Advertisement

ಕಂಪ್ಯೂಟರ್‌ ಡಾಕ್ಟರ್‌!

05:57 PM Nov 21, 2017 | |

ತಂತ್ರಜ್ಞಾನ ಯುಗದಲ್ಲಿ ಪ್ರತಿಯೊಂದಕ್ಕೂ ನಾವು ಕಂಪ್ಯೂಟರನ್ನೇ ಅವಲಂಬಿಸಿದ್ದೇವೆ. ಕಂಪ್ಯೂಟರ್‌ನಲ್ಲಿ ಆಗುವ ಸಣ್ಣ ಪುಟ್ಟ ತಾಂತ್ರಿಕ ದೋಷಗಳನ್ನು ನಿವಾರಿಸುವುದು ಸುಲಭ. ಆದರೆ ಬೇರೆಲ್ಲಿಂದಲೋ ಕಾಣದ ಕೈಗಳು ನಡೆಸುವ ಅಪರಾಧಗಳನ್ನು ನಿಗ್ರಹಿಸಲು ಸಿದ್ಧಹಸ್ತರೇ ಬೇಕು. ಅಂಥ ಸೈಬರ್‌ ಕ್ರೈಂ, ಇಂಟರ್‌ನೆಟ್‌ ಹ್ಯಾಕಿಂಗ್‌ ಗಳನ್ನು ತಡೆದು ಕಂಪ್ಯೂಟರ್‌ಗಳಿಗೆ ರಕ್ಷಣೆ ಒದಗಿಸುವವರೇ ಎಥಿಕಲ್ ಹ್ಯಾಕರ್‌ಗಳು. ಗಣಕ ಸಂಬಂಧಿತ ದೈತ್ಯ ಕಂಪನಿಗಳು ಇವರಿಗೆ ರತ್ನಗಂಬಳಿ ಹಾಸಿ ಸ್ವಾಗತಿಸುವುದುಂಟು. ಎಥಿಕಲ್‌ ಹ್ಯಾಕರ್‌ಗಳ ಹುದ್ದೆ ಅಲಂಕರಿಸಬೇಕೆಂದರೆ…

Advertisement

ಕೆಲವು ತಿಂಗಳುಗಳ ಹಿಂದಷ್ಟೇ ಪಾಶ್ಚಿಮಾತ್ಯ ದೇಶಗಳಲ್ಲಿ “Wanna cry’ ರಾನ್ಸಮ್ ವೇರ್‌ಎಂಬ ಗಣಕ ವ್ಯವಸ್ಥೆಯನ್ನು ಎನ್‌ಕ್ರಿ±r… ಮಾಡುವ ವೈರಸ್‌ ಹರಿಬಿಟ್ಟು, ದೈತ್ಯ ಕಂಪನಿಗಳ ಕಂಪ್ಯೂಟರ್‌ ಡೇಟಾಬೇಸ್‌ಗಳನ್ನು ಅಳಿಸಿಹಾಕುವಂಥ ಕೃತ್ಯ ನಡೆಸಲಾಗಿತ್ತು. ಅಷ್ಟೇ ಶೀಘ್ರದಲ್ಲಿ ಕಂಪನಿಗಳು ತಮ್ಮ ಗಣಕಗಳ ಮೇಲೆ ಹಿಡಿತ ಸಾಧಿಸಿ ಎನ್‌ಕ್ರಿ±r… ಮಾಡದಂತೆ ತಡೆಹಿಡಿಯಲಾಯಿತು.

