Advertisement

ಪರಿಸರ ರಕ್ಷಣೆಗೆ ಪೂರಕ ಹೆಜ್ಜೆ

11:38 AM Mar 26, 2017 | |

ಉದ್ಯಾನ ನಗರಿಯ ತಾಪಮಾನ ಗರಿಷ್ಠ 36ರಿಂದ 37 ಡಿಗ್ರಿ ಸೆಲ್ಸಿಯಸ್‌ ತಲುಪಿದ ನಂತರವಾದರೂ ಬಿಬಿಎಂಪಿ ಎಚ್ಚೆತ್ತುಕೊಂಡಿರುವುದು ಸ್ವಾಗತಾರ್ಹ. ಶಾಲಾ-ಕಾಲೇಜು ಆವರಣದಲ್ಲಿ ಕೈತೋಟ, ರಸ್ತೆ ಬದಿ ಮರಗಳ ರಕ್ಷಣೆಗೆ ಟ್ರೀ ವಾರ್ಡನ್‌ ನೇಮಕ, ಮರಗಳ ಸಮೀಕ್ಷೆ, ಮೊಬೈಲ್‌ ಆ್ಯಪ್‌ ಮೂಲಕ ನಾಗರಿಕರು ಸಸಿಗಳ ಬೇಡಿಕೆ ಸಲ್ಲಿಸುವುದು ಮತ್ತು ನೆಟ್ಟು ನಾಗರಿಕರ ಸುಪರ್ದಿಗೆ ಪೋಷಣೆಗಾಗಿ ವಹಿಸುವುದು ಮತ್ತಿತರ ಕಾರ್ಯಕ್ರಮಗಳು ಪರಿಸರ ರಕ್ಷಣೆಗೆ ಪೂರಕ ಹೆಜ್ಜೆಗಳಾಗಿವೆ.

Advertisement

ಪರಿಸರ ರಕ್ಷಣೆಗೆ ಸಂಬಂಧಿಸಿದಂತೆ ನಾನು ನೀಡಿದ ವರದಿಯಲ್ಲೂ ಈ ಅಂಶಗಳನ್ನು ಪ್ರಸ್ತಾಪಿಸಿದ್ದೆ. ಶಿಕ್ಷಣ ಸಂಸ್ಥೆಗಳಲ್ಲಿ ಕೈತೋಟದ ಉದ್ದೇಶ ಪರಿಸರದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವುದಾಗಿದೆ. ಈ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಪಾಲಿಕೆ ಅನುಷ್ಠಾನಗೊಳಿಸಬೇಕು. ಇದಕ್ಕೆ ನಾಗರಿಕರೂ ಕೈಜೋಡಿಸಬೇಕು. ಐಷಾರಾಮಿ ಕಾರುಗಳಲ್ಲಿ ಓಡಾಡುವುದೇ ಗುಣಮಟ್ಟದ ಜೀವನ ಅಲ್ಲ ಎಂಬುದನ್ನು ಬೆಂಗಳೂರು ನಗರದ ನಾಗರಿಕರು ಅರ್ಥ ಮಾಡಿಕೊಳ್ಳುವ ಅಗತ್ಯವಿದೆ.
-ಡಾ.ಯಲ್ಲಪ್ಪ ರೆಡ್ಡಿ, ಪರಿಸರ ತಜ್ಞ

Advertisement

Udayavani is now on Telegram. Click here to join our channel and stay updated with the latest news.

Next