Advertisement

ನಿಫಾ ರೋಗಿ ಕಾಲೇಜು ವಿದ್ಯಾರ್ಥಿಯ ದೇಹಾರೋಗ್ಯ ಸ್ಥಿರ: ಕೇರಳ ಆರೋಗ್ಯ ಸಚಿವೆ

09:31 AM Jun 06, 2019 | Team Udayavani |

ಕೊಚ್ಚಿ : ಮಾರಣಾಂತಿಕ ನಿಫಾ ವೈರಸ್‌ ಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 23ರ ಹರೆಯದ ಕಾಲೇಜು ವಿದ್ಯಾರ್ಥಿಯ ದೇಹಾರೋಗ್ಯ ಸ್ಥಿರವಾಗಿದೆ ಎಂದು ಕೇರಳ ಸರಕಾರ ಇಂದು ಬುಧವಾರ ಹೇಳಿದೆ.

Advertisement

ಇದೇ ರೀತಿ ನಿಫಾ ವೈರಸ್‌ಗಾಗಿ ದಾಖಲಾಗಿರುವ ಇತರ ಐದು ಮಂದಿಯ ದೇಹಾರೋಗ್ಯ ಕೂಡ ಸುಧಾರಿಸುತ್ತಿದೆ ಎಂದು ಕೇರಳ ಆರೋಗ್ಯ ಸಚಿವೆ ಕೆ ಕೆ ಶೈಲಜಾ ಹೇಳಿದ್ದಾರೆ.

ಕೇರಳದಲ್ಲಿ ನಿಫಾ ವೈರಸ್‌ ಗಾಗಿ ಒಟ್ಟು 311 ಮಂದಿ ವಿವಿಧ ಜಿಲ್ಲೆಗಳಲ್ಲಿ ತೀವ್ರ ವಿಚಕ್ಷಣೆಯಲ್ಲಿ ಇದ್ದಾರೆ ಎಂದವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next