Advertisement

ಬೆಳೆ ಹಾನಿ ಪರಿಹಾರ ವಿಳಂಬಕ್ಕೆ ಖಂಡನೆ

03:43 PM Sep 22, 2022 | Team Udayavani |

ಆಳಂದ: ಅತಿವೃಷ್ಟಿಯಿಂದಾಗಿ ಬೆಳೆ ಸಂಪೂರ್ಣ ನೆಲಕಚ್ಚಿ ರೈತರು ತೀವ್ರ ಸಂಕಷ್ಟದಲ್ಲಿದ್ದು, ಬೆಳೆ ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿ ನಿಂಬರ್ಗಾ ಗ್ರಾಮದ ಉಪ ತಹಶೀಲ್ದಾರ್‌ ಕಚೇರಿ ಎದುರು ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು.

Advertisement

ಕರವೇ ಅಧ್ಯಕ್ಷ ಬಸವರಾಜ ಯಳಸಂಗಿ ಮಾತನಾಡಿ, ತಾಲೂಕಿನಲ್ಲಿ ಸತತವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಬೆಳೆಗಳು ಸಂಪೂರ್ಣ ನೀರು ಪಾಲಾಗಿವೆ. ಉದ್ದು, ಸೋಯಾಬಿನ್‌, ಹೆಸರು, ತೊಗರಿ, ಬಾಳೆ ಸೇರಿ ಇನ್ನಿತರ ಪ್ರಮುಖ ಬೆಳೆಗಳು ಶೇ.80ರಷ್ಟು ನೆಲಕಚ್ಚಿವೆ. ಬೆಳೆ ಕಳೆದುಕೊಂಡ ರೈತರ ಬದುಕು ಶೋಚನಿಯ ಸ್ಥಿತಿಯಲ್ಲಿದ್ದು, ಸರ್ಕಾರ ಪ್ರತಿ ಎಕರೆಗೆ 20,000ರೂ. ಕೂಡಲೇ ಪರಿಹಾರ ಒದಗಿಸುವುದಲ್ಲದೇ, ರೈತರಿಗೆ ಪುನರ್‌ ಬಿತ್ತನೆಗೆ ಬೀಜ ಗೊಬ್ಬರ ಉಚಿತವಾಗಿ ವಿತರಿಸಬೇಕು. ಭಾರಿ ಮಳೆಗೆ ಅನೇಕ ಗ್ರಾಮಗಳಲ್ಲಿ ಸೇತುವೆ, ರಸ್ತೆಗಳು ಹಾಳಾಗಿವೆ. ಅಧಿಕಾರಿಗಳು ಜಾಗೃತಗೊಂಡು ಅಗತ್ಯ ಕ್ರಮ ಕೈಗೊಳ್ಳುವಂತೆ ತಾವು ಅಧಿಕಾರಿಗಳಿಗೆ ಸೂಚಿಸುವಂತೆ ಕೋರಿದ್ದಾರೆ. ಬೆಳೆ ಹಾನಿ ಪರಿಹಾರ ಒದಗಿಸದಿದ್ದಲ್ಲಿ ಮತ್ತೆ ಹೋರಾಟ ಅನಿವಾರ್ಯವಾಗಲಿದೆ ಎಂದರು.

ನಂತರ ಉಪ ತಹಶೀಲ್ದಾರ್‌ ಆರ್‌. ಮಹೇಶಗೆ ಮನವಿ ಪತ್ರ ಸಲ್ಲಿಸಿದರು. ಮುಖಂಡರಾದ ಚಂದ್ರಕಾಂತ ಅವಟೆ, ಭಾಗಣ್ಣ ದುಗೊಂಡ, ಲಿಂಗರಾಜ ಸನಗೊಂಡ, ಧರ್ಮರಾಯ ವಾಗ್ಧರ್ಗಿ, ಬಸವಂತಪ್ಪ ದುಗೊಂಡ, ಶಿವಪುತ್ರ ಮಾಳಗೆ, ನಾಗೇಶ ಅಂಕಲಗಿ, ಅನಂತ ಜೋಶಿ, ಪರಮೇಶ್ವರ ದುಗೊಂಡ, ರಮೇಶ ಗುರಾಮಳಿ, ಶರಣಯ್ಯ ಬಾಯ್ನಾಗೋಳ್‌, ಅನಿಲ ನಾಗೂರ ಹಾಗೂ ಇನ್ನಿತರೆ ರೈತರು ಈ ಸಂದರ್ಭದಲ್ಲಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next