Advertisement

ಪಶುವೈದ್ಯಕೀಯ ಪಾಲಿ ಕ್ಲಿನಿಕ್‌ ನಿರ್ಮಾಣ ತಿಂಗಳೊಳಗೆ ಕಾಮಗಾರಿ ಪೂರ್ಣ

12:24 AM Jan 21, 2021 | Team Udayavani |

ಉಡುಪಿ: ಜಿಲ್ಲೆಯ ಸುಸಜ್ಜಿತ ಪಶುವೈದ್ಯಕೀಯ ಪಾಲಿ ಕ್ಲಿನಿಕ್‌ ನಿರ್ಮಾಣ ಕಾಮಗಾರಿ ಕೊನೆಯ ಹಂತ ತಲುಪಿದ್ದು, ಮುಂದಿನ ಒಂದು ತಿಂಗಳಿನಲ್ಲಿ ಕಟ್ಟಡ ಲೋಕಾರ್ಪಣೆಗೊಳ್ಳಲಿದೆ.

Advertisement

ನಗರದ ಬೈಲೂರು ಮಹಿಷ ಮರ್ದಿನಿ ದೇಗುಲದ ಸಮೀಪ ಕರ್ನಾಟಕ ಗೃಹ ಮಂಡಳಿ 2.10 ಕೋ.ರೂ. ಮೊತ್ತದಲ್ಲಿ ಪಶು ಆಸ್ಪತ್ರೆ (ಪಾಲಿ ಕ್ಲಿನಿಕ್‌) ನಿರ್ಮಿಸಲಾಗಿದೆ. 2019ರ ಮಾರ್ಚ್‌ ನಲ್ಲಿ ಆಸ್ಪತ್ರೆಯ ಕಾಮಗಾರಿ ಆರಂಭಿಸಿತ್ತು. ಎರಡು ವರ್ಷಗಳೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಿದೆ. ಕಟ್ಟಡವು 8.462 ಚದರಡಿ ಇದೆ. ಇದರಲ್ಲಿ 11 ಕೊಠಡಿಗಳಿವೆ.

ಸ್ಥಳಾವಕಾಶದ ಕೊರತೆ :

ಪ್ರಸ್ತುತ ಬೈಲೂರಿನಲ್ಲಿ ಪಶುಪಾಲನ ಇಲಾಖೆ ಕಚೇರಿ ಸಮೀಪದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪಶುವೈದ್ಯಕೀಯ ಪಾಲಿ ಕ್ಲಿನಿಕ್‌ನಲ್ಲಿ ಸ್ಥಳಾವಕಾಶದ ಕೊರತೆ ಇದೆ.  ಇದು ಸುಮಾರು 50 ವರ್ಷಗಳ ಹಿಂದಿನ ಕಟ್ಟಡವಾಗಿದ್ದು, ಹಂತ-ಹಂತವಾಗಿ  ಇದನ್ನು ಅಭಿವೃದ್ಧಿಪಡಿಸ ಲಾಗಿತ್ತು. ಇದು  ಕೇವಲ ಪಶು ಆಸ್ಪತ್ರೆಯಾಗಿದ್ದು, 5 ವರ್ಷಗಳ ಹಿಂದೆ ಇದನ್ನು ಪಶುಪಾಲಿ ಕ್ಲಿನಿಕ್‌ ಆಗಿ ಘೋಷಿಸಲಾ ಗಿತ್ತು. ಇದೀಗ ಜಾಗದ ಕೊರತೆ  ಸಮಸ್ಯೆಗೆ ಪರಿಹಾರವಾಗಿ ಸುಸಜ್ಜಿತ ಪಾಲಿ ಕ್ಲಿನಿಕ್‌ಗೆ ಬೃಹತ್‌ ಕಟ್ಟಡ ನಿರ್ಮಿಸಲಾಗಿದೆ.

