Advertisement

ಶ್ರೀ ಭಾರತೀ ವಿದ್ಯಾಪೀಠದಲ್ಲಿ ಸಮಾಲೋಚನ ಸಭೆ

11:44 PM May 01, 2019 | sudhir |

ಬದಿಯಡ್ಕ: “ಹಲಸು ಬೆಳೆಸಿ ಗೋವು ಉಳಿಸಿ’ ಎಂಬ ಉದ್ದೇಶದೊಂದಿಗೆ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಜೂನ್‌ 8 ರಂದು “ಹಲಸು ಮೇಳ’ ಎಂಬ ಬೃಹತ್‌ ಸಮಾರಂಭದ ಸಿದ್ಧತೆಗಾಗಿ ಸಮಾಲೋಚನ ಸಭೆಯು ವಿದ್ಯಾಪೀಠದಲ್ಲಿ ಜರಗಿತು. ಮುಳೇÛರಿಯಾ ಮಂಡಲಾಧ್ಯಕ್ಷರಾದ ಪ್ರೊ|ಶ್ರೀಕೃಷ್ಣ ಭಟ್‌ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

Advertisement

ಸಮಾರಂಭವು ಮುಳ್ಳೇರಿಯಾ ಹವ್ಯಕ ಮಂಡಲ, ಅಮೃತಧಾರಾ ಗೋಶಾಲೆ ಬಜಕೂಡ್ಲು ಪೆರ್ಲ ಮತ್ತು ಮಹಿಳ್ಳೋದಯ ಇವುಗಳ ಸಂಯುಕ್ತ ಆಶ್ರಯದಲ್ಲಿ ಜರಗಲಿದೆ. ಸಭೆಯಲ್ಲಿ ಡಾ|ವೈ.ವಿ.ಕೃಷ್ಣಮೂರ್ತಿ ಅವರು ಕಾರ್ಯಕ್ರಮದ ಸಮಗ್ರ ಕಾರ್ಯಯೋಜನೆಯ ಮಾಹಿತಿಯನ್ನಿತ್ತರು. ಮಂಡಲ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಭಟ್‌ ಸರ್ಪಮಲೆ ಅವರು ಕಾರ್ಯಕ್ರಮ ಸಂಯೋಜನೆ ಮಾಡಿ ಸಭಾ ನಿರೂಪಣೆ ಮಾಡಿದರು.

ಕಾರ್ಯಕ್ರಮದ ಯಶಸ್ವಿಗಾಗಿ ಡಾ| ವೈ.ವಿ.ಕೃಷ್ಣಮೂರ್ತಿ ಅವರನ್ನು ಮಾರ್ಗದರ್ಶಕರಾಗಿಯೂ ಶಿವ ಪ್ರಸಾದ್‌ ವರ್ಮುಡಿ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ಇರುವ ಕಾರ್ಯಕಾರಿ ಸಮಿತಿ ಮತ್ತು ಕಾರ್ಯಕ್ರಮದ ಯಶಸ್ವಿಗೆ ವಿವಿಧ ವಿಭಾಗ ಸಮಿತಿಗಳನ್ನು ರಚಿಸಲಾಯಿತು.

ಈಶ್ವರಿ ಬೇರ್ಕಡವು, ಕುಸುಮಾ ಪೆರ್ಮುಖ ಅವರ ನೇತೃತ್ವದಲ್ಲಿ 1ಲಕ್ಷ ಹಲಸಿನ ಹಪ್ಪಳ ತಯಾರಿಸಲು ಮತ್ತು ಇದರ ವಿಕ್ರಯದಿಂದ ಬಂದ ಹಣವನ್ನು ಬಜಕೂಡ್ಲು ಅಮೃತಧಾರಾ ಗೋಶಾಲೆಗೆ ನೀಡಲು ಮುಳ್ಳೇರಿಯ ಮಂಡಲದ ಮಾತೆಯರು ತೀರ್ಮಾನಿಸಿದರು. ಮಹಾಮಂಡಲ, ಮಂಡಲ ಮತ್ತು ವಲಯ ಪದಾಧಿಕಾರಿಗಳು, ಗೋ ಶಾಲೆಯ ಪದಾಧಿಕಾರಿಗಳು, ಮಹಿಳ್ಳೋದಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next