ತಡೆ ಹಿಡಿದವರು ನಡೆಸಿದ ಕಾರ್ಯಾಚರಣೆಯೇನು? ಗಣಕಗಳನ್ನು ಹೇಗೆ ತಮ್ಮ ಹಿಡಿತಕ್ಕೆ ತೆಗೆದುಕೊಂಡರು? ವೈರಸ್‌ಅನ್ನು ನಿಗ್ರಹಿಸಿದ್ದು ಹೇಗೆ? ತಡೆಹಿಡಿದವರ ಕಾರ್ಯಸ್ವರೂಪವೇನು ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡದೇ ಇರದು. ಹೌದು, ಇಂಥ ಸಂದರ್ಭದಲ್ಲಿ ಕಂಪನಿಗಳ ಕಂಪ್ಯೂಟರ್‌ಗಳ ಮೇಲೆ ಹಿಡಿತ ಸಾಧಿಸಿ ವೈರಸ್‌ ಕಾರ್ಯತಂತ್ರವನ್ನು ನಿಷ್ಕ್ರಿಯಗೊಳಿಸಿದವರೇ ಎಥಿಕಲ್ ಹ್ಯಾಕರ್‌ಗಳು.

ಅಂತಜಾಲಕ್ಕೆ ವೈರಸ್‌ಗಳನ್ನು ಹರಿಬಿಡುವವರ ವಿರುದ್ಧ ಸೆಣೆಸುವ, ಆ್ಯಂಟಿ ವೈರಸ್‌ಗಳನ್ನು ತಯಾರಿಸಿಕೊಡುವ, ಸಾಫr…ವೇರ್‌ ಸಂಬಂಧಿತ ಸಲಹೆಗಳನ್ನು ನೀಡುವ, ಗಣಕ ಸಂಬಂಧಿತ ಭಾಷೆಗಳನ್ನು ಬಲ್ಲ, ಒಟ್ಟಿನಲ್ಲಿ ಗಣಕ, ಅಂತಜಾಲದ ರಕ್ಷಕರು ಇವರೇ. ಒಂದರ್ಥದಲ್ಲಿ ಇವರು ಕಂಪ್ಯೂಟರಿನ ಡಾಕ್ಟರ್‌ಗಳು. ಕಂಪ್ಯೂಟರನ್ನು, ಅಲ್ಲಿನ ಬಾಷೆ ಮತ್ತು ರಹಸ್ಯಗಳನ್ನು ಕಂಟ್ರೋಲ್‌ ಮಾಡುವ ಇಂಥ ಎಥಿಕಲ್ ಹ್ಯಾಕರ್‌ಗಳಾಗಲು ಏನು ಮಾಡಬೇಕೆಂದರೆ…

ವಿದ್ಯಾಭ್ಯಾಸ: ಎಸ್ಸೆಸ್ಸೆಲ್ಸಿ ಬಳಿಕ ಪಿಯುನಲ್ಲಿ ಗಣಕ ಸಂಬಂಧಿತ ವಿಷಯವನ್ನು ಆಯ್ಕೆ ಮಾಡಿಕೊಳ್ಳಿ. ಉತ್ತಮ ಅಂಕ ಗಳಿಸಿ ಕಂಪ್ಯೂಟರ್‌ ಸೈನ್ಸಿ ಬಿ.ಇ, ಬಿ.ಟೆಕ್‌ ಮಾಡಿ ಜೊತೆಗೆ ಸಿಐಎಸ್‌ಎಸ್‌ ಪಿ ಮಾಡಿದರೆ ಎಥಿಕಲ್ ಹ್ಯಾಕರ್‌ ಅಗಬಹುದು. ಕಂಪ್ಯೂಟರ್‌ ಸೈನ್ಸಿ ಬಿ.ಇ, ಬಿ.ಟೆಕ್‌ ಜೊತೆಗೆ ಗ್ಯಾಟ್‌ ಅಥವಾ ಇನಾರ್ಮೇಷನ್‌ ಸೆಕ್ಯೂರಿಟಿ, ಸೈಬರ್‌ ಸೆಕ್ಯುರಿಟಿ, ಸೈಬರ್‌ ಪನೀಸಿಸ್‌ ಕೋರ್ಸ್‌ಗಳನ್ನು ಮಾಡಿಯೂ ನೀವು ಎಥಿಕಲ್ ಹ್ಯಾಕರ್‌ ಆಗಬಹುದು.

