Advertisement

ರಾಜಿ ಸಂಧಾನ: ಹುಲ್ಲಂಬಿ ವ್ಯಾಜ್ಯ ಇತ್ಯರ್ಥ

07:45 AM Mar 12, 2019 | |

ಕಲಘಟಗಿ: ಹುಲ್ಲಂಬಿಯ ಒಂದೇ ಕುಟುಂಬದ 68 ಸದಸ್ಯ ವಾದಿ-ಪ್ರತಿವಾದಿಗಳಿಗೆ ಸಂಬಂಧಿಸಿದ ಆಸ್ತಿ ವ್ಯಾಜ್ಯ ಪಟ್ಟಣದಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ಸುಖಾಂತ್ಯಗೊಂಡಿದೆ.

Advertisement

ಹಿರಿಯ ದಿವಾಣಿ ನ್ಯಾಯಾಧೀಶೆ ಜಿ.ಕೆ. ದಾಕ್ಷಾಯಿಣಿ ಅವರು ಕಕ್ಷಿಗಾರರ ಮನವೊಲಿಸುವುದರೊಂದಿಗೆ ರಾಜಿ ಸಂಧಾನದ ಮೂಲಕ ಪ್ರಕರಣ ಬಗೆಹರಿಸಲಾಯಿತು.

ತಾಲೂಕಿನ ಹುಲ್ಲಂಬಿ ಗ್ರಾಮದ 68 ಜನ ರಕ್ತ ಸಂಬಂಧಿಗಳು ತಮ್ಮ ಹಿರಿಯರ ಆಸ್ತಿಯ ವಾಟಿಗೆ ಸಂಬಂಧಿಸಿ ವ್ಯಾಜ್ಯ ಹೂಡಿದ್ದರು. ಅಜ್ಜ-ಮುತ್ತಜ್ಜರ ಕಾಲದಿಂದ ಪ್ರಕರಣ ನಡೆಯುತ್ತಿತ್ತು. ನ್ಯಾಯಾಧೀಶರು ಮತ್ತು ನ್ಯಾಯವಾದಿಗಳ ಸಲಹೆ-ಸೂಚನೆಗೆ ಕುಟುಂಬ
ಸದಸ್ಯರು ತಮ್ಮ ಸಹಮತಿ ನೀಡಿ ರಾಜಿ ಸಂಧಾನಕ್ಕೆ ಮುಂದಾದರು.

ಅದಾಲತ್‌ನ ರಾಜಿ ಸಂಧಾನದಲ್ಲಿ ಹಿರಿಯ ದಿವಾಣಿ ನ್ಯಾಯಾಲಯದಲ್ಲಿ ದಾಖಲಿತಗೊಂಡು ಪ್ರತಿದಿನವೂ ವಿಚಾರಣೆಗೊಳಪಡುತ್ತಿರುವ 19 ಪ್ರಕರಣಗಳು ಮತ್ತು ವಿವಾದ ಪೂರ್ವ 14 ಪ್ರಕರಣಗಳನ್ನೂ ಇತ್ಯರ್ಥ ಪಡಿಸಲಾಯಿತು. ಅಲ್ಲದೇ ಮೋಟಾರ್‌ ವಾಹನ ಕಾಯ್ದೆಯಡಿ ದಾಖಲಾದ ನಾಲ್ಕು ಪ್ರಕರಣಗಳಿಂದ 4.90 ಲಕ್ಷ ರೂ. ಪರಿಹಾರವನ್ನು ನೊಂದ ಕಕ್ಷಿಗಾರರಿಗೆ
ನೀಡುವಂತೆ ರಾಜಿ ಸಂಧಾನದಲ್ಲಿ ಬಗೆಹರಿಸಲಾಯಿತು.

ಇನ್ನುಳಿದಂತೆ ವಿವಿಧ ವಿವಾದ ಪೂರ್ವ ಪ್ರಕರಣಗಳಲ್ಲಿ ಅರ್ಜಿದಾರರು ಮತ್ತು ಎದುರುದಾರರು ನ್ಯಾಯಾಧೀಶರ ಮತ್ತು ನ್ಯಾಯವಾದಿಗಳ ಸಲಹೆ ಮೇರೆಗೆ ರಾಜಿ ಮಾಡಿಕೊಂಡು ಒಟ್ಟೂ 13 ಲಕ್ಷ ರೂ. ನೀಡುವಂತೆ ಬಗೆಹರಿಸಲಾಯಿತು.

Advertisement

ಕಿರಿಯ ದಿವಾಣಿ ನ್ಯಾಯಾಲಯದಲ್ಲಿ ನ್ಯಾಯಾಧೀಶ ಬಿ.ಗಿರಿಗೌಡ ಅವರು ಒಟ್ಟೂ 88 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಿದರು. ಅವುಗಳಲ್ಲಿ 13 ಮೂಲ ದಾವೆ ಪ್ರಕರಣ, 1 ದರಖಾಸ್ತ ಪ್ರಕರಣ, 5 ಐಪಿಸಿ ಪ್ರಕರಣ, 15 ಎನ್‌ಐ ಆ್ಯಕ್ಟ್
ಪ್ರಕರಣಗಳು, 16 ಕ್ರಿಮಿನಲ್‌ ಮಿಸಲೇನಿಯಸ್‌ ಪ್ರಕರಣಗಳು ಮತ್ತು 37 ಕ್ರಿಮಿನಲ್‌ ಪೆಟಿ ಕೇಸ್‌ಗಳನ್ನು ಇತ್ಯರ್ಥ ಪಡಿಸಲಾಯಿತು. ರಾಜಿ ಸಂಧಾನದಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕ ಎಂ.ಎಂ. ಉತ್ತೂರ ಸೇರಿದಂತೆ ನ್ಯಾಯವಾದಿಗಳು, ನ್ಯಾಯಾಲಯ ಸಿಬ್ಬಂದಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next