Advertisement

ಶಿರಸ್ತೇದಾರ್‌ ಮೇಲಿನ ಹಲ್ಲೆಗೆ ಖಂಡನೆ

01:24 PM Jun 25, 2022 | Team Udayavani |

ಹುಣಸಗಿ: ಪಟ್ಟಣದ ತಹಶೀಲ್ದಾರ್‌ ಕಚೇರಿಯಲ್ಲಿ ಶಿರಸ್ತೇದಾರ್‌ ಕಲ್ಲಪ್ಪ ಮೇಲಿನ ಹಲ್ಲೆ ಖಂಡಿಸಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ರಸ್ತೆ ತಡೆ ನಡೆಸಿ ವಾಲ್ಮೀಕಿ ಸಮಾಜದಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

Advertisement

ಮಹರ್ಷಿ ವಾಲ್ಮೀಕಿ ನಾಯಕ ಸಂಘದ ತಾಲೂಕು ಅಧ್ಯಕ್ಷ ಗಂಗಾಧರ ನಾಯಕ ತಿಂಥಣಿ ಮಾತನಾಡಿ, ತಾಲೂಕು ದಂಡಾಧಿಕಾರಿ ಸಮ್ಮುಖದಲ್ಲಿಯೇ ಶಿರಸ್ತೇದಾರ್‌ ಕಲ್ಲಪ್ಪ ಜಂಜಿಗಡ್ಡಿಯವರ ಮೇಲೆ ಆಹಾರ ನಿರೀಕ್ಷಕ ಗವಿಸಿದ್ಧಯ್ಯಸ್ವಾಮಿ ಹಾಗೂ ಕಂದಾಯ ನಿರೀಕ್ಷಕ ಬಸವರಾಜ್‌ ಬಿರಾದಾರ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ್ದು ಅಮಾನವೀಯ ಕೃತ್ಯವಾಗಿದೆ. ಜಿಲ್ಲಾಧಿಕಾರಿಗಳು ಕೂಡಲೆ ಇಬ್ಬರು ಆರೋಪಿಗಳನ್ನು ಅಮಾನತುಗೊಳಿಸಿ 24 ಗಂಟೆಯೊಳಗಾಗಿ ಬಂಧಿಸಬೇಕು ಎಂದು ಒತ್ತಾಯಿಸಿದರು.

ತಹಶೀಲ್ದಾರ್‌ ಅಶೋಕಕುಮಾರ್‌ ಸುರಪುರಕರ್‌ ಹಾಗೂ ಸಿಪಿಐ ದೌಲತ್‌ ಎನ್‌. ಕೆ. ಪ್ರತಿಭಟನಾಕಾರರ ಬೇಡಿಕೆಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು. ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ವಾಲ್ಮೀಕಿನಾಯಕ ಸಂಘದ ಮುಖಂಡರಾದ ವೀರಭದ್ರ ಅಂತರಗಂಗಿ, ಸಿದ್ಧನಗೌಡ ಪಾಟೀಲ್‌, ರಮೇಶ ಬಿರಾದಾರ, ನಂದಣ್ಣ ದೊರೆ ಶ್ರೀನಿವಾಸಪುರ, ಶಂಕರನಾಯಕ, ರಮೇಶ ಕೋಳೂರ, ವೀರನಗೌಡ ಕೋಟೆಗುಡ್ಡ, ಬಸವಂತಪ್ಪ ಗುಳಬಾಳ್‌, ಭೀಮನಗೌಡ ತೀರ್ಥ, ಭೀಮನಗೌಡ ಬೈಲಾಪುರ, ಭೀಮರಾಯ ಶ್ರೀನಿವಾಸಪುರ, ಮಹೇಶ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next