ಚಾಮರಾಜನಗರ: ಗಂಡ ಹೆಂಡತಿ ಮತ್ತು ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಬೇಡರಪುರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಪತಿ ಮಹದೇವಸ್ವಾಮಿ (45), ಪತ್ನಿ ಸವಿತಾ (36) ಹಾಗು ಮಗಳು ಸಿಂಚನಾ (14) ಆತ್ಮಹತ್ಯೆ ಮಾಡಿಕೊಂಡವರು. ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಆಸ್ತಿವಿಚಾರ ಆತ್ಮಹತ್ಯೆಗೆ ಕಾರಣ ಎಂದು ತಿಳಿದುಬಂದಿದೆ. ಪಕ್ಕದ ಮನೆಯವರು ಇಂದು ಬೆಳಿಗ್ಗೆ ಮನೆಗೆ ಹೋದಾಗ ಆತ್ಮಹತ್ಯೆ ಬೆಳಕಿಗೆ ಬಂದಿದೆ.
ಇದನ್ನೂ ಓದಿ:ಒಂದು ಕ್ಷಣವೂ ವೇಸ್ಟ್ ಮಾಡುತ್ತಿಲ್ಲ, ಆದಷ್ಟು ಬೇಗ ಬರುತ್ತೇನೆ: ಹೊಸ ಚಿತ್ರದ ಬಗ್ಗೆ ಯಶ್
ಡೆತ್ ನೋಟ್ ಬರೆದಿಟ್ಟು ಇವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಸ್ತಿ ವಿಚಾರವಾಗಿ ಸಹೋದರಿಯರು ಕೋರ್ಟ್ ಮೆಟ್ಟಿಲೇರಿದ್ದರು. ಇತ್ತೀಚೆಗೆ ನ್ಯಾಯಾಲಯದಿಂದ ಆಸ್ತಿ ವಿವಾದ ತೀರ್ಮಾನವಾಗಿತ್ತು. ಆಸ್ತಿ ವಿವಾದ ತೀರ್ಪಿನ ನಂತರ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಭಾವ ಮಲ್ಲೇಶ, ಅಕ್ಕ ಮಂಜುಳ, ತಾಯಿ ದೇವಿರಮ್ಮ, ಮಹದೇವಪ್ಪ, ಮಹೇಶ್ವರಿ, ಮಹದೇವಮ್ಮ ಮೇಲಾಜಿಪುರ ಇವರಿಗೆ ಶಿಕ್ಷೆ ಕೊಡಬೇಕು ಎಂದು ಡೆತ್ ನೋಟ್ ನಲ್ಲಿ ಬರೆಯಲಾಗಿದೆ. ನಮ್ಮ ಆಸ್ತಿ ಯಾವುದೇ ಕಾರಣಕ್ಕೂ ಇವರಿಗೆ ಸಿಗಬಾರದು ಎಂದು ಬರೆದಿದ್ದಾರೆ.