ ಮೇಲೆ ಹತ್ತಿಸಿ ಪೀರಿಯಡ್‌ಗಟ್ಟಲೆ ನಿಲ್ಲಿಸಿದರು. ಒಂದು ಎರಡು ಎಣಿಸುತ್ತ ಐವತ್ತು-ಅರವತ್ತು ಸಲ ಕೂತು ಏಳಿಸಿ ಪ್ರಯೋಗ ಮಾಡಿದರು. ಪರಂಗಿ ಮಣೆ ತಾಲೀಮು ನಡೆಸಿದರೂ ಪರಿಸ್ಥಿತಿ ಸುಧಾರಿಸಲಿಲ್ಲ. ನನ್ನ ದಡ್ಡ ಶಿಖಾಮಣಿ ಪಟ್ಟಕ್ಕೆ ಅರೆಗುಲಗುಂಜಿಯ ಲೋಪವೂ ಆಗದಿದ್ದನ್ನು ಕಂಡು, ಬೇರೆ ದಾರಿ ಕಾಣದೆ ನನ್ನ ಪಾಂಡಿತ್ಯದ ಬಗ್ಗೆ ಮನೆಯವರಿಗೆ ಕಂಪ್ಲೇಂಟ್ ಮಾಡಿದರು. “”ಮನೆಯಲ್ಲಿ ಅವನು ಯಾರಿಗೂ ಕೇರೇ ಮಾಡಲ್ಲ ಮೇಸ್ಟ್ರೇ, ಏತಿ ಎಂದರೆ ಪ್ರೇತಿ ಅನ್ನುತ್ತಾನೆ. ಉಪಟಳ ತಡೆಯಲಾರದೇ ಶಾಲೆಗೆ ಸಾಗ್ ಹಾಕಿದೀವಿ. ಅವನ್ ತಿದ್ದಕ್ಕೆ ಮೇಸ್ಟ್ರಾದ ನಿಮ್ಮ ಕೈಯಲ್ಲಿ ಮಾತ್ರ ಸಾಧ್ಯ! ಎಷ್ಟು ಬೇಕಾರೂ ಹೊಡೀರಿ, ಬಡಿರೀ. ನಾವೇನು ಬ್ಯಾಡ ಅನ್ನೋಲ್ಲ. ಏನೋ ನಾಲ್ಕ್ ಅಕ್ಷರ ಕಲ್ಸಿ ಪುಣ್ಯ ಕಟ್ಟಿಕೊಳ್ಳಿ. ಮುಂದೆ ನಿಮ್ಮ ಹೆಸ್ರು ಹೇಳಿಕೊಂಡು ಬದುಕಲಿ ಬಿಡಿ”.
ಮನೆಯವರು ಇಷ್ಟು ಮಾತು ಹೇಳಿದ್ದೇ ಸಾಕಾಯ್ತು. ಉಗ್ರಶಿಕ್ಷೆ ನೀಡುವ ಮೂಲಕ ಕೆಂಚಪ್ಪ ಮೇಸ್ಟ್ರೆ ನನ್ನ-ಗಣಿತದ ಬಾಂಧವ್ಯಕ್ಕೆ ಎಳ್ಳು-ನೀರು ಬಿಡಿಸುವುದರಲ್ಲಿ ಯಶಸ್ವಿಯಾಗಿ ಬಿಟ್ಟರು. (ಎಂಥ ದುರದೃಷ್ಟವಂತ ನೋಡಿ ನಾನು, ಆಗಿನ್ನೂ ಯಾವ ಕನ್ನಡ ಚಾನಲ್ ಇರಲಿ, ಟಿವಿಯೇ ಹುಟ್ಟಿರಲಿಲ್ಲ!). ಕೆಂಚಪ್ಪ ಮೇಸ್ಟ್ರೆ , ನನಗೆ ಗಣಿತ ಕಲಿಸುವಲ್ಲಿ ಎಷ್ಟು ಯಶಸ್ವಿಯಾಗಿದ್ದರೆಂದರೆ ಈಗಲೂ ಲೆಕ್ಕಾಚಾರ ಮಾಡುವಾಗ, ನೋಟು ಎಣಿಸುವಾಗ ಅವರ ವ್ಯಕ್ತಿತ್ವ ನನ್ನ ಕಣ್ಣಿಗೆ ಕಟ್ಟುತ್ತದೆ. ಮುಂದೆ ಹೈಸ್ಕೂಲ್‌ನಲ್ಲಿ ಆಲ್‌ಜಿಬ್ರಾ, ಜಾಮೀಟ್ರಿ ನನ್ನನ್ನು ಇನ್ನಷ್ಟು ತಬ್ಬಿಬ್ಬುಗೊಳಿಸಿದವು. ಪ್ಲಸ್ ಇಂಟು ಪ್ಲಸ್ ಇಸ್ ಇಕೋಲ್ಟಾ ಪ್ಲಸ್, ಪ್ಲಸ್ ಇಂಟು ಮೈನಸ್ ಇಸ್ ಇಕೋಲ್ಟಾ ಮೈನಸ್ - ಎಂಥ¨ªೋ ಸುಡುಗಾಡು, ಬೇರೆಯವರಿಗೆ ಬಹಳ ಸರಳವಾದ ಸೂತ್ರವಿದೆಯಲ್ಲ, ನನ್ನ ಪಾಲಿಗೆ ಅದು ಕಬ್ಬಿಣದ ಕಡಲೆ!
