ಚಾಮರಾಜನಗರ: ಚಾಮರಾಜನಗರ ಲೋಕ ಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸುವ ಚಟುವಟಿಕೆ ಮುಗಿಯುತ್ತಿದ್ದಂತೆ ಅಭ್ಯರ್ಥಿಗಳು ಕ್ಷೇತ್ರ ವ್ಯಾಪ್ತಿ ಗ್ರಾಮಗಳಿಗೆ ತೆರಳಿ ಪ್ರಚಾರ ಆರಂಭಿಸಿದ್ದಾರೆ. ನಾಮಪತ್ರ ಸಲ್ಲಿಸಲು ಮಂಗಳವಾರ ಕಡೆಯ ದಿನವಾಗಿತ್ತು. ನಾಮಪತ್ರ ಸಲ್ಲಿಸಿ ಬಂದ ಬಳಿಕ ನಗರದಲ್ಲೇ ಬಿಜೆಪಿ ಸಾರ್ವಜನಿಕ ಸಭೆಯೊಂದನ್ನು ನಡೆಸಿತು. ಅಭ್ಯರ್ಥಿ ಶ್ರೀನಿವಾಸಪ್ರಸಾದ್ ಸಭೆಯಲ್ಲಿ ಭಾಗವಹಿಸಿ ಪ್ರಚಾರ ನಡೆಸಿದರು.
ಪಕ್ಷಗಳಲ್ಲಿ ಇದುವರೆಗೆ ಕಾರ್ಯಕರ್ತರ ಸಭೆ, ಪಕ್ಷದ ಮುಖಂಡರ ಸಭೆಗಳು ನಡೆದಿದ್ದವು. ಈಗ ಹಳ್ಳಿಗಳತ್ತ ಅಭ್ಯರ್ಥಿಗಳ ಚಿತ್ತ ಹರಿದಿದೆ. ಕಾಂಗ್ರೆಸ್ ಅಭ್ಯರ್ಥಿ, ಸಂಸದ ಆರ್. ಧ್ರುವನಾರಾಯಣ ಅವರು ಬುಧವಾರ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಕೇಂದ್ರ ಸ್ಥಾನಗಳಲ್ಲಿ ಪ್ರಚಾರ ಸಭೆ ನಡೆಸಿದರು. ಹರವೆ, ಬೇಗೂರು, ಕಬ್ಬಳ್ಳಿ, ಜಿಲ್ಲಾ ಪಂಚಾಯತಿ ಕ್ಷೇತ್ರಗಳಲ್ಲಿ ಪ್ರಚಾರ ಕಾರ್ಯ ನಡೆಸಲಾಯಿತು.
ಪ್ರಚಾರ ಸಭೆಯಲ್ಲಿ ಅಭ್ಯರ್ಥಿ ಧ್ರುವನಾರಾಯಣ ಅವರೊಂದಿಗೆ ವರುಣಾ ಶಾಸಕ ಎಸ್. ಯತೀಂದ್ರ, ಯುವ ಮುಖಂಡ ಗಣೇಶ್ ಪ್ರಸಾದ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ ಮಾಜಿ ಸಂಸದ ಸಿದ್ದರಾಜು, ಎಚ್.ಸಿ. ಬಸವರಾಜು ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ ಮತ್ತಿತರರು ಭಾಗವಹಿಸಿದ್ದರು.
ಇನ್ನು ಬಿಎಸ್‌ಪಿ ಅಭ್ಯರ್ಥಿ ಡಾ. ಶಿವಕುಮಾರ್ ಮತ್ತು ಶಾಸಕ ಎನ್. ಮಹೇಶ್ ಬುಧವಾರ ವಿವಿಧ ಗ್ರಾಮಗಳಿಗೆ ತೆರಳಿ ಮುಖಂಡರೊಡನೆ ಮಾತುಕತೆ ನಡೆಸಿದರು. ಚಾಮರಾಜನಗರ, ಹೊಂಗನೂರು, ನಾಗವಳ್ಳಿ ಗ್ರಾಮಗಳಿಗೆ ತೆರಳಿ ಪಕ್ಷದ ಮುಖಂಡ ರನ್ನು ಭೇಟಿ ಮಾಡಿದರು. ಮತಗಳಿಕೆಗಾಗಿ ಮುಖಂಡರ ಸಹಕಾರ ಬಯಸಿದರು.
ಧ್ರುವನಾರಾಯಣ ಗುರುವಾರ ಎಚ್.ಡಿ. ಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಲಿದ್ದಾರೆ. ಬುಧವಾರ ಬಿಜೆಪಿ ಅಭ್ಯರ್ಥಿ ಪ್ರಸಾದ್ ಹಾಗೂ ಮುಖಂಡರು ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿರಲಿಲ್ಲ. ಇನ್ನೆರಡು ದಿನದಲ್ಲಿ ಪ್ರಚಾರ ಆರಂಭಿಸಲಾಗುವುದು. ವೇಳಾಪಟ್ಟಿ ಸಿದ್ಧವಾಗುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಆರ್. ಮಲ್ಲಿಕಾರ್ಜುನಪ್ಪ ತಿಳಿಸಿದರು.
ಉರಿ ಬಿಸಿಲು, ಧಗೆ
ಅಭ್ಯರ್ಥಿಗಳ ಪ್ರಚಾರ ಕಾರ್ಯಕ್ಕೆ ಉರಿಬಿಸಲು ಸವಾಲೊಡ್ಡಿದೆ. ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ ಪ್ರಸ್ತುತ ದಿನಗಳಲ್ಲಿ 37 ಡಿಗ್ರಿ
ಅಭ್ಯರ್ಥಿಗಳ ಪ್ರಚಾರ ಕಾರ್ಯಕ್ಕೆ ಉರಿಬಿಸಲು ಸವಾಲೊಡ್ಡಿದೆ. ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ ಪ್ರಸ್ತುತ ದಿನಗಳಲ್ಲಿ 37 ಡಿಗ್ರಿ
ಸೆಲ್ಸಿಯಸ್ ತಲುಪಿದೆ. ಹೀಗಾಗಿ ಬೆಳಿಗ್ಗೆ 10 ಗಂಟೆಯ ವೇಳೆಗೇ ಪ್ರಖರ ಬಿಸಿಲು ಕಾಣಿಸಿ ಕೊಳ್ಳುತ್ತದೆ. ಮಧ್ಯಾಹ್ನ 12ರಿಂದ ಸಂಜೆ 4 ರವರೆಗೂ ನೆತ್ತಿ ಸುಡುವ ತೀವ್ರ ಬಿಸಿಲು ರಾಚುತ್ತದೆ. ವಾತಾವರಣದಲ್ಲಿ ಉಷ್ಣಾಂಶ ಏರಿಕೆಯಾಗುತ್ತದೆ. ಈ ಬಿಸಿಲ ಶಾಖ ಹಾಗೂ ಧಗೆ ಪಕ್ಷಗಳ ಅಭ್ಯರ್ಥಿಗಳು, ಕಾರ್ಯಕರ್ತರ ಬೆವರಿಳಿಸುತ್ತಿದೆ. ಸಭೆಗಳಲ್ಲಿ ಶಾಮಿಯಾನ
ಹಾಕಿದರೂ ಬಿಸಿಲಿನ ತಾಪಕ್ಕೆ ಅವು ಸಹ ಬಿಸಿಯಾಗಿ ಸೆಕೆಯ ಪ್ರತಾಪ ತೋರಿಸು
ಕೆ.ಎಸ್. ಬನಶಂಕರ ಆರಾಧ್ಯ