Advertisement
ಹತ್ರಾಸ್‌ನ ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಗೃಹ ಇಲಾಖೆ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 3 ಪುಟಗಳ ಮಾರ್ಗಸೂಚಿಗಳನ್ನು ಕಳುಹಿಸಿದೆ.
ಅತ್ಯಾಚಾರ ಪ್ರಕರಣ ದಾಖಲಾದ ದಿನದಿಂದ ಎರಡು ತಿಂಗಳುಗಳಲ್ಲಿ ತನಿಖೆ ಮುಗಿಸಬೇಕು. ಯಾವುದೇ ಕಾರಣಕ್ಕೂ ಪ್ರಕರಣವನ್ನು ಎಳೆಯುವಂತಿಲ್ಲ. ಸಂತ್ರಸ್ತೆ ಸಾವನ್ನಪ್ಪುವಾಗ ನೀಡಿದ ಹೇಳಿಕೆಯನ್ನು ಸಾಕ್ಷ éವಾಗಿ ಪರಿಗಣಿಸಲೇಬೇಕು. ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ನೀಡಿಲ್ಲ ಎಂಬ ಕಾರಣಕ್ಕೋ ಅಥವಾ ಹೇಳಿಕೆ ದಾಖಲಿಸುವಾಗ ಸಾಕ್ಷ್ಯಗಳು ಇರಲಿಲ್ಲ ಎಂಬ ಕಾರಣಕ್ಕೆ ಸಂತ್ರಸ್ತೆಯ ಹೇಳಿಕೆಯನ್ನು ತಿರಸ್ಕರಿಸಬಾರದು. ಇದನ್ನು ಪ್ರಮುಖ ಸಾಕ್ಷಿಯಾಗಿ ಪರಿಗಣಿಸಬೇಕು ಎಂದಿದೆ. ಝೀರೋ ಎಫ್ಐಆರ್
ಪೊಲೀಸ್ ಠಾಣೆಗಳ ಸರಹದ್ದು ಕುರಿತಂತೆ ಇಂದಿಗೂ ವಿವಾದಗಳಿವೆ. ಆದರೆ ಅತ್ಯಾಚಾರ ಪ್ರಕರಣದಲ್ಲಿ ಈ ಸರಹದ್ದಿನ ಗೋಜಿಗೇ ಹೋಗಕೂಡದು. ಇಂಥ ಪ್ರಕರಣ ತಮ್ಮ ಠಾಣೆಯ ವ್ಯಾಪ್ತಿಯಿಂದ ಹೊರಗೆ ನಡೆದಿದ್ದರೂ ಪೊಲೀಸರು ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ಇದಕ್ಕಾಗಿ “ಝೀರೋ ಎಫ್ಐಆರ್’ ದಾಖಲಿಸಿಕೊಳ್ಳಬೇಕು. ಒಂದು ವೇಳೆ ಕ್ರಮ ತೆಗೆದುಕೊಳ್ಳದೇ ಹೋದರೆ ಸಂತ್ರಸ್ತರಿಗೆ ನ್ಯಾಯ ನೀಡಿದಂತಾಗುವುದಿಲ್ಲ ಎಂದು ಹೇಳಿದೆ.
Related Articles
ಲೈಂಗಿಕ ಅಪರಾಧಗಳ ತನಿಖಾ ನಿಗಾ ವ್ಯವಸ್ಥೆ (ಐಟಿಎಸ್‌ಎಸ್‌ಒ) ಅನ್ನು ಶುರು ಮಾಡಲಾಗಿದ್ದು, ರಾಜ್ಯ ಸರಕಾರಗಳ ವ್ಯಾಪ್ತಿಗೆ ನೀಡಲಾಗಿದೆ. ಇದರ ಮೂಲಕ ಲೈಂಗಿಕ ಪ್ರಕರಣಗಳಲ್ಲೆ ಮತ್ತೆ ಮತ್ತೆ ಅಪರಾಧವೆಸಗುವಂಥವರನ್ನು ಗುರುತಿಸಲು ಸಾಧ್ಯವಾಗಲಿದೆ. ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು, ಮಹಿಳೆಯರ ದೌರ್ಜನ್ಯವನ್ನು ತಡೆಗಟ್ಟುವ ವಿಚಾರದಲ್ಲಿ ಇರುವ ಎಲ್ಲ ಕಾನೂನುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು, ಸರಿಯಾದ ಸಮಯಕ್ಕೆ ಚಾರ್ಜ್‌ಶೀಟ್ ಹಾಕಿ, ನೊಂದವರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಹೇಳಿದೆ.
Advertisement
ಅಧಿಕಾರಿಗಳ ವಿರುದ್ಧ ಕ್ರಮಮಹಿಳೆಯರ ಮೇಲಿನ ದೌರ್ಜನ್ಯ ಸಂಬಂಧ ಇಂದಿಗೂ ದೇಶದ ಸಿಆರ್‌ಪಿಸಿಯಲ್ಲಿ ಅತ್ಯಂತ ಕಠಿನ ಕಾನೂನುಗಳಿವೆ. ಆದರೆ ಸರಿಯಾಗಿ ಪಾಲನೆಯಾಗುತ್ತಿಲ್ಲ. ಇದನ್ನು ಮನಗಂಡಿರುವ ಕೇಂದ್ರ ಸರಕಾರ, ಇನ್ನು ಮುಂದೆ ಮಹಿಳೆಯರ ರಕ್ಷಣೆ ಕುರಿತಂತೆ ಪೊಲೀಸರ ವೈಫಲ್ಯ ಕಂಡು ಬಂದರೆ, ಅಂಥ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ, ಕಠಿನ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದೂ ತಿಳಿಸಿದೆ.