ನೂರು-ಸಾವಿರದವರೆಗೆ ಸರಾಗವಾಗಿ ಸಾಗುವ ಎಣಿಕೆ ಮುಂದೆ ಇಂದಿಗೂ ನನ್ನನ್ನು ಕಕ್ಕಾಬಿಕ್ಕಿಗೊಳಿಸಿ ಕೈಕಾಲು ಥರಗುಟ್ಟುತ್ತವೆ. ಮೈ ಬೆವರುವಂತೆ ಮಾಡುತ್ತವೆ. ಲಕ್ಷಗಟ್ಟಲೆ ಹಣ ಎಣಿಸುವ ಸಂದರ್ಭಗಳು ನನ್ನ ಜೀವಮಾನದಲ್ಲಿ ಬಂದದ್ದು ಬೆರಳೆಣಿಕೆಯಷ್ಟು ಮಾತ್ರ! ಆಗ ಸ್ನೇಹಿತರ ನೆರವು ಪಡೆದಿದ್ದೇನೆಂಬುದು ವಾಸ್ತವ. ಇನ್ನು ಕೋಟಿ ಕನಸ್ಸಿನಲ್ಲೂ ಕಂಡಿಲ್ಲ ಬಿಡಿ!
ಬಾಲ್ಯದಿಂದ ಹಿಡಿದು ಇಂದಿನವರೆಗೂ ನ್ಯೂಸ್‌ಪೇಪರ್ ಓದುವುದು ನನ್ನ ದುರಭ್ಯಾಸ. ಅದರಲ್ಲಿ ಬರುವ ಭ್ರಷ್ಟಾಚಾರದ ಸುದ್ದಿಗಳೆಂದರೆ ವಿಶೇಷ ಆಕರ್ಷಣೆ. ಮೊದಮೊದಲು ನೂರು-ಸಾವಿರ ರೂ. ತಿನ್ನುವುದೇ ದೊಡ್ಡ ಸುದ್ದಿಯಾಗಿದ್ದರೆ ಮುಂದೆ ಅದು ಲಕ್ಷ-ಕೋಟಿ ಮೀರಿ, ಈಗ ಸಾವಿರ ಲಕ್ಷಲಕ್ಷ ಕೋಟಿಕೋಟಿಗೆ ತಲುಪಿದೆ. ಅಷ್ಟನ್ನೆಲ್ಲ ಲೆಕ್ಕತಪ್ಪದೇ ಹೇಗೆ ಎಣಿಸುತ್ತಾರೆ ಆ ಭ್ರಷ್ಟ ಶಿಖಾಮಣಿಗಳು ಎಂಬುದೇ ನನ್ನ ಪಾಲಿನ ಶೇಷಪ್ರಶ್ನೆ !