Advertisement

ಕೌಶಲ್ಯಗಳಿರಲಿ
•ಗಣಕ ಸಂಬಂಧಿತ ಹೊಸ ತಂತ್ರಜ್ಞಾನ ಮತ್ತ ಬೆಳವಣಿಗೆಗಳ ಬಗ್ಗೆ ನಿಗಾ ವಹಿಸುವುದು
•ಸವಾಲು ಸ್ವೀಕರಿಸಿ ಸಮಸ್ಯೆಯನ್ನು ನಿವಾರಿಸುವ ಧೈರ್ಯ, ಹೊಸತನ್ನು ಅಳವಡಿಸಿಕೊಳ್ಳುವ ಕೌಶಲ್ಯ
•ಕಂಪ್ಯೂಟರ್‌ ಆಪರೇಟಿಂಗ್‌ ಸಿಸ್ಟಮ್‌, ಟಿಸಿಪಿ, ಐಪಿ ಪ್ರೋಗ್ರಾಂ, ಸಿ.ಸಿ+, ಸಿ+ ಲಾಂಗ್ವೇಜ… ಬಳಕೆ, ಅಪ್ಲಿಕೇಷನ್‌ ಬಳಕೆ, ಎಸ್‌ಎಂಟಿಪಿ, ಐಸಿಎಂಪಿ, ಎಚ್‌ಟಿಟಿಪಿ ಕಮಾಂಡ್‌ಗಳ ಬಗ್ಗೆ ವಿಶೇಷ ಜ್ಞಾನ.
•ವೈರಸ್‌ಗಳು, ಆ್ಯಂಟಿ ವೈರಸ್‌, ಸೈಬರ್‌ ಕ್ರೈಂಗಳ ಬಗ್ಗೆ ತಿಳಿವಳಿಕೆ
•ಕಾರ್ಯಕ್ಷೇತ್ರದಲ್ಲಿ ಸೃಜನಶೀಲತೆ, ಸಮೂಹದಲ್ಲಿ ಕಾರ್ಯನಿರ್ವಹಿಸುವ ಕ್ಷಮತೆ
•ವಿಮಶಾ ಜ್ಞಾನ, ಮಾಹಿತಿ ಸಂಗ್ರಹ ಮತ್ತು ಸಂರಕ್ಷಣಾ ಕಲೆ

ವೇತನ: ಇದು ಮಾಹಿತಿ ತಂತ್ರಜ್ಞಾನ ಯುಗ. ಎಲ್ಲ ಕ್ಷೇತ್ರದಲ್ಲಿಯೂ ಕಂಪ್ಯೂಟರ್‌ ಬಳಕೆ ಅನಿವಾರ್ಯ ಹಾಗೂ ಅವುಗಳ ಅಮೂಲ್ಯ ಮಾಹಿತಿಯ ರಕ್ಷಣೆಯೂ ಅತ್ಯಗತ್ಯ. ಹೀಗಾಗಿ ಎಥಿಕಲ್ ಹ್ಯಾಕರ್‌ಗಳಿಗೆ ಭಾರೀ ಬೇಡಿಕೆಯಿದೆ. ಸ್ಥಾನಮಾನಕ್ಕೆ ತಕ್ಕಂತೆ ಸಂಬಳ, ಸಾರಿಗೆಯೂ ಇದೆ. ಪ್ರಾರಂಭದ ಹುದ್ದೆಯನ್ನು ಅಲಂಕರಿಸುವ ಎಥಿಕಲ್‌ ಹ್ಯಾಕರ್‌ ಗಳಿಗೆ ವಾರ್ಷಿಕವಾಗಿ 5 -10 ಲಕ್ಷ ರೂ. ಸಂಬಳ ನೀಡುವುದುಂಟು. ಅನುಭವಿ ಎಥಿಕಲ್ ಹ್ಯಾಕರ್‌ಗಳಿಗೆ 11- 40 ಲಕ್ಷದವರೆಗೂ ಪಾವತಿ ಮಾಡಲಾಗುತ್ತದೆ.

