Advertisement

ಸೇವಾವಂಚಿತ ಮಾಡಿದ್ದಕ್ಕೆ ಖಂಡನೆ

01:10 PM Sep 16, 2017 | |

ಬಸವನಬಾಗೇವಾಡಿ: ಸಾಕ್ಷಾರತಾ ಪ್ರೇರಕರನ್ನು ಕೇಂದ್ರ ಹಾಗೂ ರಾಜ್ಯ ಸರಕಾರ ದಿಢೀರನೆ ಸೇವೆಯಿಂದ ತೆಗೆದಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ಸಾಕ್ಷರತಾ ಪ್ರೇರಕರ ಮತ್ತು ಸಂಯೋಜಕರ ಒಕ್ಕೂಟದ ತಾಲೂಕು ಘಟಕ ತಹಶೀಲ್ದಾರ್‌ ಮೂಲಕ ಪ್ರಧಾನಿಗೆ ಮನವಿ ಸಲ್ಲಿಸಿತು.

Advertisement

ಈ ವೇಳೆ ಸಾಕ್ಷಾರತಾ ಪ್ರೇರಕರನ್ನು ಉದ್ದೇಶಿಸಿ ತಾಲೂಕಾಧ್ಯಕ್ಷ ಚನ್ನಬಸಪ್ಪ ಚಿಮ್ಮಲಗಿ, ಕಾರ್ಯದರ್ಶಿ ಅಶೋಕ ಬಿರಾದಾರ, ಉಪಾಧ್ಯಕ್ಷ ರುದ್ರಮಮ್‌ ದೀಪನಾಳ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಕಳೆದ 10ರಿಂದ 20 ವರ್ಷ ಅನಕ್ಷರಸ್ಥರ ಬಾಳಿನಲ್ಲಿ ಜ್ಞಾನದ ದೀಪದ ಜ್ಯೋತಿ ಬೆಳಗಿಸಿದ್ದೇವೆ. ಆದರೆ ಕೇಂದ್ರ ಹಾಗೂ ರಾಜ್ಯಸರಕಾರ ಕರ್ನಾಟಕ ರಾಜ್ಯ ಸಾಕ್ಷರತಾ ಪ್ರೇರಕರ ಮತ್ತು ಸಂಯೋಜಕರನ್ನು ಸೇವೆಯಿಂದ 2017 ಮಾರ್ಚ್‌ನಲ್ಲಿ ಯಾವುದೇ ಮುನ್ಸೂಚನೆ ನೀಡದೆ ಸೇವೆಯಿಂದ ತೆಗೆದಿರುವುದು ಖಂಡನೀಯ ಎಂದರು. 

ಕೇವಲ 500 ರೂ.ದಿಂದ 2000ರೂ. ಗೌರವಧನ ಪಡೆದು ಸೇವೆ ಮಾಡಿದ್ದೇವೆ. ಈಗ ಸೇವೆಯಿಂದ ಕೈ ಬಿಟ್ಟಿದ್ದು ಜೀವನಕ್ಕೆ ತೊಂದರೆಯಾಗಿದೆ. ನಮಗೆ ಯಾವುದಾದರು ರಾಷ್ಟ್ರೀಯ ಯೋಜನೆಗಳಲ್ಲಿ ಈ ಹಿಂದೆ ಇದ್ದ ಗೌರವ ಧನದಲ್ಲೇ ಕೆಲಸ ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮಂಗಳಾ ಕಲಾದಗಿ, ನಾಗಮ್ಮ ಗಣಾಚಾರಿ, ಶೋಭಾ ಮಾದರ, ಸುವರ್ಣ ಯಜೇರಿ, ಪ್ರೇಮಸಿಂಗ್‌
ನಾಯಕ, ರಮೇಶ ಹೆಬ್ಟಾಳ, ಮೀನಾಕ್ಷಿ ತಳಗೇರಿ, ನೀಲಮಮ ಯಳವಾರ, ಅಶೋಕ ಬಿರಾದಾರ, ಜಾನಕಿ ಚವ್ಹಾಣ, ಜರೀನಾ ಬೀಳಗಿ, ಹನುಮಂತ ಇಳಗೇರಿ, ರುದ್ರಮ್ಮ ಪಾಪನಾರ, ಮಂಜೂಳ ಗುಂಡಿನಮನಿ, ಲಕ್ಷ್ಮಣ ಇಳಗೇರ, ಸಂಗಮೇಶ ಹುಚ್ಚಟಿ, ಅಲಾಬಿ ಬಾಗವಾನ, ರೇಣುಕಾ ಮಾದರ, ರಾವುತಪ್ಪ ಹಂಡಿ, ದ್ರಾಕ್ಷಾಯಿಣಿ ಗೊನಿಹಾಳ, ಪಾರ್ವತಿ ಲಮಾಣಿ ಇದ್ದರು 

Advertisement

Udayavani is now on Telegram. Click here to join our channel and stay updated with the latest news.

Next