ಏನು ಸೇವೆ ಸಿಗಲಿವೆ? :

Advertisement

ಆಸ್ಪತ್ರೆಯಲ್ಲಿ ದೊಡ್ಡ ಪ್ರಾಣಿಗಳ ಇನ್‌ಪೇಶೆಂಟ್‌ ವಾರ್ಡ್‌, ಒಪಿಡಿ ಸೇವೆ, ಸಣ್ಣ ಪ್ರಾಣಿಗಳ ಇನ್‌ಪೇಶೆಂಟ್‌ ವಾರ್ಡ್‌, ಒಪಿಡಿ ಕೊಠಡಿಗಳಿವೆ. ಡಯಾಗ್ನಾಸ್ಟಿಕ್‌ ಲ್ಯಾಬ್‌, ಎಕ್ಸ್‌ರೇ, ಅಲ್ಟ್ರಾ ಸ್ಕ್ಯಾನಿಂಗ್‌, ಶಸ್ತ್ರಚಿಕಿತ್ಸೆ ಕೊಠಡಿ, ಸರ್ಜನ್‌ ಕೊಠಡಿ, ಮುಖ್ಯ ವೈದ್ಯರ ಕೊಠಡಿ, ಪೋಸ್ಟ್‌ ಮಾರ್ಟಂ, ಐಸೊಲೇಷನ್‌ ಕೊಠಡಿ, ಫಾರ್ಮಸಿ ವಿಭಾಗಗಳಿವೆ. ಕ್ಲಿನಿಕ್‌ಗೆ ತಲಾ ಒಬ್ಬ ಉಪ ನಿರ್ದೇಶಕರ ಹುದ್ದೆ, ತಜ್ಞ ವೈದ್ಯ ಹುದ್ದೆ ಇದೆ. ಪ್ರಸ್ತುತ ಜಿಲ್ಲೆಗೆ 357 ಹುದ್ದೆ ಮಂಜೂರಾಗಿದ್ದು, ಅದರಲ್ಲಿ 92 ಹುದ್ದೆ ಭರ್ತಿಯಾಗಿವೆ.

ಆಧುನಿಕ ಪರಿಕರ :

ಪಾಲಿ ಕ್ಲಿನಿಕ್‌ನಲ್ಲಿ ಅತ್ಯಾಧುನಿಕ ಪರಿಕರಗಳಾದ ಅಲ್ಟ್ರಾ ಸ್ಕ್ಯಾನಿಂಗ್‌, ಎಕ್ಸ್‌ರೇ, ರಕ್ತ ಮಾದರಿ ಪರೀಕ್ಷೆ, ಕ್ಲಿನಿಕಲ್‌ ಲ್ಯಾಬ್‌ಗಳು ಇರಲಿವೆ. ಈಗಾಗಲೇ 5.48 ಲ.ರೂ. ಮೌಲ್ಯದ ಅಲ್ಟ್ರಾ ಸ್ಕ್ಯಾನಿಂಗ್‌ ಯಂತ್ರ ಬಂದಿವೆ. ಇದರ ಮೂಲಕ ಪ್ರಾಣಿಗಳ ಗರ್ಭಾವಸ್ಥೆಯಲ್ಲಿ ಭ್ರೂಣದ ಆರೋಗ್ಯ ಸ್ಥಿತಿಯ ಪರಿಶೀಲನೆ ಹಾಗೂ ಪ್ರಸವದ ಸಮಯ ಸಮಸ್ಯೆಗಳು ಆದರೆ ನಿಖರವಾದ ಕಾರಣ ತಿಳಿಯಲು ಈ ಸ್ಕ್ಯಾನಿಂಗ್‌ ಮಾಡಬಹುದು.

 

ಬೈಲೂರಿನಲ್ಲಿ ಪಾಲಿ ಕ್ಲಿನಿಕ್‌ ಕಟ್ಟಡ 2.10 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ.  ಕಾಮಗಾರಿ ಮುಂದಿನ ಒಂದು ತಿಂಗಳೊಳಗೆ ಪೂರ್ಣಗೊಳ್ಳಲಿವೆ.  ಇಲ್ಲಿ  ಅಧುನಿಕ ತಂತ್ರಜ್ಞಾನದ ವ್ಯವಸ್ಥೆ ಇದೆ. ಮುಂದಿನ ಒಂದು ತಿಂಗಳಿನಲ್ಲಿ ಕಾಮಗಾರಿ ಪೂರ್ಣಗೊಳ್ಳಲಿವೆ.-ಡಾ| ಹರೀಶ್‌ ತಮಣ್‌ಕರ್‌, ಉಪನಿರ್ದೇಶಕ, ಪಶುಪಾಲನಾ ಇಲಾಖೆ ಉಡುಪಿ .

Advertisement

Udayavani is now on Telegram. Click here to join our channel and stay updated with the latest news.

Next