ಅವಕಾಶಗಳು
-ಐಟಿ ಮತ್ತು ಐಟಿಇಎಸ್‌ ಕಂಪನಿಗಳು
-ಅಂತಜಾಲ ಸಂಬಂಧಿತ ಬಿಸಿನೆಸ್‌ ಮತ್ತು ಆರ್ಗನೈಜೇಷನ್‌
-ಫೈನಾನ್ಸಿಯಲ್ ಇನ್ಸಿಟಿಟ್ಯೂಷನ್‌
-ಟೆಲಿಕಮ್ಯುನಿಕೇಷನ್‌ ಸೆಕ್ಟರ್‌
-ಏವಿಯೇಷನ್‌ ಇಂಡಸ್ಟ್ರಿಗಳು
-ಪಂಚತಾರಾ ಹೋಟೆಲುಗಳು
-ಡಿಫೆನ್ಸಿ ಆರ್ಗನೈಜೇಷನ್‌
-ಸೆಕ್ಯೂರಿಟಿ ಏಜೆನ್ಸಿಸ್‌
-ಇಮಿಗ್ರೇಷನ್‌ ಸರ್ವೀಸಸ್‌
-ಸರ್ಕಾರಿ ವಲಯ

ಕಾಲೇಜುಗಳು: ಪದವಿ ಮತ್ತು ಸ್ನಾತಕೋತ್ತರ ಪದವಿ ಕಂಪೂಟರ್‌ ಸೈನ್ಸಿ ಸಂಬಂಧಿತ ಬಿ.ಇ, ಬಿ.ಟೆಕ್‌ ಆಗಿರುವುದರಿಂದ ರಾಜ್ಯದ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾಭ್ಯಾಸ ಮಾಡಬಹುದು. 

ಇನಾರ್ಮೇಷನ್‌ ಸೆಕ್ಯೂರಿಟಿ, ಸೈಬರ್‌ ಸೆಕ್ಯೂರಿಟಿ, ಸೈಬರ್‌ ಪನೀಸಿಸ್‌ ಕೋರ್ಸ್‌ ಮಾಡಲು ಸೂಕ್ತವಾದ ಕೆಲ ಕಾಲೇಜುಗಳು ಇಂತಿವೆ.
-ಇಂಡಿಯನ್‌ ಸ್ಕೂಲ್ ಆಫ್ ಎಥಿಕಲ್ ಹ್ಯಾಕಿಂಗ್‌, ಕೋಲ್ಕತ್ತಾ 
-ಆಪ್ಟೆಕ್‌ ಕಂಪ್ಯೂಟರ್‌ ಎಜುಕೇಷನ್‌, ಜೈಪುರ 
-ಆರಿಜೋನಾ ಇನ್ಫೋಟೆಕ್‌, ಪುಣೆ 
-ಇಂಡಿಯನ್‌ ಇನ್ಸಿಟಿಟ್ಯೂಟ್‌ ಆಫ್ ಹಾರ್ವಡ್‌ ಟೆಕ್ನಾಲಜಿ, ದೆಹಲಿ 
-ಇಂಡಿಯನ್‌ ಇನ್ಸಿಟಿಟ್ಯೂಟ್‌ ಆಫ್ ಇನಾರ್ಮೇಷನ್‌ ಟೆಕ್ನಾಲಜಿ
-ಜೂಮ್ ಟೆಕ್ನಾಲಜೀಸ್‌, ಹೈದ್ರಾಬಾದ್‌

* ಎನ್. ಅನಂತನಾಗ್

Advertisement

Udayavani is now on Telegram. Click here to join our channel and stay updated with the latest news.

Next