Advertisement
ಇದನ್ನೂ ಓದಿ:“ನಾನು ಕಥೆಗಳನ್ನು ಬರೆಯುವುದಿಲ್ಲ, ಅವುಗಳನ್ನು ಕದಿಯುತ್ತೇನೆ.. ಬಾಹುಬಲಿ ಚಿತ್ರಕಥೆಗಾರ
Related Articles
Advertisement
ಅಡಿಡಾಸ್ ವೈರಲ್ ಆಗಿದ್ದೇಕೆ?
ಆನಂದ್ ಮಹೀಂದ್ರ ಅವರು ತಮ್ಮ ಟ್ವೀಟರ್ ಖಾತೆಯಲ್ಲಿ ಬಿಳಿ ಬಣ್ಣದ ಅಡಿಡಾಸ್ ಶೂನ ಫೋಟೊವನ್ನು ಅಪ್ ಲೋಡ್ ಮಾಡಿದ್ದು, ಇದರಲ್ಲಿ ಅಡಿಡಾಸ್ ನ ಲೋಗೋ ಮತ್ತು ಕಂಪನಿಯ ಟ್ರೇಡ್ ಮಾರ್ಕ್ ನ ಮೂರು ಗೆರೆಗಳಿವೆ. ಆದರೆ ನೀವು ಆ ಫೋಟೊವನ್ನು ಸೂಕ್ಷ್ಮವಾಗಿ ಗಮನಿಸಿದರೆ…ಅಲ್ಲಿ ಅಡಿಡಾಸ್ ಬದಲು ಅಜಿತ್ ದಾಸ್ ಎಂಬುದಾಗಿ ಬರೆದಿರುವ ಗುಟ್ಟು ಬಯಲಾಗುತ್ತದೆ!
ಈ ಶೂನ ಕಂಪನಿಯ ಹೆಸರು ಅಜಿತ್ ದಾಸ್.. ಆದರೆ ಇದು ನಕಲಿ ಅಡಿಡಾಸ್. ಈ ಫೋಟೋವನ್ನು ಹಂಚಿಕೊಂಡಿರುವ ಮಹೀಂದ್ರ ಅವರು, ಇದೊಂದು ಸಂಪೂರ್ಣ ತಾರ್ಕಿಕವಾಗಿದೆ ಎಂದಿದ್ದು, ಇದರ ಅರ್ಥ ಆದಿಗೆ ಅಜಿತ್ ಎಂಬ(ಆಡಿಡಾಸ್…ಅಜಿತ್ ದಾಸ್) ಸಹೋದರನಿದ್ದಾನೆ ಎಂದು ಕಾಲೆಳೆದಿದ್ದು, ವಸುದೈವ ಕುಟುಂಬಕಂ?ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.