Advertisement

ವ್ಯಾಕ್ಸಿನ್‌ ಪಡೆಯದ ಸರ್ಕಾರಿ ಸಿಬ್ಬಂದಿಗೆ ಕಡ್ಡಾಯ ರಜೆ

08:58 PM Sep 11, 2021 | Team Udayavani |

ಚಂಡೀಗಡ: ಒಂದೂ ವ್ಯಾಕ್ಸಿನ್‌ ಪಡೆಯದ ರಾಜ್ಯ ಸರ್ಕಾರಿ ನೌಕರರಿಗೆ ಸೆ.15ರ ಬಳಿಕ ಕಡ್ಡಾಯವಾಗಿ ರಜೆ ಮೇಲೆ ಕಳುಹಿಸಲು ಪಂಜಾಬ್‌ ಸಿಎಂ ಕ್ಯಾ. ಅಮರಿಂದರ್‌ ಸಿಂಗ್‌ ಸೂಚಿಸಿದ್ದಾರೆ.

Advertisement

“ಮೊದಲ ಡೋಸ್‌ ಪಡೆಯದ ಹೊರತು ಕರ್ತವ್ಯಕ್ಕೆ ಮರ ಳುವಂತಿಲ್ಲ’ ಎಂದೂ ಕಟ್ಟಾಜ್ಞೆ ಹೊರಡಿಸಿದ್ದಾರೆ. ಇದಕ್ಕೂ ಮೊದಲು ಅಲ್ಲಿನ ಶಿಕ್ಷಣ ಸಚಿವರು, ಎರಡೂ ಡೋಸ್‌ ಪಡೆದ ಸಿಬ್ಬಂದಿಗೆ ಮಾತ್ರವೇ ಶಾಲಾ- ಕಾಲೇಜುಗಳಿಗೆ ಪ್ರವೇಶ ನೀಡುವಂತೆ ಸೂಚಿಸಿದ್ದರು.

ಮುಂದಿನ ವರ್ಷ ಪಂಜಾಬ್‌ ವಿಧಾನಸಭೆ ಚುನಾವಣೆಗೆ ಅಣಿಯಾಗಿದ್ದು, ಅಷ್ಟರೊಳಗೆ ಎಲ್ಲ ಸರ್ಕಾರಿ ಅಧಿಕಾರಿಗಳು- ಸಿಬ್ಬಂದಿಗೆ ಸಂಪೂರ್ಣ ವ್ಯಾಕ್ಸಿನ್‌ ನೀಡಲು ಸರ್ಕಾರ ಪಣ ತೊಟ್ಟಿದೆ.

ಇದನ್ನೂ ಓದಿ:ಯಮಹಾದಿಂದ ರೇ ZR 125 Fi ಬಿಡುಗಡೆ : ಬೆಲೆ ಎಷ್ಟು ಗೊತ್ತಾ ?

ಏತನ್ಮಧ್ಯೆ, ಕೋವಿಡ್‌ ನಿರ್ಬಂಧಗಳನ್ನು ರಾಜ್ಯ ಸರ್ಕಾರ ಸೆ.15ರಿಂದ 30ರವ ರೆಗೆ ವಿಸ್ತರಿಸಿದೆ. ಒಳಾಂಗಣ ಶುಭ ಸಮಾರಂಭಗಳಿಗೆ ಜನಮಿತಿ 150ರಿಂದ 300ಕ್ಕೆ ಹೆಚ್ಚಿಸಲಾಗಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next