ಗಣಿತ ನನಗೆ ದಡ್ಡಶಿಖಾಮಣಿ ಪಟ್ಟ ಕಟ್ಟಿದರೆ ವಿಜ್ಞಾನ ನನಗೆ ಮಹಾ ಅ(ವಿ)ಜ್ಞಾನಿ ಡಾಕ್ಟrರೇಟ್ ಪಡೆಯುವಲ್ಲಿ ಸಹಕಾರಿಯಾಯಿತು. ಮಹಾ ಅ(ವಿ)ಜ್ಞಾನಿ ಡಾಕ್ಟರೇಟ್ ಪದವಿ ನೀಡಿ ಹೈಸ್ಕೂಲ್ ದಿನಗಳÇÉೇ ನನ್ನನ್ನು ಗೌರವಿಸಿದವರು ಸಾಯನ್ಸ್ ಟೀಚರ್ ಆಗಿದ್ದ ಎಲಿಜಬೆತ್ ಮಿಸ್. ಮಿಸ್ ಕೇವಲ ಸೈನ್ಸ್ ಟೀಚರ್ ಮಾತ್ರವಲ್ಲ; ಜಿಯೋಗ್ರಫಿ ಮೇಡಂ ಕೂಡ (ನನ್ನ ಕರ್ಮ!). ಬಾಳೇಹಣ್ಣು, ಮಾವಿನ ಹಣ್ಣಿನ ರಸಾಯನ ಸವಿದ ನನಗೆ ರಸಾಯನ, ಭೌತಶಾಸ್ತ್ರಗಳೆಂದರೆ ಮೈಯೆಲ್ಲ ನಡುಕ. ಅಂತೂ ಇಂತೂ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಗಳಲ್ಲಿ ಜೆಸ್ಟ್ ಮಾರ್ಕ್‌ಗಳಿಸಿ ಮುಂದೆ ಆರ್ಟ್ಸ್ ತೆಗೆದುಕೊಂಡು ಗಣಿತ/ವಿಜ್ಞಾನಗಳಿಗೆ ಗುಡ್‌ಬೈ ಹೇಳುವ ಮೂಲಕ ದೇವರ ದಯೆಯಿಂದ ಬಚಾವಾದದ್ದು ನನ್ನ ಬಾಳಿನ ಪುಟದ ಇತಿಹಾಸದ ಸುವರ್ಣ ಅಧ್ಯಾಯ! ಆದರೂ ಈಗಲೂ ನಿತ್ಯದ ವ್ಯವಹಾರಗಳಲ್ಲಿ ಲೆಕ್ಕಾಚಾರ ಮಾಡುವಾಗ ಇಣುಕಿ ಗಣಿತ ತರೆಲ ಮಾಡಿ ಎಡವಟ್ಟು ಮಾಡುವಂತೆ, ವಿಜ್ಞಾನವೂ ಆಗಾಗ-ವರ್ಷಕ್ಕೊಮ್ಮೆ ಅಥವಾ ಎರಡು ಬಾರಿ-ಹಣಕಿ ಕಕ್ಕಾಬಿಕ್ಕಿಗೊಳಿಸುವುದುಂಟು. ಆ ಸಂದರ್ಭ ಯಾವುದೆಂದರೆ ಸೂರ್ಯ ಮತ್ತು ಚಂದ್ರಗ್ರಹಣ ಬಂದಾಗ.
ಸೆಗಣಿ ಬಳಿದ ಮನೆ ಜಗುಲಿಯ ಮೇಲೆ ಕುಳಿತು ಎಲಿಜಬೆತ್ ಮಿಸ್ ಕಲಿಸಿದ ಗ್ರಹಣದ ಪಾಠ ಓದುತ್ತ ಉರು ಹೊಡೆಯುತ್ತಿ¨ªೆ. ನಡುಮನೆಯಲ್ಲಿ ಹಿರಿಯಪ್ಪ ಪೂಜೆ ಮಾಡುತ್ತಿದ್ದರು. ಅಡುಗೆ ಮನೆಯಲ್ಲಿ ಪುಟ್ಟಜ್ಜಿ ಕಾಫಿ-ಕಷಾಯ ಕಾಯಿಸುತ್ತಿದ್ದವಳ ಕಿವಿಗೆ ನಾನು ಉರು ಹೊಡೆಯುತ್ತಿದ್ದ ಸಾಲು ಬೀಳಬೇಕೆ? ಸೂರ್ಯ-ಚಂದ್ರ ಗ್ರಹಣದ ಬಗ್ಗೆ ವೈಜ್ಞಾನಿಕ ವಿಶ್ಲೇಷಣೆ ಕೇಳಿ ಕರೆಂಟ್ ಹೊಡೆದಂತಾಗಿ ಪೂಜೆ ಮಾಡುತ್ತಿದ್ದ ಹಿರಿಯಪ್ಪನನ್ನು ಏರುಸ್ವರದಲ್ಲಿ ಪ್ರಶ್ನಿಸಿದರು, “”ಏನು ಸುಬ್ಬು ಅದು? ಗ್ರಹಣ ಅಂದ್ರೆ ರಾಹು-ಕೇತುಗಳು, ಸೂರ್ಯ-ಚಂದ್ರರನ್ನು ನುಂಗೋದು
– ಶರತ್ ಕಲ್ಕೋಡು