Advertisement
ಜಟ್ಟಿಪಳ್ಳ ಅನ್ಸಾರಿಯಾ ಯತೀಂಖಾನದಲ್ಲಿ ಬುಧವಾರ ನಡೆದ ತಾಲೂಕು ಮಸೀದಿ-ಮದ್ರಸ ಪದಾಧಿಕಾರಿಗಳ ಮತ್ತು ಇಮಾಮರುಗಳ ವಕ್ಫ್ ಸಂಸ್ಥೆಗಳ ಮುತವಲ್ಲಿ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಅಲ್ಪಸಂಖ್ಯಾಕರ ಕಲ್ಯಾಣ ಇಲಾಖೆ ಮಸೀದಿ, ಮದ್ರಸಗಳಿಗೆ ಗರಿಷ್ಠ ಅನುದಾನ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಅದಕ್ಕೆ ಪೂರಕವಾಗಿ ಮಸೀದಿ, ಮದ್ರಸ ನೋಂದಾಯಿಸುವಂತೆ ಅವರು ಸೂಚಿಸಿದರು.
ಸುಳ್ಯ ನಗರದ ಗಾಂಧಿನಗರ ಮಸೀದಿಗೆ ಭೇಟಿ ನೀಡಿ ಅಲ್ಲಿನ ನವೀಕೃತ ಮಸೀದಿ ಕಾಮಗಾರಿ ವೀಕ್ಷಿಸಿದರು. ಬಳಿಕ ಮೊಗರ್ಪಣೆ ದರ್ಗಾ ಶರೀಫ್ ಮುಂಭಾಗದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಶಾದಿ ಮಹಲ್‌ಗೆ ಶಂಕುಸ್ಥಾಪನೆ ನೆರವೇರಿಸಿದರು. ಪೈಚಾರಿನಲ್ಲಿ ನೂತನ ಮದರಸ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಬಳಿಕ ಅನ್ಸಾರಿಯಾದಲ್ಲಿ ನಡೆದ ವಕ್ಫ್ ಸಂಸ್ಥೆಗಳ ಮುತವಲ್ಲಿ ಸಮಾವೇಶದಲ್ಲಿ ಪಾಲ್ಗೊಂಡರು. ಸಂಜೆ ವೇಳೆ ನಗರದಲ್ಲಿ ಉತ್ತಮ ಮಳೆಯಾದ ಕಾರಣ ಮೊಗರ್ಪಣೆ ಸಹಿತ ಕೆಲವೆಡೆ ನಿಗದಿಯಾಗಿದ್ದ ಸಭಾ ಕಾರ್ಯಕ್ರಮ ಮೊಟಕುಗೊಂಡಿತ್ತು.
Related Articles
ಮೊಗರ್ಪಣೆ ಮಸೀದಿ ಮುಂಭಾಗದಲ್ಲಿ ನಿರ್ಮಾಣಗೊಳ್ಳುವ ಶಾದಿ ಮಹಲ್‌ಗೆ 1 ಕೋಟಿ ರೂ., ಮೊಗರ್ಪಣೆ ಮದರಸಕ್ಕೆ 10 ಲಕ್ಷ ರೂ., ಅಂಬೆಟಡ್ಕ ಅನಘಿ ಜುಮಾ ಮಸೀದಿಗೆ 5 ಲಕ್ಷ ರೂ., ಮಸೀದಿ ಆಧುನೀಕರಣಕ್ಕೆ 10 ಲಕ್ಷ ರೂ., ಅನ್ಸಾರಿಯ ಯತಿಂಖಾನ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ 40 ಲಕ್ಷ ರೂ., ಗಾಂಧಿನಗರ ನವೀಕೃತ ಮಸೀದಿಗೆ 20 ಲಕ್ಷ ರೂ., ಪೈಚಾರು ಮದರಸ ಕಟ್ಟಡಕ್ಕೆ 20 ಲಕ್ಷ ರೂ. ಅನುದಾನ ನೀಡುವುದಾಗಿ ಸಚಿವರು ಘೋಷಿಸಿದರು.
Advertisement
ಕ್ರೀಡಾಪಟುವಿಗೆ ಆರ್ಥಿಕ ನೆರವುಅಂಗವಿಕಲರ ಕ್ರೀಡಾಕೂಟದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ತೋರಿದ ಸುಹೈಲ್ ಅವರಿಗೆ ಸಚಿವ ಜಮೀರ್ ಅಹಮ್ಮದ್ ಅವರು 25 ಸಾವಿರ ರೂ. ಆರ್ಥಿಕ ನೆರವು ನೀಡಿದರು.