Advertisement

ಆವರಣ ಗೋಡೆ ಕುಸಿದು ಬಿದ್ದು ದನದ ಕೊಟ್ಟಿಗೆ ನೆಲಸಮ

05:13 PM Jun 14, 2020 | keerthan |

ಬಂಟ್ವಾಳ: ಧಾರಾಕಾರ ಮಳೆಯ ಪರಿಣಾಮ ರವಿವಾರ ಬೆಳಗ್ಗೆ ಸರಪಾಡಿ ಗ್ರಾಮದ ಬೀಯಪಾದೆ ಎಂಬಲ್ಲಿ ಮನೆಯ ಆವರಣ ಗೋಡೆ ಕುಸಿದು ಬಿದ್ದು, ದನದ ಕೊಟ್ಟಿಗೆ ಸಂಪೂರ್ಣ ನೆಲಸಮಗೊಂಡಿದೆ.

Advertisement

ಸರಪಾಡಿ ಗ್ರಾಮದ ಬೀಯಪಾದೆ ಪಕ್ಕೆರೊಟ್ಟು ನಿವಾಸಿ ವಾಮನ ಪೂಜಾರಿ ಅವರ ಮನೆಯ ಮುಂದಿನ ಆವರಣ ಗೋಡೆ ಕುಸಿದು ದನದ ಕೊಟ್ಟಿಗೆ ನೆಲಸಮಗೊಂಡಿದೆ.

ಆವರಣ ಗೋಡೆ ಎತ್ತರದಲ್ಲಿದ್ದು, ಅದು ಕೊಟ್ಟಿಗೆಯ ಮೇಲೆ ಬಿದ್ದಿದೆ. ಈ ವೇಳೆ ಜಾನುವಾರುಗಳನ್ನು ಹೊರಗೆ ಕಟ್ಟಿದ್ದ ಪರಿಣಾಮ ಅವುಗಳಿಗೆ ಯಾವುದೇ ತೊಂದರೆಯಾಗಿಲ್ಲ. ಆದರೆ ಕೊಟ್ಟಿಗೆ ನೆಲಸಮವಾಗಿದ್ದು, ಲಕ್ಷಾಂತರ ರೂ. ಗಳ ನಷ್ಟವುಂಟಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next