Advertisement

ವಿಮಾನ ನಿಲಾಣ ಕಾಮಗಾರಿ ಶೀಘ್ರ ಮುಗಿಸಿ

10:42 AM Aug 26, 2018 | Team Udayavani |

ಕಲಬುರಗಿ: ಕಲಬುರಗಿ ವಿಮಾನ ನಿಲ್ದಾಣವನ್ನು ಪ್ರಸಕ್ತ ವರ್ಷದ ಅಂತ್ಯದೊಳಗಾಗಿ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಸಿದ್ಧಗೊಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ವಿಮಾನ ನಿಲ್ದಾಣದ ಕಾಮಗಾರಿಗಳನ್ನು ಸಂಪೂರ್ಣವಾಗಿ ಸೆಪ್ಟೆಂಬರ್‌ ತಿಂಗಳ ಅಂತ್ಯದೊಳಗಾಗಿ ಪೂರ್ಣಗೊಳಿಸಬೇಕೆಂದು ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಸುಬೋಧ ಯಾದವ ಅಧಿಕಾರಿಗಳಿಗೆ ತಾಕೀತು ಮಾಡಿದರು.

Advertisement

ಪ್ರಾದೇಶಿಕ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಕಲಬುರಗಿ ವಿಮಾನ ನಿಲ್ದಾಣ ಕಾಮಗಾರಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗುತ್ತಿಗೆದಾರರು ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದ ಎಲ್ಲ ಕಟ್ಟಡ ಕಾಮಗಾರಿಗಳನ್ನು ಸೆ. 10ರೊಳಗಾಗಿ ಪೂರ್ಣಗೊಳಿಸಿ
ಲೋಕೋಪಯೋಗಿ ಇಲಾಖೆಗೆ ಒಪ್ಪಿಸಬೇಕು. ಈ ಕಟ್ಟಡಗಳಲ್ಲಿ ಸೆಪ್ಟೆಂಬರ್‌ ಅಂತ್ಯದೊಳಗಾಗಿ ಅವಶ್ಯಕ ಉಪಕರಣ, ಸಾಮಗ್ರಿಗಳನ್ನು ಅಳವಡಿಸಬೇಕೆಂದು ಗುತ್ತಿಗೆದಾರರಿಗೆ ಸೂಚಿಸಿದರು.

ವಿಮಾನ ನಿಲ್ದಾಣಕ್ಕೆ ವಿದ್ಯುತ್‌ ಒದಗಿಸುವ ಕಾಮಗಾರಿ ಪ್ರಗತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ವಿದ್ಯುತ್‌ ಕಾಮಗಾರಿಯನ್ನು ಆದ್ಯತೆ ಮೇರೆಗೆ ಕೈಗೊಳ್ಳಬೇಕು. ವಿಮಾನ ನಿಲ್ದಾಣಕ್ಕೆ ವಿದ್ಯುತ್‌ ಸಂಪರ್ಕ ದೊರೆತಾಗ ಮಾತ್ರ ಎಲ್ಲ ಕಾಮಗಾರಿ ಹಾಗೂ ಉಪಕರಣಗಳನ್ನು ಪರೀಕ್ಷಿಸಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಸದಾ ಸಂಪರ್ಕದಲ್ಲಿದ್ದು, ಕಾಮಗಾರಿಗಳ ಗುಣಮಟ್ಟ ಕಾಪಾಡುವ ಜೊತೆಗೆ ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲು ಮುತುವರ್ಜಿ ವಹಿಸಬೇಕು ಎಂದರು.

ವಿಮಾನ ನಿಲ್ದಾಣದ ಎಲ್ಲ ಕಾಮಗಾರಿಗಳು ಪೂರ್ಣಗೊಳ್ಳುವ ಹಂತಗಳಲ್ಲಿವೆ. ಪ್ರಗತಿಯಲ್ಲಿರುವ ಹಾಗೂ ಈವರೆಗೆ ಕೈಗೊಂಡಿರುವ ಕಾಮಗಾರಿಗಳ ಬಿಲ್ಲನ್ನು ಸಲ್ಲಿಸಿದಲ್ಲಿ ತಕ್ಷಣ ಪಾವತಿಸಲಾಗುವುದು. ಅನುದಾನದ ಯಾವುದೇ ಕೊರತೆ ಇರುವುದಿಲ್ಲ. ಗುತ್ತಿಗೆದಾರರು ಬೇಗನೇ ಬಿಲ್ಲುಗಳನ್ನು
ಲೋಕೋಪಯೋಗಿ ಇಲಾಖೆಗೆ ಸಲ್ಲಿಸಬೇಕು ಎಂದು ಹೇಳಿದರು.

ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ, ಏಶಿಯನ್‌ ಪೆಸಿಫಿಕ್‌ ಫ್ಲೆ„ಟ್‌ ಟ್ರೇನಿಂಗ್‌ ಅಕಾಡೆಮಿಯ ಮಹಮ್ಮದ್‌ ಫೈಸಲ್‌, ಕ್ಯಾಪ್ಟನ್‌ ಶಾಮ, ಲೋಕೋಪಯೋಗಿ ಇಲಾಖೆ ಮುಖ್ಯ ಇಂಜಿನಿಯರ್‌ ಎನ್‌.ಎಸ್‌. ರಮೇಶ, ಅಧೀಕ್ಷಕ ಇಂಜಿನಿಯರ್‌ ಪ್ರಕಾಶ ಶ್ರೀಹರಿ, ಚೀಫ್‌ ಫೈರ್‌ ಆಫಿಸರ್‌ ಎಫ್‌.ಆರ್‌. ಶರೀಫ್‌ ಸೇರಿದಂತೆ ಇನ್ನಿತರ ಅಧಿಕಾರಿಗಳು ಭಾಗವಹಿಸಿದ್ದರು. 

Advertisement

ಕಲಬುರಗಿ ವಿಮಾನ ನಿಲ್ದಾಣ ಕಾಮಗಾರಿಗೆ 175.57 ಕೋಟಿ ರೂ.ಗಳ ಪರಿಷ್ಕೃತ ಅಂದಾಜು ಪಟ್ಟಿಗೆ ಸರ್ಕಾರ ಅನುಮೋದನೆ ನೀಡಿದೆ. ಎಚ್‌.ಕೆ.ಆರ್‌.ಡಿ.ಬಿ. ನೀಡಿರುವ ತನ್ನ ಪಾಲು 58.51 ಕೋಟಿ ರೂ. ಸೇರಿದಂತೆ ಈವರೆಗೆ 106.87 ಕೋಟಿ ರೂ.ಗಳು ಖರ್ಚಾಗಿವೆ. ಪ್ರಥಮ ಪ್ಯಾಕೇಜಿನಲ್ಲಿರುವ 3.72 ಕಿ.ಮಿ. ರನ್‌ ವೇ, ಎಪ್ರಾನ್‌, ಈಸೋಲೇಶನ್‌ ಬೇ, ಪೆರಿಫೆರಲ್‌ ರೋಡ, ಆವರಣ ಗೋಡೆ, ಡ್ರೇನ್‌ ಕಾಮಗಾರಿಗಳು ಪೂರ್ಣಗೊಂಡಿವೆ. ಎರಡನೇ ಪ್ಯಾಕೇಜಿನಲ್ಲಿರುವ ಪ್ಯಾಸೆಂಜರ್‌ ಟರ್ಮಿನಲ್‌ ಬಿಲ್ಡಿಂಗ್‌, ಏರ್‌ ಟ್ರಾಫಿಕ್‌ ಕಂಟ್ರೋಲ್‌ ಬಿಲ್ಡಿಂಗ್‌, ಕ್ರಾಶ್‌ ಫೈರ್‌
ಆ್ಯಂಡ್‌ ರೆಸ್ಯೂ ಬಿಲ್ಡಿಂಗ್‌, ಎಲೆಕ್ಟ್ರಿಕ್‌ ಸಬ್‌ ಸ್ಟೇಶನ್‌ ಕಟ್ಟಡಗಳ ಕಾಮಗಾರಿಗಳು ಮುಗಿಯುವ ಹಂತದಲ್ಲಿವೆ. ಇನ್ನಿತರೇ ಉಪಕರಣಗಳಾದ ಫೈರ್‌ ಫೈಟಿಂಗ್‌, ಸಿಗ್ನಲ್ಸ್‌, ಸೇಪ್ಟಿ ಇಕ್ಯೂಪ್‌ಮೆಂಟ್‌ ಗಳನ್ನು ಖರೀದಿಸಲಾಗಿದೆ. ಮೂರನೇ ಪ್ಯಾಕೇಜಿನಲ್ಲಿರುವ ಅಟೋಮೆಟಿಕ್‌ ವೆದರ್‌ ಸೆಷನ್‌, ಏರ್‌
ಕಂಡಿಶನಿಂಗ್‌ ಕಾಮಗಾರಿಗಳು ಪೂರ್ಣಗೊಂಡಿವೆ. ಏರ್‌ ಫೀಲ್ಡ್‌ ಲೈಟಿಂಗ್‌ ಸಿಸ್ಟಮ್‌, ಬ್ಯಾಗೇಜ್‌ ಹ್ಯಾಂಡಲಿಂಗ್‌ ಸಿಸ್ಟಮ್‌, ವೈಫೈ ನೆಟವರ್ಕಿಗ್‌ ಕಾಮಗಾರಿಗಳು ಪ್ರಗತಿಯಲ್ಲಿವೆ. ಫರ್ನಿಶಿಂಗ್‌, ಫ್ಲೆ„ಟ್‌ ಇನ್ಪ್ರಾರೆಶನ್‌ ಡಿಸ್‌ಪ್ಲೇ, ಎಕ್ಸ್‌ ರೇ ಮಶೀನ್‌ಗಳನ್ನು ಖರೀದಿಸಲಾಗಿದೆ.  ಅಮೀನ ಮುಕ್ತಾರ, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್‌.

Advertisement

Udayavani is now on Telegram. Click here to join our channel and stay updated with the latest news.

Next