ಭೋಪಾಲ್: ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ತಂದಿದ್ದ ಚೀತಾಗಳ ಪೈಕಿ ಮತ್ತೆ ಮೂರನ್ನು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನಕ್ಕೆ ಬಿಡುಗಡೆ ಮಾಡಲಾಗಿದೆ.
Advertisement
ಇದರೊಂದಿಗೆ ಅರಣ್ಯಕ್ಕೆ ಬಿಡುಗಡೆಗೊಳಿಸಿದ ಒಟ್ಟು ಚೀತಾಗಳ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಅಗ್ನಿ ಹಾಗೂ ವಾಯು ಎನ್ನುವ ಎರಡು ಗಂಡು ಚೀತಾ ಹಾಗೂ ಗಾಮಿನಿ ಎನ್ನುವ ಹೆಣ್ಣು ಚೀತಾವನ್ನು ಶುಕ್ರವಾರವೇ ಅರಣ್ಯಕ್ಕೆ ಬಿಡುಗಡೆಗೊಳಿಸಲಾಗಿದೆ.
ಇನ್ನುಳಿದಂತೆ 11 ಚೀತಾ ಹಾಗೂ 4 ಚೀತಾ ಮರಿಗಳನ್ನು ಐಸೋಲೇಟ್ ಮಾಡಲಾಗಿದೆ ಎಂದು ಅರಣ್ಯಾಧಿಕಾರಿ ಜೆ.ಎಸ್.ಚೌಹಾಣ್ ಹೇಳಿದ್ದಾರೆ.