ಫರಿದಾಬಾದ್: 2020 ರಲ್ಲಿ ತನ್ನನ್ನು ಮದುವೆಯಾದ ಮಹಿಳೆ 12 ಲಕ್ಷ ರೂಪಾಯಿ ಮೌಲ್ಯದ ನಗದು ಮತ್ತು ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾಳೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಶುಕ್ರವಾರ ಪೊಲೀಸ್ ದೂರು ದಾಖಲಿಸಿದ್ದಾರೆ.
ಆಕೆ ವಂಚನೆಯನ್ನೇ ಕಾಯಕವನ್ನಾಗಿಸಿದ್ದಾಳೆ ಎಂದು ತಿಳಿದು ಬಂದಿದ್ದು, ಆ್ಯಪ್ ಮೂಲಕ ಆನ್‌ಲೈನ್‌ನಲ್ಲಿ ಭೇಟಿಯಾಗಿ ಮದುವೆಗೆ ಆಮಿಷ ಒಡ್ಡಿದ್ದಾಗಿ ಅಜಯ್ ಕುಮಾರ್ ನೀಡಿದ ದೂರಿನ ಆಧಾರದ ಮೇಲೆ ಆದರ್ಶ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
“ಅವಳು ದೆಹಲಿಯಲ್ಲಿ ಒಳ್ಳೆಯ ಜೀವನ ನಡೆಸಬೇಕೆಂದು ನನಗೆ ಹೇಳಿದಳು. ನಾನು ಬ್ಯಾಂಕ್‌ಗಳಲ್ಲಿ ಸಾಲ ಮಾಡಿ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಿದೆ. ನಾನು ಸಣ್ಣ ಬಟ್ಟೆ ವ್ಯಾಪಾರವನ್ನೂ ಮಾಡುತ್ತೇನೆ.. ಅವಳು ನನಗೆ ಮೂರು ಮಕ್ಕಳಿದ್ದಾರೆಂದು ಹೇಳಿ ಅವರನ್ನು ಕರೆತರುವಂತೆ ಒತ್ತಾಯಿಸಿದ್ದಳು” ಎಂದು ಹೇಳಿದ್ದಾರೆ.
ಮಹಿಳೆ ಹಿಂದಿನ ಪತಿಯಿಂದ ವಿಚ್ಛೇದನದ ಪಡೆದ ಕುರಿತಾಗಿ ಯಾವುದೇ ದಾಖಲೆಗಳನ್ನು ಹೊಂದಿಲ್ಲ ಎಂದು ಹೇಳಿದ್ದು, 2021 ರ ಆಗಸ್ಟ್‌ನಲ್ಲಿ ಎಲ್ಲದರೊಂದಿಗೆ ಓಡಿಹೋಗಿದ್ದಾಳೆ ಎಂದು ಕುಮಾರ್ ತನ್ನ ದೂರಿನಲ್ಲಿ ತಿಳಿಸಿದ್ದಾರೆ.
Related Articles
ಅವಳು ಓಡಿಹೋದ ನಂತರ, ಅವನು ಅವಳ ಹಿನ್ನೆಲೆಯನ್ನು ಪರಿಶೀಲಿಸಿದಾಗ ಅವಳು ಇತರರನ್ನೂ ಇದೇ ರೀತಿಯಲ್ಲಿ ವಂಚಿಸಿದ್ದಾಳೆ ಎಂದು ಹೇಳಿದ್ದಾರೆ.