ಪ್ಯಾರೀಸ್: 18 ವರ್ಷದಿಂದ 25 ವರ್ಷ ವಯೋಮಿತಿಯವರಿಗೆ ಉಚಿತವಾಗಿ ಕಾಂಡೋಮ್ ವಿತರಿಸಲಾಗುತ್ತದೆ. ಅಂದ ಹಾಗೆ ಇಂಥ ನಿರ್ಧಾರ ಕೈಗೊಂಡಿರುವುದು ಭಾರತದಲ್ಲಿ ಅಲ್ಲ; ಫ್ರಾನ್ಸ್ ನಲ್ಲಿ. ಆ ದೇಶದಲ್ಲಿ ಲೈಂಗಿಕವಾಗಿ ಹರಡುವ ರೋಗಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ 2023ರ ಜನವರಿಯಿಂದ ಕಾಂಡೋಮ್ ನೀಡಲು ತೀರ್ಮಾನಿಸಲಾಗಿದೆ ಎಂದು ಫ್ರಾನ್ಸ್‌ನ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರನ್ ಪ್ರಕಟಿಸಿದ್ದಾರೆ.
ಇದೊಂದು ಕ್ರಾಂತಿಕಾರಕ ನಿರ್ಧಾರ ಎಂದು ಬಣ್ಣಿಸಿದ ಫ್ರಾನ್ಸ್ ಅಧ್ಯಕ್ಷರು, “ಲೈಂಗಿಕ ಶಿಕ್ಷಣ ನೀಡುವಲ್ಲಿ ದೇಶ ಇನ್ನೂ ಹಿಂದೆ ಉಳಿದಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ. 18-25 ವರ್ಷ ವಯೋಮಿತಿಯವರು ಮೆಡಿಕಲ್ ಶಾಪ್‌ಗ್ಳಿಗೆ ತೆರಳಿ ಕಾಂಡೋಮ್‌ಗಳನ್ನು ಪಡೆದುಕೊಳ್ಳಲಾಗಿದೆ ಎಂದರು.
2020 ಮತ್ತು 2021ರಲ್ಲಿ ಲೈಂಗಿಕವಾಗಿ ಹರಡುವ ಕಾಯಿಲೆ ಪ್ರಮಾಣ ಫ್ರಾನ್ಸ್‌ನಲ್ಲಿ ಶೇ.30ರಷ್ಟು ಏರಿಕೆಯಾಗಿದೆ. ದೇಶದಲ್ಲಿ ಗರ್ಭ ನಿರೋಧಕ ಕ್ರಮಗಳು ಸುಲಭವಾಗಿ ಸಿಗುವಂತಾಗಬೇಕು ಎಂದು ಸರಕಾರ ಕ್ರಮ ಕೈಗೊಂಡಿರುವಂತೆಯೇ ಈ ನಿರ್ಧಾರ ಪ್ರಕಟವಾಗಿದೆ.