Advertisement

ಕಾಲಮಿತಿಯೊಳಗೆ ರಸ್ತೆ ಕಾಮಗಾರಿ ಪೂರ್ಣಗೊಳಿಸಿ : ಶಾಸಕ ಕೆ.ಜಿ. ಬೋಪಯ್ಯ

10:11 PM Feb 26, 2020 | Sriram |

ಮಡಿಕೇರಿ: ಜಿಲ್ಲೆಯ ಗಡಿ ಭಾಗವಾದ ಕರಿಕೆ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ಅಭಿವೃದ್ಧಿ ಪಡಿಸುತ್ತಿರುವ ರಸ್ತೆ ಕಾಮಗಾರಿಗಳಿಗೆ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಕೆ.ಜಿ.ಬೋಪಯ್ಯ ಅವರು ಮಂಗಳವಾರ ಚಾಲನೆ ನೀಡಿದರು. ಗುಣಮಟ್ಟದ ಕಾಮಗಾರಿಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ತಿಳಿಸಿದರು.

Advertisement

ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ವತಿಯಿಂದ ಮುಖ್ಯಮಂತ್ರಿಗಳ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯಡಿಯಲ್ಲಿ 2019-20ನೇ ಸಾಲಿನ ಹಾನಿಯಾಗಿರುವ ರಸ್ತೆಗಳಾದ ಮಡಿಕೇರಿ ತಾಲೂಕಿನ ಭಾಗಮಂಡಲ-ಕರಿಕೆ ರಸ್ತೆ 13.50 ಕಿ.ಮೀ ನಿಂದ 16 ಕಿ.ಮೀ ವರೆಗೆ 60 ಲಕ್ಷ ರೂ. ವೆಚ್ಚದಲ್ಲಿ 2 ಕಿ.ಮೀ. ಮರು ಡಾಮರೀಕರಣ ಕಾಮಗಾರಿ. 2018-19 ನೇ ಸಾಲಿನ ಅಪೆಂಡಿಕ್ಸ್‌-ಇ ಅಡಿಯಲ್ಲಿ ಮಡಿಕೇರಿ ತಾಲೂಕು ಭಾಗಮಂಡಲ-ಕರಿಕೆ ರಸ್ತೆ ಸರಪಳಿ 28 ಕಿ.ಮೀ ನಿಂದ 30.30 ಕಿ.ಮೀ. ವರೆಗೆ 2 ಕೋಟಿ ರೂ. ವೆಚ್ಚದಲ್ಲಿ 2 ಕಿ.ಮೀ.ಗಳ ರಸ್ತೆ ಸರಪಳಿ ಅಭಿವೃದ್ಧಿ ಕಾಮಗಾರಿ, 2019-20ನೇ ಸಾಲಿನಲ್ಲಿ ಭಾಗಮಂಡಲ-ಕರಿಕೆ ನಡುವೆ 20 ಕಿ.ಮೀ. ನಿಂದ 23 ಕಿ.ಮೀ ವರೆಗೆ 75 ಲಕ್ಷ ರೂ. ವೆಚ್ಚದಲ್ಲಿ 2 ಕಿ.ಮೀ ರಸ್ತೆ ಅಭಿವೃದ್ಧಿ ಕಾಮಗಾರಿಗಳು.

ಮಳೆ ಹಾನಿ ದುರಸ್ತಿಯಡಿ ಜಿಲ್ಲಾ ಮತ್ತು ಇತರೆ ರಸ್ತೆ ಕಾಮಗಾರಿಗಳಾದ ಮಡಿಕೇರಿ ತಾಲೂಕಿನ ಭಾಗಮಂಡಲ-ಕರಿಕೆ ರಸ್ತೆಯ 16 ಕಿ.ಮೀ.ನಿಂದ 18 ಕಿ.ಮೀ ವರೆಗೆ ಮತ್ತು 26 ಕಿ.ಮೀ ನಿಂದ 27 ಕಿ.ಮೀ ವರೆಗೆ 1 ಕೋಟಿ ರೂ. ವೆಚ್ಚದಲ್ಲಿ 3 ಕಿ.ಮೀ ರಸ್ತೆ ಅಭಿವೃದ್ಧಿ ಕಾಮಗಾರಿ, ಭಾಗಮಂಡಲ-ಕರಿಕೆ ರಸ್ತೆ 23 ಕಿ.ಮೀ ನಿಂದ 25 ಕಿ.ಮೀ ವರೆಗೆ ಭಾರಿ ಮಳೆಯಿಂದಾಗಿ ಹಾಳಾಗಿರುವ ಭಾಗಗಳನ್ನು 75 ಲಕ್ಷ ರೂ. ವೆಚ್ಚದಲ್ಲಿ 2 ಕಿ.ಮೀ. ರಸ್ತೆ ದುರಸ್ತಿ ಕಾಮಗಾರಿಗಳಿಗೆ ಶಾಸಕರು ಚಾಲನೆ ನೀಡಿದರು.

ಬಳಿಕ ಮಾತನಾಡಿದ ಶಾಸಕರು 5.10 ಕೋಟಿ ರೂ. ವೆಚ್ಚದಲ್ಲಿ 11.30 ಕಿ.ಮೀ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದ್ದು, ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ತಿಳಿಸಿದರು.

ಕರಿಕೆಯು ಕೊಡಗು-ಕೇರಳ ಗಡಿ ಭಾಗದ ಗ್ರಾಮವಾಗಿದ್ದು ಸಕಾಲದಲ್ಲಿ ಅಭಿವೃದ್ಧಿ ಕಾರ್ಯವನ್ನು ಪೂರ್ಣಗೊಳಿಸುವಂತೆ ಸೂಚಿಸಿದರು.

Advertisement

ಕಾರ್ಯಕ್ರಮದಲ್ಲಿ ಜಿ.ಪಂ.ಸದಸ್ಯರಾದ ಹೊಸಮನೆ ಕವಿತಾ ಪ್ರಭಾಕರ್‌, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಎಚ್‌.ಬಿ. ಶಿವರಾಂ, ಕಿರಿಯ ಅಭಿಯಂತರರಾದ ದೇವರಾಜ್‌, ಕರಿಕೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಬಿಪಿನ್‌ ಗ್ರಾಮಸ್ಥರಾದ ಹೊಸಮನೆ ಹರೀಶ್‌, ಆರ್‌.ಎಂ.ಸಿ. ಸದಸ್ಯರಾದ ಕೆ.ಎ. ನಾರಾಯಣ್‌ ಸೇರಿದಂತೆ ಇತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next