ಮುಳಬಾಗಿಲು: ಮುಂಗಾರು ಮಳೆಯಿಂದ ನಷ್ಟವಾಗಿ ರುವ ಬೆಳೆ ಸಮೀಕ್ಷೆ ಮಾಡಿ ಬೆಳೆಗಳನ್ನು ಬಾಧಿಸುತ್ತಿರುವ ನುಸಿ ರೋಗಕ್ಕೆ ಔಷಧಿಯನ್ನು ವಿತರಿಸಬೇಕು. ನಷ್ಟವಾಗಿ ರುವ ಪ್ರತಿ ಎಕೆರೆಗೆ 5 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ರೈತ ಸಂಘದ ಕಾರ್ಯಕರ್ತರು ನಗರದ ಹಿರಿಯ ತೋಟಗಾರಿಕಾ ಸಹಾಯಕ ನಿರ್ದೇಶಕರ ಕಚೇರಿ ಮುಂದೆ ಪ್ರತಿಭಟಿಸಿದರು.
ಈ ವೇಳೆ ಮಾತನಾಡಿದ ರೈತ ಸಂಘದ ತಾಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್, ಬೆಳೆ ಇದ್ದರೆ ಬೆಲೆ ಇಲ್ಲ, ಬೆಲೆ ಇದ್ದರೆ ಬೆಳೆ ಇಲ್ಲ ಇವರೆಡು ಇದ್ದರೆ ಪ್ರಕೃತಿ ವಿಕೋಪ ದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದೇ ಜಿಲ್ಲಾದ್ಯಂತ ಮುಂಗಾರು ಮಳೆ ಆರ್ಭಟಕ್ಕೆ ಲಕ್ಷಾಂತರ ರೂ. ಬಂಡ ವಾಳ ಹಾಕಿ ಬೆಳೆದಿರುವ ಟೊಮೆಟೋ, ಕ್ಯಾಪ್ಸಿಕಂ ಬೆಳೆ ಗಳು ಕೈಗೆ ಬರುವ ಸಮಯದಲ್ಲಿ ರೋಗಬಾಧೆಯಿಂದ ಬೆಳೆ ನಾಶವಾಗಿ ಜನರು ಸಂಕಷ್ಟಕ್ಕೆ ತಲುಪಿದ್ದಾರೆ ಎಂದರು.
ಸತತವಾಗಿ 2 ವರ್ಷಗಳ ಹಿಂದೆ ಸಾಂಕ್ರಾಮಿಕ ರೋಗಗಳ ಹಾವಳಿ ನಡುವೆ ರೈತರು ಬೆಳೆಗೆ ಸೂಕ್ತವಾದ ಮಾರುಕಟ್ಟೆ ಇಲ್ಲದೆ ಪಸಲನ್ನು ತೋಟದಲ್ಲಿಯೇ ಕೊಳೆ ಯಲು ಬಿಟ್ಟಿದ್ದಲ್ಲದೇ ರಸ್ತೆಯ ಅಕ್ಕಪಕ್ಕ ಚರಂಡಿಗಳಲ್ಲಿ ಸುರಿದು ರೈತ ಆಕ್ರೋಶ ವ್ಯಕ್ತಪಡಿಸಿದಾಗ ಸರ್ಕಾರ ರೈತರ ಸಮಸ್ಯೆಗೆ ಸ್ಪಂದಿಸಿ ಪರಿಹಾರ ಘೋಷಣೆ ಮಾಡಿತು. ಆದರೆ, ಎರಡು ವರ್ಷಕಳೆದರೂ ಇದು ವರೆಗೂ ರೈತರಿಗೆ ಪರಿಹಾರದ ಹಣ ಸೇರಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಕಾರ್ಯಾಧ್ಯಕ್ಷ ಹೆಬ್ಬಣಿ ಆನಂದರೆಡ್ಡಿ ಮಾತ ನಾಡಿ, ಮುಂಗಾರು ಬಿರುಗಾಳಿ ಸಹಿತ ಅಲಿ ಕಲ್ಲು ಮಳೆಗೆ ವಿಮಾ ಕಂಪನಿಗಳು ಕೊಚ್ಚಿಹೋಗಿವೆ. ಸರ್ಕಾರ ಕೂಡಲೇ ಅವುಗಳನ್ನು ಹುಡುಕಿಕೊಟ್ಟು ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಲೇವಡಿ ಮಾಡಿದರು.
ಸರ್ಕಾರಕ್ಕೆ ಅಂಕಿ ಅಂಶಗಳ ಪ್ರಕಾರ ನಷ್ಟವಾಗಿರುವ ಮಾವು ಟೊಮೆಟೋ ಮತ್ತಿತರ ವಾಣಿಜ್ಯ ಬೆಳೆಗಳನ್ನು ಅಧಿಕಾರಿ ಗಳು ಸಮೀಕ್ಷೆ ನಡೆಸಿ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ನೀಡಬೇಕು ಎಂದು ದೂರಿದರು. ಬಳಿಕ ಹಿರಿಯ ತೋಟಗಾರಿಕ ಸಹಾಯಕ ನಿರ್ದೇಶಕಿ ಶಿವಕುಮಾರಿಗೆ ಮನವಿ ಸಲ್ಲಿಸಿದರು.
ಜಿಲ್ಲಾಧ್ಯಕ್ಷ ಐತಂಡ ಹಳ್ಳಿ ಮಂಜುನಾಥ, ಮಹಿಳಾ ಜಿ.ಅಧ್ಯಕ್ಷ ಎ.ನಳಿನಿಗೌಡ, ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಹಸಿರು ಸೇನೆ ತಾಲೂಕು ಅಧ್ಯಕ್ಷ ವೇಣು, ನವೀನ್, ಪದ್ಮಘಟ್ಟ ಧರ್ಮ, ನಂಗಲಿ ನಾಗೇಶ್, ಕಿಶೋರ್, ಕೇಶವ ರಾಮಮೂರ್ತಿ ಶ್ರೀಕಾಂತ್, ಪಾರುಕ್‌ಪಾಷ, ವಿಜಯಪಾಲ್, ಬಂಗಾರಿ ಮಂಜು, ರಾಮಕೃಷ್ಣ, ಜಗನ್, ವೇಣು, ತರುಣ್, ಪುತ್ತೇರಿ ರಾಜು, ಮಂಗಸಂದ್ರ ತಿಮ್ಮಣ್ಣ, ರಾಮಕೃಷ್ಣಪ್ಪ ಇತರರಿದ್ದರು.